ಸ್ಪರ್ಧಾತ್ಮಕ ಯಶಸ್ಸನ್ನು ಕಾಣಬೇಕಾದರೆ ಪರಿಣಾಮಕಾರಿ ಸಹಭಾಗಿತ್ವ ಅಗತ್ಯ

0
4

 

ಕನ್ನಡಮ್ಮ ಸುದ್ದಿ-ಧಾರವಾಡ: ರೈತರಿಗೆ ಸಾಲ ನೀಡುವ ಉದ್ದೆÃಶದ ಜೊತೆಗೆ ವ್ಯಾಪಾರಾಭಿವೃದ್ಧಿ ಯೋಜನೆಯಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಸಂಸ್ಥೆಗಳ ಸಾಂಪತ್ತಿಕ ಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಸದಸ್ಯರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಕೆ.ಸಿ.ಸಿ. ಬ್ಯಾಂಕ ನಿ., ಧಾರವಾಡ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಹೇಳಿದರು.
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಏರ್ಪಡಿಸಿದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯಾವುದೇ ವಲಯವಾದರೂ ಯಶಸ್ಸನ್ನು ಕಾಣಬೇಕಾದರೆ ಪರಿಣಾಮಕಾರಿಯ ಸಹಭಾಗಿತ್ವ ಅಗತ್ಯವಾಗಿರುತ್ತದೆ. ಸಮಾನ ಮನಸ್ಕ ವಲಯಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದಾಗ ಗುರಿ ತಲುಪುವುದು ಸುಲಭವಾಗುತ್ತದೆ ಎಂದರು. ಕೆ.ಸಿ.ಸಿ. ಬ್ಯಾಂಕಿನ ನಿರ್ದೆÃಶಕ ಮಂಜುನಾಥ ಮುರಳ್ಳಿ ಮಾತನಾಡಿ, ಸಹಕಾರ ಕ್ಷೆÃತ್ರ ಬೆಳೆಯುವ ಅಗತ್ಯವಿದೆ.

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಗ್ರಾಮೀಣ ಪ್ರದೇಶದ ರೈತಾಪಿ ಜನರ ಸಾಲದ ಅಗತ್ಯಗಳನ್ನು ಪೊರೈಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದರು. ಕೆ.ಸಿ.ಸಿ. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಕೆ.ಸಿ.ಸಿ. ಬ್ಯಾಂಕಿನ ನಿರ್ದೆÃಶಕರುಗಳಾದ ಗಂಗಣ್ಣ ಸಾತಣ್ಣವರ, ಎಂ.ಎಪ್. ಕಲಗುಡಿ, ಎಸ್.ಡಿ. ಕೊಳ್ಳಿ, ಯೂನಿಯನ್‌ದ ನಿರ್ದೆÃಶಕ ಪಿ.ಪಿ. ಗಾಯಕವಾಡ ಉಪಸ್ಥಿತರಿದ್ದರು. ಆನಂದ ತಳವಾರ ಸ್ವಾಗತಿಸಿದರು. ಸವಿತಾ ಹಿರೇಮಠ ನಿರೂಪಿಸಿ, ವಂದಿಸಿದರು.

loading...