ವ್ಯಾಪಾರ ವಹಿವಾಟಿಗೆ ಮಳೆರಾಯ ಅಡ್ಡಿ !

0
2

ನಿರಂತರ ಮಳೆಯಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಕೊರತೆ | ಪ್ಲಾಸ್ಟಿಕ್ ಹೊದಿಕೆಯಲ್ಲಿ ತರಕಾರಿ ಮಾರಾಟಕ್ಕೆ ಕುಳಿತ ವ್ಯಾಪಾರಸ್ಥರು
ಮಾಲತೇಶ ಮಟಿಗೇರ
ಬೆಳಗಾವಿ : ಜಿಲ್ಲೆಯಲ್ಲಿ ಕಳೆದ ೧೦ದಿನಗಳಿಂದ ಮಳೆಯ ಅವಾಂತರದಿಂದ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಿದ್ದು, ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.
ನಿರಂತರ ದಿನವಿಡೀ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯ ರಾಯನ ಆರ್ಭಟಕ್ಕೆ ಜನರು ತತ್ತರಿಸಿದ್ದಾರೆ. ಅಲ್ಲದೆ ನಗರದಲ್ಲಿ ಮಳೆರಾಯಾ ಮಾರುಕಟ್ಟೆ ವ್ಯಾಪಾರಕ್ಕೆ ಅಡ್ಡಿಯಾಗಿದೆ. ಗ್ರಾಹಕರ ಸಂಖ್ಯೆ ವಿರಳಗೊಂಡಿದ್ದರಿಂದ ವ್ಯಾಪಾರವಿಲ್ಲದೇ ಅನೇಕ ವ್ಯಾಪಾರಸ್ಥರು ನಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ.
ನಗರದ ಹೃದಯ ಭಾಗದಲ್ಲಿ ಖಡೆಬಜಾರ ಸೇರಿದಂತೆ ಇಲ್ಲಿನ ಪ್ರಮುಖ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಸೊಪ್ಪು, ತರಕಾರಿಗಳನ್ನು ರಸ್ತೆ ಪುಟ್ ಪಾತ್ ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪ್ರತಿ ದಿನದಂತೆ ಮಾರಾಟ ಮಾಡಲು ಆರಂಭಿದ್ದಾರೆ. ಆದರೆ ಗ್ರಾಹಕರ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ದಿನವಿಡೀ ಬೆಳಿಗ್ಗೆಯಿಂದಲೇ ಆರಂಭಗೊಳ್ಳುತ್ತಿರುವ ಮಳೆ ಸಂಜೆವರೆಗೆ ವ್ಯಾಪಾರಸ್ಥರನ್ನು ಕಾಡಿತಿದೆ.
ವ್ಯಾಪಾರ ಅಷ್ಟಕಷ್ಟೇ: ಆಗಾಗ ಮಳೆ ಸುರಿಯಿತ್ತಲೇ ಇರುವುದರಿಂದ ಅನೇಕ ಮಂದಿ ಮಾರುಕಟ್ಟೆಯತ್ತ ಸುಳಿಯುವುದು ಕಡಿಮೆಯಾಗಿದೆ. ಇದರಿಂದ ಸದಾ ಗ್ರಾಹಕರಿಂದ ಗಿಜಿ ಗುಡುತ್ತಿದ್ದ ಕಡೆ ಬಜಾರ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಕೆಲ ಗ್ರಾಹಕರು ಸ್ವಲ್ಪ ಮಳೆ ಕಡಿಮೆಯಾಗುತ್ತಿರುವುದನ್ನು ಕಂಡು ಅಗತ್ಯ ಹಣ್ಣು, ತರಕಾರಿಗಳನ್ನು ಖರೀದಿಸಿದ್ದು ಕಂಡು ಬಂತು. ಅನೇಕ ವ್ಯಾಪಾರಸ್ಥರು ಮಳೆಯಿಂದ ರಕ್ಷಣೆ ಪಡೆಯಲು ಪ್ಲಾಸ್ಟಿಕ್ ಹೊದಿಕೆ, ಕೊಡೆಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಕುಳಿತಿರುವುದು ಕಂಡು ಬಂತು.
ವ್ಯಾಪಾರ ಮಾಡಿದರೆ ಮಾತ್ರ ಅನ್ನ: ರಸ್ತೆಯ ಪಕ್ಕದ ಪುಟ್ ಪಾತ್ ನಲ್ಲಿ ತರಕಾರಿ ,ಹಣ್ಣು ಮಾರಾಟ ಮಾಡುವವರಲ್ಲಿ ಕೆಲವು ವ್ಯಾಪಾರಸ್ಥರು ಬಂದಿರುವ ವ್ಯಾಪಾರದ ಹಣದಿಂದಲೇ ಕುಟುಂಬವನ್ನು ಸಾಗಿಸಬೇಕು. ಆದರೆ ಮಳೆಯಿಂದ ವ್ಯಾಪಾರವೇ ಇಲ್ಲದಾಗಿದೆ. ಸ್ವಲ್ಪ ಮಳೆ ಕಡಿಮೆಯಾದರೆ ವ್ಯಾಪಾರ ನಡೆಯುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.
ಹೆಚ್ಚು ಮಹಿಳೆಯರು,ಅಜ್ಜಿಯಂದಿರು ತರಕಾರಿ ಮಾರಾಟ ಹೆಚ್ಚು ಕಂಡು ಬಂತಿತು. ಆದರೆ ಮಳೆಯಿಂದ ವ್ಯಾಪಾರ ಮಾತ್ರ ಕಡಿಮೆಯಾಗಿದೆ.
ಒಟ್ಟಿನಲ್ಲಿ ಮಳೆಯಿಂದ ವ್ಯಾಪಾರಸ್ಥರು ತಮ್ಮ ಕಾಯಕವನ್ನು ಕೈಗೊಂಡಿದ್ದಾರೆ. ಆದರೆ ಮಳೆಯ ಅವಾಂತರದಿಂದ ಗ್ರಾಹಕರು ಇಲ್ಲದೆ ಮಾರುಕಟ್ಟೆಗಳು ಬಿಕೋ ಎನ್ನುತಿತ್ತು. ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ.
=======ಬಾಕ್ಸ್========
ನಿರಂತರ ಮಳೆ ಬರುತ್ತಿರುವುದರಿಂದ ಗ್ರಾಹಕರು ಇಲ್ಲದಾಗಿದೆ. ನಾವು ಮಾತ್ರ ದಿನನಿತ್ಯದಂತೆ ತರಕಾರಿ ಮಾರಾಟ ಆರಂಭಿಸುತ್ತೆವೆ. ವ್ಯಾಪಾರ ಮಾತ್ರ ಅಷ್ಟಕ್ಕೆÃ ಅಷ್ಟೆÃ ಆಗುತ್ತಿದೆ. ಮಳೆ ಕಡಿಮೆಯಾದರೆ ವ್ಯಾಪಾರ ನಡಿಯುತ್ತದೆ.
ಸರೋಜಾ, ವ್ಯಾಪಾರಸ್ಥೆ

loading...