ಎಲ್ಲ ಮಾದರಿಯ ಕ್ರಿಕೆಟ್‌ಗೆ ವೇಣುಗೋಪಾಲ್‌ ರಾವ್‌ ಗುಡ್‌ಬೈ

0
4

ನವದೆಹಲಿ:- ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ಆಂಧ್ರ ರಣಜಿ ತಂಡದ ನಾಯಕ ವೇಣುಗೋಪಾಲ್‌ ರಾವ್‌ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
37ರ ಪ್ರಾಯದ ವೇಣುಗೋಪಾಲ್‌ ರಾವ್‌ ಅವರು 16 ಏಕದಿನ ಪಂದ್ಯಗಳಿಂದ ಏಕೈಕ ಅರ್ಧ ಶತಕ ದೊಂದಿಗೆ ಒಟ್ಟು 218 ರನ್‌ಗಳಿಸಿದ್ದಾರೆ. 2005ರ ಜುಲೈನಲ್ಲಿ ದಂಬುಲ್ಲಾದಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ಹೆಚ್ಚು ಕಾಲ ಭಾರತ ತಂಡದಲ್ಲಿ ನೆಲೆಯೂರಲಿಲ್ಲ. 2006ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದರು.
121 ಪ್ರಥಮ ದರ್ಜೆ ಪಂದ್ಯಗಳಾಡಿರುವ ಅವರು 17 ಶತಕ ಹಾಗೂ 30 ಅರ್ಧ ಶತಕಗಳೊಂದಿಗೆ ಒಟ್ಟು 7,081 ರನ್‌ ದಾಖಲಿಸಿದ್ದಾರೆ. 2008 ರಿಂದ 2014ರ ಅವಧಿಯಲ್ಲಿ ಡೆಕ್ಕಾನ್‌ ಚಾರ್ಜರ್ಸ್‌, ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳ ಪರ ಐಪಿಎಲ್‌ನಲ್ಲಿ ಒಟ್ಟು 65 ಪಂದ್ಯಗಳಲ್ಲಿ ಆಡಿದ್ದಾರೆ.
ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ಗೆ ವೇಣುಗೋಪಾಲ್‌ ರಾವ್‌ ಅವರು ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಎಸಿಎ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯರು ಶುಭ ಹಾರೈಸಿದ್ದಾರೆ

loading...