ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮ ಅವಶ್ಯ: ಕಾಲಕುಂದ್ರಿ

0
7

ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲಾ ಮತ್ತು ಇದು ಯಶಸ್ಸಿನ ಏಕೈಕ ಮಂತ್ರವಾಗಿದೆ ಎಂದು ಜಿಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ ಹೇಳಿದರು.

ಜಿಐಟಿಯಲ್ಲಿ ಶುಕ್ರವಾರ ಹಮ್ಮಿಕೊಂಡ ೨೦೧೯ -೨೦ ರಲ್ಲಿ ಇಂಜಿನಿಯರಿಂಗ್ ಪದವಿಯ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಇವತ್ತಿನ ವೇಗಕ್ಕೆ ಪರಿಶ್ರಮದ ಜೊತೆ ” ಸ್ಮಾರ್ಟ್ ವರ್ಕ್ ” ಸಹ ಅವಶ್ಯಕತೆ ಇದೆ ಮತ್ತು ಕ್ಷಿÃಪ್ರ ಫಲಿತಾಂಶದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವತ್ತಿನ ಔದ್ಯೊÃಗಿಕ ವಲಯದ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು”ಇಂಡಸ್ಟಿç ರೆಡಿ ಎಂಜಿನೀರ್ಸ್” ಕಲ್ಪನೆಯನ್ನು ಇಟ್ಟುಕೊಂಡು ನಮ್ಮ ಮಹಾವಿದ್ಯಾಲಯ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಹೊಸ ಹೊಸ ಐಡಿಯಾ ಗಳಿಗೆ ರೆಕ್ಕೆ ಕೊಟ್ಟು ಸ್ವಾವಲಂಬಿಯಾಗಿ ಸ್ಟಾರ್ಟ್ ಅಪ್ ಗಳನ್ನೂ ತೆರೆಯಲು ಸಂಸ್ಥೆ ಕೆಲಸ ಮಾಡುತಿದ್ದೆ ಎಂದು ಹೇಳಿದರು.
ಜಿಐಟಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಜೊತೆಗೆ ಶಿಕ್ಷಣದ ಅವಧಿಯಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ಕಾರ್ಯತಂತ್ರದ ಬೋಧನೆಯ ಮೂಲಕ ಯಶಸ್ವಿ ವೃತ್ತಿಪರರನ್ನಾಗಿ ಮಾಡುವುದರ ಮೇಲೆ ತನ್ನ ಶಿಕ್ಷಣದ ಉದ್ದೆÃಶವನ್ನು ಕೇಂದ್ರಿÃಕರಿಸಿದೆ ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪೆÇ್ರ. ಡಿ. ಎ. ಕುಲಕರ್ಣಿ ಅವರು ಒಟ್ಟು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಶೈಕ್ಶಣಿಕ ವಿಭಾಗದ ಡೀನ್ ಡಾ. ಎಂ ಎಸ ಪಾಟೀಲ , ಎಲ್ಲ ವಿಭಾಗದ ಮುಖ್ಯಸ್ಥರು, ಅನ್ವಯಿಕ ವಿಜ್ಞಾನ ವಿಭಾಗಗಳ ಸಿಬ್ಬಂದಿ ವರ್ಗ ಹಾಗೂ ಜಿಐಟಿಗೆ ಪ್ರವೇಶ ಪಡೆದ ೮೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.

loading...