ಮನೆಪಾಠ ಕೇಂದ್ರಕ್ಕೆ ಪಠ್ಯೊÃಪಕರಣ ವಸ್ತು ವಿತರಣೆ

0
32

 

ಮುಂಡಗೋಡ: ವನವಾಸಿ ಕಲ್ಯಾಣ ಸಂಸ್ಥೆ ವತಿಯಿಂದ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದಲ್ಲಿನ ಮನೆಪಾಠ ಕೇಂದ್ರಕ್ಕೆ ಪಠ್ಯೊÃಪಕರಣ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಚವಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ ಲಕ್ಷö್ಮವ್ವ ವಡ್ಡರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಶಾಂತರಾಮ ಸಿದ್ಧಿ, ಹಾಗೂ ಸಂಸ್ಥೆಯ ಗ್ರಾಮ ಸಮಿತಿಯವರು ಬ್ಯಾನಳ್ಳಿ, ಗ್ರಾಮದಲ್ಲಿ ಪಕ್ಕಾ ಗಟಾರ, ಕುಡಿಯುವ ನೀರು, ಬೀದಿ ದೀಪ, ಸಮೂದಾಯ ಭವನ, ಮತ್ತು ಆಟದ ಮೈದಾನ ಸೇರಿದಂತ್ತೆ ಮೂಲಭೂತ ಸೌಕರ್ಯಗಳನ್ನು, ಹಾಗೂ ಶಾಲಾ ಮಕ್ಕಳಿಗೆ ಓಡಾಡಲು ಬಸ್ ವ್ಯವಸ್ಥೆ ಒದಗಿಸುವ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ತಾಲೂಕಾ ಪಂಚಾಯತ್ ಸದಸ್ಯರಿಗೆ ಮನವಿ ಸಲ್ಲಿಸಿದರು.
ರಾದಾ ಅರ್ಜುನ ಸಿಗನಳ್ಳಿ, ಬಯಾಬಾಯಿ ಕಾತ್ರಟ್, ಜಾನು ಯಮಕರ, ಬಾಬು ಶಾಮು ಪಟಕಾರೆ, ವಿಠ್ಠು ದೊಂಡು ಗಾವಡೆ, ಮುಂತಾದವರು ಉಪಸ್ಥಿÃತರಿದ್ದರು. ವನವಾಸಿ ಕಲ್ಯಾಣ ಸಂಸ್ಥೆಯ ಜಿಲ್ಲಾ ಶಿಕ್ಷಣ ಪ್ರಮುಖ ಬಾಗು ಕಾತ್ರಟ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿದರೆ,ಸಂಸ್ಥೆಯ ತಾಲೂಕಾ ಪ್ರಮುಖ ಹನುಮಂತ ವಾಲ್ಮಿÃಕಿ ವಂದಿಸಿದರು.

loading...