ಸಂಪನ್ಮೂಲ ರಕ್ಷಣೆಗಾಗಿ ಪ್ರತಿಯೊಬ್ಬರೂ ಸೈನಿಕರಾಗೋಣ: ಶ್ರಿÃಶಾನಂದ

0
20

 

ಕನ್ನಡಮ್ಮ ಸುದ್ದಿ-ಧಾರವಾಡ: ಸೈನಿಕರು ರಾಷ್ಟçದ ಗಡಿ ರಕ್ಷಣೆಗಾಗಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಾರೆ. ಭಾರತೀಯರಾದ ನಾವು ರಾಷ್ಟçದ ರಕ್ಷಣೆ, ಸ್ವಚ್ಛತೆ, ಸಂಪನ್ಮೂಲಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ನಾಗರಿಕ ವಲಯದ ಸೈನಿಕರಾಗೋಣ ಎಂದು ರಾಜ್ಯ ಉಚ್ಛ ನ್ಯಾಯಾಲಯದ ರಜಿಸ್ಟಾçರ್ ಜನರಲ್ ವಿ. ಶ್ರಿÃಶಾನಂದ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದಲ್ಲಿ ಕಾರ್ಗಿಲ್ ವಿಜಯೋತ್ಸವದ ೨೦ನೇ ವರ್ಷಾಚರಣೆ ಅಂಗವಾಗಿ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿದರು. ಯಾವುದೇ ರೀತಿಯ ಜಾತಿ ಧರ್ಮದ ಭೇದವಿಲ್ಲದೆ ನಮ್ಮ ಸಹೋದರರು ಪ್ರತಿನಿತ್ಯ ರಾಷ್ಟçದ ಗಡಿ ಕಾಯುತ್ತಿದ್ದಾರೆ. ಪ್ರಾಣದ ಹಂಗು ತೊರೆದು ಅವರು ದೇಶದ ರಕ್ಷಣೆ ಮಾಡುತ್ತಿದ್ದಾರೆ. ರಾಷ್ಟçದ ಒಳಭಾಗದಲ್ಲಿ ನೆಲೆಸಿರುವ ನಾವು ನಿಸ್ವಾರ್ಥದಿಂದ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ದ್ವೆÃಷ, ಅಸೂಯೆ, ವೈಮನಸ್ಸುಗಳಿಂದ ಸಮಾಜದಲ್ಲಿ ಉಂಟಾಗಿರುವ ಗಡಿಗಳನ್ನು ಮೀರಿ ಭಾವೈಕ್ಯತೆಯನ್ನು ಉಳಿಸಿ ಬೆಳೆಸಬೇಕು. ಮಕ್ಕಳಲ್ಲಿ ದೇಶಭಕ್ತಿ, ಸ್ವಾತಂತ್ರö್ಯ, ರಾಷ್ಟç ರಕ್ಷಣೆ, ಶೌರ್ಯ, ಸಾಹಸ ಭಾವನೆಗಳನ್ನು ಬೆಳೆಸಿ ಅಭಿಮಾನದಿಂದ ಬದುಕುವುದನ್ನು ಕಲಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷಿö್ಮ ಕೆಂಪೇಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಸ್.ರವೀಂದ್ರನ್, ಮಹಾನಗರ ಡಿಸಿಪಿ ನಾಗೇಶ್.ಡಿ.ಎಲ್., ಅಪರಾಧ ವಿಭಾಗದ ಡಿವೈಎಸ್‌ಪಿ ಗುರು ಮತ್ತೂರ, ಸುಬೇದಾರ ಭರತ್‌ರಾಮ್ ವೇದಿಕೆಯಲ್ಲಿದ್ದರು. ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾರ್ಜುನ ಚಿಕ್ಕಮಠ ನಿರೂಪಿಸಿ, ವಂದಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮ ವೀರಯೋಧರ ಕುಟುಂಬದ ಸದಸ್ಯರು ಹಾಗೂ ಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಾಜಿ ಸೈನಿಕರು ಪಾಲ್ಗೊಂಡಿದ್ದರು.

loading...