ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಉತ್ತಮ ಪರಿಕಲ್ಪನೆ: ಸ್ಟೀವ್ ವಾ

0
49

ಬರ್ಮಿಂಗ್‌ಹ್ಯಾಮ್‌:- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಒಂದು ಉತ್ತಮ ಪರಿಕಲ್ಪನೆ ಮತ್ತು ಇದು ಆಟದ ದೀರ್ಘ ಸ್ವರೂಪಕ್ಕೆ ಹೆಚ್ಚಿನ ಉತ್ಸಾಹ ತುಂಬುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಐಸಿಸಿ ಶ್ರೇಯಾಂಕದ ಅಗ್ರ 9 ತಂಡಗಳು ಭಾಗವಹಿಸಲಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು 27 ಸರಣಿಗಳಲ್ಲಿ ಒಟ್ಟು 71 ಪಂದ್ಯಗಳಾಡಲಿವೆ. ಆಗಸ್ಟ್‌ 1 ರಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವೆ ಆ್ಯಶಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಆರಂಭವಾಗುವ ಮೂಲಕ ಚಾಂಪಿಯನ್‌ಶಿಪ್‌ ಆರಂಭವಾಗಲಿದೆ.
ಸುದೀರ್ಘ ಎರಡು ವರ್ಷಗಳ ಕಾಲ ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಕಾದಾಟ ನಡೆಸಲಿವೆ. ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು 2021ರ ಜೂನ್‌ ರಂದು ದಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಫೈನಲ್‌ನಲ್ಲಿ ಸೆಣಸಲಿವೆ.
“ನನಗೆ ಅನಿಸಿದ ಹಾಗೆ ಈ ಪರಿಕಲ್ಪನೆ ಅದ್ಭುತವಾಗಿದೆ. “ನಾನು 18 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದೇನೆ. ನಮ್ಮದು ವಿಶ್ವದ ಅಗ್ರ ಟೆಸ್ಟ್ ತಂಡ ಎಂದು ಅನೇಕ ಜನರು ಹೇಳಿದ್ದಾರೆ. ಆದರೆ ನೀವು ಟ್ರೋಫಿಯನ್ನು ಎತ್ತಿ ಹಿಡಿಯದ ಹೊರತು ಅದು ಸಂಪೂರ್ಣ ತೃಪ್ತಿ ನೀಡುವುದಿಲ್ಲ. ಟ್ರೋಫಿ ಪಡೆಯದ ಹೊರತು ನಾವು ಟೆಸ್ಟ್‌ ಚಾಂಪಿಯನ್‌ ಎಂದು ಖಚಿತ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಕೋನದಲ್ಲಿ ಇದೀಗ ಪರಿಚಯಿಸುತ್ತಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಉತ್ತಮವಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್‌ ವಾ ಶ್ಲಾಘಿಸಿದ್ದಾರೆ.

loading...