ಭತ್ತ ಬೆಳೆ ಕುಂಠಿತ| ತುಂಗಭದ್ರಾ ಜಲಾಶಯಕ್ಕೆ ನೀರಿನ ಸಂಗ್ರಹ ಕಡಿಮೆ ಆತಂಕಗೊಂಡ ರೈತರು

0
21

 

ಕೊಪ್ಪಳ: ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ನರೀಕ್ಷಿತ ಮಟ್ಟದಲ್ಲಿ ಭರ್ತಿಯಾಗದ ಕಾರಣ ಭತ್ತ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ವರ್ಷ ಈ ಹೊತ್ತಿಗಾಗಲೇ ಒಂದು ತಿಂಗಳ ಭತ್ತ ಗದ್ದೆಯಲ್ಲಿ ನಲಿಯುತ್ತಿತ್ತು. ಆದರೆ ಈ ಬಾರಿ ಬಹುತೇಕ ಕಡೆ ಖಾಲಿ ಗದ್ದೆಗಳು ಕಾಣಸಿಗುತ್ಯಿವೆ.
ಮಲೆನಾಡು ಭಾಗದಲ್ಲಿ ಹೆಚ್ಚು ಮಳೆ ಬಿದ್ದಾಗ ಮಾತ್ರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದು ಭರ್ತಿಯಾಗುತ್ತದೆ. ಜಲಾಶಯವನ್ನೆÃ ನಂಬಿಕೊಂಡು ಕುಳಿತಿರುವ ರೈತರಿಗೆ ಸಕಾಲದಲ್ಲಿ ವರುಣದೇವ ಕೃಪೆ ತೋರದ ಕಾರಣ ಇದುವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಸಂಗ್ರಹವಾಗಿಲ್ಲ. ಇದರಿಂದಾಗಿ ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಭತ್ತ ಬೆಳೆಗಾರರು ವರುಣನ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಮಲೆನಾಡು ಸೇರಿದಂತೆ ಜಿಲ್ಲೆಯಲ್ಲೂ ಇತ್ತಿÃಚಿಗೆ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಸಧ್ಯ ೩೧ ಟಿಎಂಸಿ ನೀರು ಸಂಗ್ರಹವಾಗಿದೆ. ಕನಿಷ್ಠ ೫೦ ಟಿಎಂಸಿ ನೀರು ಸಂಗ್ರಹವಾದರೆ ಮಾತ್ರ ಭತ್ತ ನಾಟಿ ಮಾಡಲು ಸಾಧ್ಯವಾಗುತ್ತದೆ.

ನೀರು ಇಲ್ಲದೆ ಭತ್ತದ ಬೆಳೆ ಇಲ್ಲ:
ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ ಬಹುತೇಕ ಭತ್ತದ ಗದ್ದೆಗಳು ಬೆಳೆಯಿಲ್ಲದೆ ಖಾಲಿ ಖಾಲಿಯಾಗಿ ಬಣಗುಡುತ್ತಿವೆ. ಕಾಲುವೆ ನೀರನ್ನೆÃ ನಂಬಿರುವ ಸಾವಿರಾರು ರೈತರು ಕಂಗಾಲಾಗಿದ್ದಾರೆ. ಇತ್ತಿÃಚಿಗೆ ನೀರು ಹರಿದುಬರುತ್ತಿರುವ ಕಾರಣ ಇನ್ನೆÃನು ಕಾಲುವೆಗಳಿಗೆ ನೀರು ಬಿಡಬಹುದು ಎಂದು ತಿಳಿದು ಭತ್ತದ ಸಸಿ ಮಾಡುವಲ್ಲಿ ರೈತರು ನಿರತರಾಗಿದ್ದಾರೆ. ಪಂಪ್‌ಸೆಟ್ ಇರುವ ರೈತರು ಮಾತ್ರ ಅದಾಗಲೇ ಭತ್ತ ನಾಟಿ ಮಾಡಿ ಎರಡು ಬಾರಿ ರಸಗೊಬ್ಬರವನ್ನೂ ಹಾಕಿದ್ದಾರೆ. ಆದರೆ ಜಲಾಶಯ ನಂಬಿರುವ ಉಳಿದ ರೈತರು ಸಂಕಷ್ಟದಲ್ಲಿದ್ದಾರೆ.

———-ಕೋಟ್———
ಕಳೆದ ವರ್ಷ ಈ ಹೊತ್ತಿಗಾಗಲೇ ಒಂದು ತಿಂಗಳ ಭತ್ತ ಗದ್ದೆಯಲ್ಲಿ ಹಸಿರಾಗಿ ಬೆಳೆದಿತ್ತು. ಆದರೆ ಈ ವರ್ಷ ಜಲಾಶಯಕ್ಕೆ ನೀರು ಬಾರದ ಕಾರಣ ಭತ್ತ ನಾಟಿ ಮಾಡಿಲ್ಲ. ಬಹುತೇಕ ರೈತರು ಇತ್ತಿÃಚಿಗೆ ಭತ್ತದ ಸಸಿ ಮಾಡಿದ್ದೆÃವೆ. ಜಲಾಶಯಕ್ಕೆ ೫೦ ಟಿಎಂಸಿ ನೀರು ಬಂದ ಬಳಿಕ ನಾಟಿ ಮಾಡಲು ನೀರು ಬಿಡುವ ನಿರೀಕ್ಷೆ ಇದೆ. ಪಂಪ್‌ಸೆಟ್ ಇದ್ದವರು ಮಾತ್ರ ನಾಟಿ ಮಾಡಿದ್ದಾರೆ. ಕಾಲುವೆ ನಂಬಿಕೊಂಡ ನಾವು ಮಳೆಗಾಗಿ ಕಾಯುತ್ತಿದ್ದೆÃವೆ. ಈ ಬಾರಿ ಒಂದೇ ಬೆಳೆ ಸಿಗುವ ಲಕ್ಷಣಗಳು ಕಾಣುತ್ತಿವೆ.

ಕೆ. ಬಸವರಾಜ, ಭತ್ತ ಬೆಳೆಗಾರ, ಅಗಳಕೇರಾ

loading...