ಬೂದಗುಂಪಾದಲ್ಲಿ ಅಕ್ರಮ ಮದ್ಯ ಮಾರಾಟ: ತಡೆಗಟ್ಟಲು ಗ್ರಾಮಸ್ಥರ ಅಗ್ರಹ

0
8

 

ಕಾರಟಗಿ: ಸಮೀಪದ ಬೂದಗುಂಪಾ ಗ್ರಾಮದಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದಾಗಿ ಅಕ್ರಮ ಮದ್ಯ ಮಾರಾಟ ಮತ್ತು ಸರಬರಾಜು ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕೆಂದು ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದರು.
ಶುಕ್ರವಾರ ಕಾರಟಗಿ ಪೊಲೀಸ್ ಠಾಣೆಗೆ ಆಗಮಿಸಿದ ಗ್ರಾಮದ ಕೆಲ ರೈತ ಮುಖಂಡರು ಮನವಿ ಸಲ್ಲಿಸಿದರು. ಕಾರಟತಿ ತಾಲೂಕು ಕೇಂದ್ರಕ್ಕೆ ಅತ್ಯಂತ ಸಮೀಪವಿರುವ ಬೂದಗುಂಪಾ ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುವುದು ಮತ್ತು ಎಲ್ಲೆಂದರಲ್ಲಿ ಸರಬರಾಜು ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಯುವಕರು, ರೈತರು, ಮಹಿಳೆಚಿiÀÄರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಮದ್ಯ ಸರಬರಾಜು ಮಾಡುವ ವ್ಯಕ್ತಿಗಳು ಪ್ರಭಾವಿಗಳಾvದ್ದರಿಂದ ಗ್ರಾಮಸ್ಥರು ತಡೆಗಟ್ಟಲು ಮುಂದಾದರೆ ಅನವಶ್ಯಕವಾಗಿ ವಿವಾದ ಸೃಷ್ಟಿಯಾಗುತ್ತದೆ. ಹೀಗಾಗಿ ನೀವೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ರಿಗೆ ಮನವಿ ಮಾಡಿದರು. ಲಕ್ಷö್ಮಣ ನಾಯಕ, ಹನುಮಂತಪ್ಪ, ಬಾಲರಾಜ ಮತ್ತಿತರು ಮನವಿ ಸಲ್ಲಿಸಿದರು. ಗ್ರಾಮಸ್ಥರ ಮನವಿ ಸ್ವಿÃಕರಿಸಿದ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

loading...