ನದಿ ತೀರದ ಜನರು ಸುರಕ್ಷಿÃತ ಪ್ರದೇಶಕ್ಕೆ ತೆರಳಿ: ಡಿಸಿ

0
11

ಬೆಳಗಾವಿ: ಮಹಾರಾಷ್ಟçದ ಜಲಾಶಯಗಳಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಅಂದಾಜು ೪.೦೦ ಅಡಿಗಳಷ್ಟು ನೀರು ಏರಿಕೆ ಆಗುವ ಸಂಭವವಿರುತ್ತದೆ. ಆದ್ದರಿಂದ ನದಿಗಳ ಪಾತ್ರಗಳಲ್ಲಿರುವ ಜನರು ತಮ್ಮ ಅಗತ್ಯ ಸಾಮಗ್ರಿ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜನ ಜಾನುವಾರುಗಳನ್ನು ಸುರಕ್ಷಿÃತ ಪ್ರದೇಶಗಳಿಗೆ ಸ್ಥಳಾಂತರಿಸುವಲ್ಲಿ ಜಿಲ್ಲಾಡಳಿತ ವತಿಯಿಂದ ಎಲ್ಲಾ ಅಗತ್ಯವಾದ ರೀತಿಯ ಸಹಕಾರಗಳನ್ನು ನೀಡಲಾಗುವುದು. ಎಲ್ಲ ರಕ್ಷಣಾ ಸಾಮಗ್ರಿಗಳೊಂದಿಗೆ ತಂಡಗಳನ್ನು ರಚಿಸಿ ಸಿದ್ಧತೆಯಲ್ಲಿಟ್ಟುಕೊಂಡಿದ್ದು, ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.
ಸಾರ್ವಜನಿಕರು ಸಹಾಯದ ಅಗತ್ಯವೆನಿಸಿದ್ದಲಿ ಈ ಕೆಳಕಂಡ ಕಾರ್ಯಾಲಯಗಳ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದಾಗಿದೆ.
ಕೊಠಡಿಗಳು ಹಾಗೂ ದೂರವಾಣಿ ಸಂಖ್ಯೆ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ೦೮೩೧-೨೪೦೭೨೯೦, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬೆಳಗಾವಿ ೦೮೩೧-೨೪೦೫೨೩೧, ತಹಶೀಲ್ದಾರ ಕಾರ್ಯಾಲಯ ಚಿಕ್ಕೊÃಡಿ ೦೮೩೩೮-೨೭೨೨೨೮, ತಹಶೀಲ್ದಾರ ಕಾರ್ಯಾಲಯ ರಾಯಬಾಗ ೦೮೩೩೧-೨೨೫೪೮೨, ತಹಶೀಲ್ದಾರ ಕಾರ್ಯಾಲಯ ಅಥಣಿ ೦೮೨೮೯-೨೫೧೧೪೬, ತಹಶೀಲ್ದಾರ ಕಾರ್ಯಾಲಯ ನಿಪ್ಪಾಣಿ ೦೮೩೩೮-೨೨೦೩೯೫
ನೆರೆಯ ಮಹಾರಾಷ್ಟç ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಕೃಷ್ಣಾ ನದಿ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಆ.೩ ಮುಂಜಾನೆ ೧೦.೦೦ಗಂಟೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮಹಾರಾಷ್ಟçದ ಜಲಾಶಯಗಳಿಂದ ಒಟ್ಟು ೨೦೫೧೧೮ ಕ್ಯೂಸೆಕ್ಸ್ ನೀರು ಬರುತ್ತಿದೆ.

========ಬಾಕ್ಸ್=========

ರಸ್ತೆ ಸೇತುವೆಗಳು ಜಲಾವೃತ

ರಸ್ತೆ ಸೇತುವೆಗಳು ಜಲಾವೃತಗೊಂಡಿರುವ ಹಿನ್ನಲೆಯಲ್ಲಿ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಕಲ್ಲೊÃಳ- ಯಡೂರ ತಾ:ಚಿಕ್ಕೊÃಡಿ (ಕೃಷ್ಣಾ ನದಿ) ಕಾರದಗಾ-ಭೋಜ ತಾ:ಚಿಕ್ಕೊÃಡಿ (ವೇದಗಂಗಾ+ದೂದಗಂಗಾ ನದಿ), ಮಲಿಕವಾಡ-ದತ್ತವಾಡ ತಾ:ಚಿಕ್ಕೊÃಡಿ (ದೂದಗಂಗಾ ನದಿ), ಭೋಜವಾಡಿ-ಕುನ್ನೂರ ತಾ: ಚಿಕ್ಕೊÃಡಿ (ವೇದಗಂಗಾ ನದಿ), ಸಿದ್ನಾಳ-ಅಕ್ಕೊÃಳ ತಾ: ಚಿಕ್ಕೊÃಡಿ (ವೇದಗಂಗಾ ನದಿ), ಜತ್ರಾಟ-ಭೀವಶಿ ತಾ: ಚಿಕ್ಕೊÃಡಿ (ವೇದಗಂಗಾ ನದಿ), ಸದಲಗಾ-ಬೋರಗಾಂವ ತಾ:ಚಿಕ್ಕೊÃಡಿ (ವೇದಗಂಗಾ+ದೂದಗಂಗಾ ನದಿ), ಯಕ್ಸಂಬಾ-ದಾನವಾಡ ತಾ:ಚಿಕ್ಕೊÃಡಿ (ದೂದಗಂಗಾ ನದಿ), ಕುಡಚಿ ಸೇತುವೆ ತಾ: ರಾಯಬಾಗ (ಕೃಷ್ಣಾ ನದಿ), ರಾಯಬಾಗ-ಚಿಂಚಲಿ ತಾ:ರಾಯಬಾಗ (ಕೃಷ್ಣಾ ನದಿ), ನದಿ ಇಂಗಳಗಾಂವ-ತೀರ್ಥ ತಾ:ಅಥಣಿ (ಕೃಷ್ಣಾ ನದಿ), ಸಪ್ತಸಾಗರ-ಬನದವಸತಿ ತಾ:ಅಥಣಿ (ಕೃಷ್ಣಾ ನದಿ), ಕೊಕಟನೂರ-ಶಿರಹಟ್ಟಿ ತಾ:ಅಥಣಿ (ಕೃಷ್ಣಾ ನದಿ), ಜುಂಜರವಾಡ-ತುಬಚಿ ತಾ:ಅಥಣಿ (ಕೃಷ್ಣಾ ನದಿ), ಖವಟಕೊಪ್ಪ-ಶೇಗುಣಸಿ ತಾ:ಅಥಣಿ (ಕೃಷ್ಣಾ ನದಿ), ಉಗಾರ ಕೆ.ಎಚ್–ಉಗಾರ ಬಿ.ಕೆ, ರಸ್ತೆ ತಾ: ಕಾಗವಾಡ (ಕೃಷ್ಣಾ ನದಿ) ನದಿ ದಂಡೆಗಳ ಮೇಲಿರುವ ಪಂಪ್ ಸೆಟ್‌ಗಳನ್ನು ಹೊರ ತೆಗೆಯುವ ಪ್ರಯತ್ನಗಳನ್ನು ಮಾಡಬಾರದೆಂದು ಹಾಗೂ ಮೇಲೆ ವಿವರಿಸಿದ ರಸ್ತೆ, ಸೇತುವೆಗಳ ಮೇಲೆ ಸಾರ್ವಜನಿಕರು ಸಂಚಾರ ಮಾಡದಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...