ಸಿನ್ಸಿನಾಟಿ ಓಪನ್‌: ಶರಪೋವಾ, ವಿನಸ್‌ಗೆ ವೈಲ್ಡ್‌ಕಾರ್ಡ್‌

0
11

ವಾಷಿಂಗ್ಟನ್‌:- ಮಾಜಿ ವಿಶ್ವದ ಅಗ್ರ ಟೆನಿಸ್‌ ಆಟಗಾರ್ತಿಯರಾದ ರಷ್ಯಾದ ಮರಿಯಾ ಶರಪೋವಾ ಹಾಗೂ ಅಮೆರಿಕದ ವಿನಸ್‌ ವಿಲಿಯಮ್ಸ್‌ ಅವರಿಗೆ ಸಿನ್ಸಿನಾಟಿ ಓಪನ್‌ ಟೂರ್ನಿಗೆ ವೈಲ್ಡ್‌ಕಾರ್ಡ್‌ ದೊರೆತಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಆಗಸ್ಟ್‌ 10 ರಿಂದ 18ರವರೆಗೆ ಟೂರ್ನಿಯಲ್ಲಿ ಇವರಿಬ್ಬರು ಪ್ರಧಾನ ಸುತ್ತಿನಲ್ಲಿ ತಮ್ಮ ಅಭಿಯಾನ ಶುರು ಮಾಡಲಿದ್ದಾರೆ. ಟೆನಿಸ್‌ ಇತಿಹಾಸದಲ್ಲಿ ಮರಿಯಾ ಹಾಗೂ ಶರಪೋವಾ ಅವರು ಅದ್ಭುತ ಆಟಗಾರ್ತಿಯರು ಎಂದು ಸಿನ್ಸಿನಾಟಿ ಓಪನ್‌ ಟೂರ್ನಿ ನಿರ್ದೇಶಕ ಆ್ಯಂಡ್ರೆ ಸಿಲ್ವಾ ತಿಳಿಸಿದ್ದಾರೆ.
ಶರಪೋವಾ ಅವರು ವೃತ್ತಿ ಜೀವನದಲ್ಲಿ 36 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರಲ್ಲಿ ಆರು ಗ್ರ್ಯಾನ್‌ ಸ್ಲ್ಯಾಮ್‌ ಒಳಗೊಂಡಿದೆ. 15 ವರ್ಷಗಳ ಹಿಂದೆ ಶರಪೋವಾ 17ನೇ ವಯಸ್ಸಿನಲ್ಲಿ ವಿಂಬಲ್ಡನ್‌ ಗೆದ್ದಿದ್ದರು. ಅತಿ ಚಿಕ್ಕ ವಯಸ್ಸಿನಲ್ಲಿ ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದು ಅತಿ ಕಿರಿಯ ಆಟಗಾರ್ತಿ ಎಂಬ ದಾಖಲೆ ಮಾಡಿದ್ದರು. 12 ತಿಂಗಳ ಕಾಲ ವಿಶ್ವದ ನಂ.1 ಆಟಗಾರ್ತಿಯಾಗಿ ಮುಂದುವರಿದಿದ್ದರು.
ಇನ್ನು, ಅಮೆರಿಕ ವಿನಸ್‌ ವಿಲಿಯಮ್ಸ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 49 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ ಏಳು ಗ್ರ್ಯಾನ್‌ ಸ್ಲ್ಯಾಮ್‌ಗಳನ್ನು ಒಳಗೊಂಡಿವೆ. ಎಲ್ಲ ನಾಲ್ಕು ಗ್ಲ್ಯಾನ್‌ ಸ್ಲ್ಯಾಮ್‌ಗಳಲ್ಲಿ ಫೈನಲ್‌ ಆಡಿದ್ದು, ಒಂಬತ್ತು ಬಾರಿ ರನ್ನರ್‌ ಅಪ್‌ ಆಗಿದ್ದಾರೆ. 11 ತಿಂಗಳು ಕಾಲ ರನ್ನರ್‌ ಅಪ್‌ ಆಗಿದ್ದಾರೆ. 2000ರಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.

loading...