ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಹೊಸ ಕಳೆ

0
28

ಹೆಚ್ಚಾದ ಪ್ರಯಾಣಿಕರ ಸಂಖ್ಯೆ | ವಿಮಾನ ಸೇವೆಗೆ ಉತ್ತಮ ಸ್ಪಂಧನೆ
ಮಾಲತೇಶ ಮಟಿಗೇರ
ಬೆಳಗಾವಿ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟದಿಂದ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು, ಆಶಾದಾಯಕ ಬೆಳವಣಿಗೆಯಾಗಿದೆ.


೨೦೧೮ರ ಜೂನ್ ತಿಂಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಏಕಾಏಕಿ ಸ್ಥಗಿತಗೊಂಡು, ಇಲ್ಲಿನ ಹಾರಾಟ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಂಡಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಬೆಳಗಾವಿ ಜನತೆ ಹಾಗೂ ಜನಪ್ರತಿನಿಧಿಗಳ ನಿರಂತರ ಹೋರಾಟ ಫಲವಾಗಿ ‘ಉಡಾನ್’ ಯೋಜನೆಯಡಿ ೨೦೧೯ರ ಜನವರಿಯಲ್ಲಿ ಬೆಂಗಳೂರಿಗೆ ವಿಮಾನಗಳ ಹಾರಾಟ ಪುನಾರಂಭಗೊಂಡಿತು. ನಂತರ ಮೇ ತಿಂಗಳಿನಿಂದ ಪುಣೆ, ಅಹಮದಾಬಾದ್, ಹೈದ್ರಾಬಾದ್ ಮತ್ತು ಇತರೆ ಕಡೆಗೆ ವಿಮಾನಗಳ ಹಾರಾಟ ಚಾಲನೆ ಪಡೆದು ಹೊಸ ಭರವಸೆ ಮೂಡಿಸಿತ್ತು.
ಆದರೆ ಈಗ ವಿಮಾನ ನಿಲ್ದಾಣದಲ್ಲಿ ಅನೇಕ ವಿಮಾನಗಳು ಹಾರಾಟ ಪ್ರಾರಂಭಿಸಿದ ಹಿನ್ನಲೆ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ಬಂದಿದ್ದು, ಪ್ರಯಾಣಿಕರು ಬೆಳಗಾವಿಯ ಜನತೆ ವಿಮಾನ ಸೇವೆಯನ್ನು ಅರ್ಥ ಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಶೈಕ್ಷಣಿಕ ಆರೋಗ್ಯ, ಕೈಗಾರಿಕೆಯಲ್ಲಿ ದೇಶಾದ್ಯಂತ ಗಮನ ಸೆಳೆದಿದೆ.
ವಿಮಾನ ಹಾರಾಟದ ಬೇಡಿಕೆ: ಕಾಲದಿಂದ ಕಾಲಕ್ಕೆ ಪ್ರಯಾಣಿಕರ ಗಣನೀಯ ಹೆಚ್ಚಾಗುತ್ತಿದೆ. ಅಲ್ಲದೆ ಮೈಸೂರು ,ಕಲಬುರ್ಗಿ ಜೈಪುರ ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ವಿಮಾನ ಹಾರಾಟ ಬೇಡಿಕೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಅಷ್ಟೆÃ ಅಲ್ಲದೆ ಈ ಹಿಂದೆ ಮೈಸೂರ ಲೋಕಸಭಾ ಕ್ಷೆÃತ್ರದಿಂದ ಸಂಸತ್‌ಗೆ ಆಯ್ಕೆಯಾಗಿರುವ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಅಕೌಂಟನಲ್ಲಿ ಮೈಸೂರು-ಬೆಳಗಾವಿ, ಮೈಸೂರು– ಚೈನ್ಯ ವಿಮಾನ ಸೇವೆ ಅಕ್ಟೊÃಂಬರ ೨೭ರಿಂದ ಆರಂಭವಾಗಲಿದೆ ಎಂದು ಟ್ವಿಟ್ ಮಾಡಿದ್ದಾರೆ. ಇದರಿಂದಾಗಿ ಬೆಳಗಾವಿ ಜನತೆ ಆರಂಭಕ್ಕಾಗಿ ಕಾಯುತ್ತಿದ್ದಾರೆ. ಅಲ್ಲದೆ ಮುಂಬಯಿಗೂ ಹೆಚ್ಚು ಆಸನಗಳ ವಿಮಾನ ಹಾರಾಟಕ್ಕೆ ಉದ್ಯಮಿಗಳು ಜನಪ್ರತಿನಿಧಿ ಮತ್ತು ಸಚಿವರ ಮೇಲೆ ಒತ್ತಡ ಹೇರಿದ್ದಾರೆ.
ಉಡಾನ್ ಯೋಜನೆ ಯಶಸ್ವಿ: ಎರಡನೇ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆ ಹೆಚ್ಚು ಉದ್ಯಮಿಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಪ್ರತಿ ದಿನಕ್ಕೆ ೫೦೦ ರಿಂದ ೬೦೦ ಜನ ಪ್ರಯಾಣಿಕರು ವಿಮಾನ ಸೇವೆ ಪಡೆಯುತ್ತಿದ್ದಾರೆ. ಅಲ್ಲದೆ ಬೆಳಗಾವಿಯಿಂದ ಅಥವಾ ಬೆಳಗಾವಿಗೆ ಕಾರ್ಯಾಚರಣೆ ನಡೆಸುವ ಬಹುತೇಕ ವಿಮಾನಗಳಲ್ಲಿ ಶೇ.೭೦ಕ್ಕಿಂತ ಹೆಚ್ಚು ಪ್ರಯಾಣಿಕರು ಇರುತ್ತಾರೆ. ಹೀಗಾಗಿ ಇಲ್ಲಿ ಉಡಾನ್ ಯೋಜನೆ ಯಶಸ್ವಿಯಾಗಿದೆ. ಹಂಚಿಕೆ ಆಗಿರುವ ಉಳಿದ ಮಾರ್ಗಗಳಲ್ಲೂ ಶೀಘ್ರ ವಿಮಾನಗಳ ಹಾರಾಟ ಆರಂಭವಾಗಬೇಕು ಎಂಬುವುದು ಇಲ್ಲಿನ ಜನರ ಆಸೆಯವಾಗಿದೆ.
ಒಟ್ಟಿನಲ್ಲಿ ಬೆಳಗಾವಿ ವಿಮಾನ ಸೇವೆ ಬೇರೆ ಜಿಲ್ಲೆಗೆ ಸ್ಥಳಾಂತರದ ಭಯ ಅನುಭವಿಸುತ್ತಿದ್ದ ಜನತೆಗೆ ಮತ್ತೊಷ್ಟು ಸೇವೆ ದೊರೆಯುತ್ತಿರುವುದು ಸಂತೋಷ ತಂದಿದೆ.
=====ಬಾಕ್ಸ್========
ವಿಮಾನಗಳ ವೇಳಾಪಟ್ಟಿ
ಬೆಂಗಳೂರ
* ಬೆಂಗಳೂರು-ಬೆಳಗಾವಿ ಬೆ. ೭.೩೫ ಬೆ.೮.೪೦ (ಸೋಮ, ಬುಧ, ಗುರು, ಶುಕ್ರ, ಶನಿವಾರ)
* ಬೆಳಗಾವಿ-ಬೆಂಗಳೂರು ಮ.೧.೫೦ ಮ. ೨.೫೫ (ಸೋಮ, ಬುಧ, ಗುರು, ಶುಕ್ರ, ಶನಿವಾರ)
* ಬೆಂಗಳೂರ-ಬೆಳಗಾವಿ ಮ.೩.೧೦ ಸ.೪.೧೫ (ಭಾನುವಾರ, ಮಂಗಳವಾರ ಹೊರತುಪಡಿಸಿ)
* ಬೆಳಗಾವಿ -ಬೆಂಗಳೂರ ರಾ.೮.೪೦ ೯.೪೫ (ಭಾನುವಾರ, ಮಂಗಳವಾರ ಹೊರತುಪಡಿಸಿ)

ಅಹಮದಾಬಾದ್
* ಬೆಳಗಾವಿ-ಅಹಮದಾಬಾದ್ ಬೆ.೯.೨೦ ಬೆ. ೧೧.೦೫ (ಭಾನುವಾರ, ಮಂಗಳವಾರ ಹೊರತುಪಡಿಸಿ)
* ಬೆಳಗಾವಿ- ಅಹಮದಾಬಾದ್ ಸ.೪.೪೦ ಸ.೬.೧೫ (ಭಾನುವಾರ, ಮಂಗಳವಾರ ಹೊರತುಪಡಿಸಿ)
* ಅಹಮದಾಬಾದ್-ಬೆಳಗಾವಿ ಬೆ.೧೧.೨೫ ಮ.೧.೦೦ (ಭಾನುವಾರ, ಮಂಗಳವಾರ ಹೊರತುಪಡಿಸಿ)
* ಅಹಮದಾಬಾದ್-ಬೆಳಗಾವಿ ಸಂ. ೬.೪೫ ರಾ.೮.೨೦ (ಭಾನುವಾರ, ಮಂಗಳವಾರ ಹೊರತುಪಡಿಸಿ)

ಸ್ಪೆöÊಸ್ ಜೆಟ್
* ಬೆಳಗಾವಿ-ಹೈದ್ರಾಬಾದ್ ಸಂ. ೫.೫೫ ರಾ. ೭.೧೦ (ನಿತ್ಯ)
* ಹೈದ್ರಾಬಾದ್-ಬೆಳಗಾವಿ ಸಂ. ೪.೧೦ ಸಂ. ೫.೩೫ (ನಿತ್ಯ)
* ಬೆಳಗಾವಿ – ಬೆಂಗಳೂರ ಸಂ.೬.೨೫ ಸಂ.೭.೨೫ ( ಬುಧವಾರ ಹೊರತು ಪಡಿಸಿ)
* ಬೆಂಗಳೂರ – ಬೆಳಗಾವಿ ಸಂ.೪.೪೫ ಸಂ.೬.೦೫ ( ಬುಧವಾರ ಹೊರತು ಪಡಿಸಿ)
* ಬೆಳಗಾವಿ- ಬೆಂಗಳೂರ ಸಂ.೪.೨೫ ಸಂ.೫.೪೫ (ನಿತ್ಯ)
* ಬೆಂಗಳೂರ – ಬೆಳಗಾವಿ ಬೆ.೧೦.೪೫ ಮ.೧೨.೦೫ (ನಿತ್ಯ)
* ಬೆಳಗಾವಿ-ಮುಂಬಯಿ ಮ.೧೨.೨೫ ಮ. ೧.೪೦ (ನಿತ್ಯ)
* ಮುಂಬಯಿ-ಬೆಳಗಾವಿ ಮ.೨.೫೦ ಸಂ. ೪.೦೫ (ನಿತ್ಯ)

ಅಲೈನ್ಸ್ ಏರ್
* ಬೆಳಗಾವಿ-ಪುಣೆ ಸಂ. ೪.೦೫ ಸಂ. ೫.೨೦ (ಸೋಮ, ಬುಧ, ಗುರು, ಶುಕ್ರ, ಶನಿ, ಭಾನು)
* ಪುಣೆ-ಬೆಳಗಾವಿ ಸಂ. ೫.೪೫ ರಾ. ೭.೦೫ (ಸೋಮ, ಬುಧ, ಗುರು, ಶುಕ್ರ, ಶನಿ, ಭಾನು)
* ಬೆಳಗಾವಿ- ಬೆಂಗಳೂರ ಸಂ.೭.೩೦ ರಾ.೯.೧೦ (ಸೋಮ, ಬುಧ, ಗುರು, ಶುಕ್ರ, ಶನಿ, ಭಾನು)
* ಬೆಂಗಳೂರ -ಬೆಳಗಾವಿ ಮ.೨.೧೫ ಮ೩.೪೦ (ಸೋಮ, ಬುಧ, ಗುರು, ಶುಕ್ರ, ಶನಿ, ಭಾನು)
* ಬೆಂಗಳೂರ – ಬೆಳಗಾವಿ ಮ.೩.೪೦ ಸಂ.೫.೦೫ ( ಮಂಗಳವಾರ ಮಾತ್ರ)
* ಬೆಳಗಾವಿ -ಬೆಂಗಳೂರ ಸಂ.೫.೩೦ ರಾ.೭.೧೦ ( ಮಂಗಳವಾರ ಮಾತ್ರ)

=========ಬಾಕ್ಸ್==========
ಸಾಂಬ್ರಾ ವಿಮಾನ ನಿಲ್ದಾಣದಿಂದ ಉತ್ತಮ ಸೇವೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಶೀಘ್ರ ಪ್ರಯಾಣಿಕರ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಮಾನ ಸೇವೆ ನೀಡಲಾಗುತ್ತದೆ.
ರಾಜೇಶಕುಮಾರ್ ಮೌರ್ಯ
ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ

loading...