ತಿಂಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಮುಷ್ಕರ

0
10

 

ಕುಮಟಾ : ಸರ್ಕಾರಿ ಆಸ್ಪತ್ರೆಯನ್ನು ಸ್ವಚ್ಛವಾಗಿಡಲು ಸ್ವಚ್ಛತಾ ಸಿಬ್ಬಂದಿಯ ಶ್ರಮ ಮಹತ್ವದ್ದಾಗಿದೆ. ಆದರೆ, ಕಳೆದ ನಾಲ್ಕು ತಿಂಗಳಿಂದ ವೇತನ ನೀಡದಿರುವುದನ್ನು ಖಂಡಿಸಿ ಕುಮಟಾ ತಾಲೂಕು ಆಸ್ಪತ್ರೆಯ ನಾನ್ ಕ್ಲಿನಿಕ್ ಸಿಬ್ಬಂದಿಗಳು (ಸ್ವಚ್ಛತಾ ಸಿಬ್ಬಂದಿ) ಶುಕ್ರವಾರ ಕರ್ತವ್ಯದಿಂದ ದೂರ ಉಳಿದು ಮುಷ್ಕರ ನಡೆಸಿದರು.
ಕುಮಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಕೆಲಸಕ್ಕೆ ಹಾಜರಾಗದೇ ಆಸ್ಪತ್ರೆಯ ಎದುರು ಧರಣಿ ನಡೆಸಿದ ಸರ್ಕಾರಿ ಆಸ್ಪತ್ರೆಯ ನಾನ್ ಕ್ಲಿನಿಕ್ ಸಿಬ್ಬಂದಿಗಳು ನಮಗೆ ವೇತನ ನೀಡುವವರೆಗೂ ನಾವು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಆಸ್ಪತ್ರೆಯಲ್ಲಿ ಒಟ್ಟೂ ೧೨ ಸಿಬ್ಬಂದಿಗಳು ಕೆಲಸಮಾಡುತ್ತಿದ್ದೆÃವೆ. ಕಳೆದ ನಾಲ್ಕು ತಿಂಗಳಿದ ನಮಗೆ ವೇತನ ನೀಡಿಲ್ಲ. ನಮಗೆ ವೇತನ ನೀಡದೇ ಇರುವುದರಿಂದ ಕುಟುಂಬದ ಜೀವನ ನಿರ್ವಹಣೆಗೆ ತೀವ್ರ ಸಮಸ್ಯೆಯಾಗಿದೆ. ವೇತನ ಬಗ್ಗೆ ಕೇಳಲು ಗುತ್ತಿಗೆದಾರರಿಗೆ ಫೋನ್ ಕರೆ ಮಾಡಿದರೆ, ಸ್ವಿÃಕರಿಸುವುದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದರೂ ಇನ್ನು ವರೆಗೂ ಯಾವುದೇ ಪ್ರಯೋಜನವಾಗಿಲ್ಲ. ನಾವೇಲ್ಲರೂ ಬಡವರು. ವೇತನ ಇಲ್ಲದಿದ್ದರೂ ನಾವು ಇಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆÃವೆ. ನಾಲ್ಕು ತಿಂಗಳಿಂದ ವೇತನ ನೀಡದಿರುವುದರಿಂದ ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಸರ್ಕಾರಿ ಆಸ್ಪತ್ರೆಯ ನಾನ್ ಕ್ಲಿನಿಕ್ ಸಿಬ್ಬಂದಿಗಳಾದ ರೇಷ್ಮಾ ವೈದ್ಯ, ಮಹಾಲಕ್ಷಿö್ಮÃ ಮುಕ್ರಿ, ಪಾರ್ವತಿ ಹಳ್ಳೆÃರ, ಜ್ಯೊÃತಿ ಹರಿಜನ, ಅಲೀಮಾ, ಜಯಾ ಕುರುಬ, ಗಂಗೆ ಹಳ್ಳೆÃರ, ಕಮಲಾಕರ ನಾಯ್ಕ, ರಾಘವೇಂದ್ರ ನಾಯ್ಕ, ವಂದನಾ, ಮಹಾಲಕ್ಷಿö್ಮÃ ಹಳ್ಳೆÃರ, ಪಾರ್ವತಿ ಅವರು ಪತ್ರಕರ್ತರೊಂದಿಗೆ ತಮ್ಮ ಅಳಳನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಅಧೀಕ್ಷಕಿ ಶಶಿಕಲಾ ನಾಯ್ಕ ಅವರು ಪ್ರತಿಭಟನಾಕಾರನ್ನು ಸಮಧಾನ ಪಡಿಸುವ ಪ್ರಯತ್ನ ಮಾಡಿದರು. ಅಲ್ಲದೇ ಈಗಾಗಲೇ ಸ್ವಚ್ಛತಾ ಸಿಬ್ಬಂದಿಯ ವೇತನವನ್ನು ಬಿಡುಗಡೆ ಮಾಡುವಂತೆ ಗುತ್ತಿಗೆ ಏಜನ್ಸಿಗೆ ತಿಳಿಸಿದ್ದೆÃವೆ. ಈ ಕುರಿತು ಪತ್ರ ಕೂಡ ರವಾನಿಸಿದ್ದೆÃವೆ ಎಂದರು. ನಮಗೆ ನ್ಯಾಯಯುತವಾಗಿ ದೊರೆಯಬೇಕಾದ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಆಸ್ಪತ್ರೆಯ ಸ್ವಚ್ಛತಾ ಕಾರ್ಯ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ರತ್ನಾಕರ ನಾಯ್ಕ ಅವರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಸ್ವಚ್ಛತಾ ಕಾರ್ಯ ಮುಂದುವರೆಸಿ, ಬರುವ ೧೫ ದಿನದೊಳಗೆ ವೇತನ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಟ್ಟ ಸಿಬ್ಬಂದಿಯು ಎಂದಿನಂತೆ ಆಸ್ಪತ್ರೆಯ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

loading...