ಸಿಯೋಲ್‌ನೊಂದಿಗೆ ಮಾತುಕತೆ ನಡೆಸಲು ಉತ್ತರ ಕೊರಿಯಾ ಹಿಂದೇಟು

0
4

ಪಯೋಂಗ್ಯಾಂಗ್, -ದಕ್ಷಿಣ ಕೊರಿಯಾದೊಂದಿಗೆ ಇನ್ನು ಮುಂದೆ ಯಾವುದೇ ರೀತಿಯ ಮಾತುಕತೆಗೆ ಉತ್ತರ ಕೊರಿಯಾ ಸಿದ್ಧವಿಲ್ಲ ಎಂದು ಶಾಂತಿಯುತ ಪುನರ್ ಏಕೀಕರಣಕ್ಕಾಗಿ ಉತ್ತರ ಕೊರಿಯಾದ ಸಮಿತಿಯ ವಕ್ತಾರರು ಶುಕ್ರವಾರ ಹೇಳಿದ್ದಾರೆ.

2045ರ ಹೊತ್ತಿಗೆ ಪಯೋಂಗ್ಯಾಂಗ್‌ನೊಂದಿಗೆ ಮತ್ತೆ ಒಂದಾಗುವುದಾಗಿ ಸಿಯೋಲ್ ಪ್ರತಿಜ್ಞೆಯ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ದಕ್ಷಿಣ ಕೊರಿಯಾದ ಮುಖ್ಯಸ್ಥರು ನಿನ್ನೆ ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ವಕ್ತಾರರು, ಜಪಾನಿನ ದ್ವೀಪವಾಸಿಗಳ ಅವಮಾನ ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ನಿವಾರಿಸುವ ಯಾವುದೇ ಮಾರ್ಗಗಳ ವಿರುದ್ಧ ಸರಿಯಾದ ಕ್ರಮಗಳನ್ನು ಮುಂದಿಡಲು ಅವರು ವಿಫಲರಾಗಿದ್ದಾರೆ, ಅವರು ಕೇವಲ ಪದಗಳಿಂದ ಮಾತ್ರ ಆಡಿದ್ದಾರೆ, ಆದ್ದರಿಂದ, ಅವರ ಭಾಷಣ ವ್ಯರ್ಥ ಎಂದು ಟೀಕಿಸಿದ್ದಾರೆ.
ಭವಿಷ್ಯದ ಡಿಪಿಆರ್‌ ಕೆ-ಅಮೆರಿಕ ಸಂವಾದದ ಹಿನ್ನೆಲೆಯ ಕೆಸರಿನ ನೀರಿನಲ್ಲಿ ದಕ್ಷಿಣ ಕೊರಿಯಾ ಅಧಿಕಾರಿಗಳು ಮೀನು ಹಿಡಿಯಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರು ‘ಒಂದೇ ಕೊರಿಯಾ’ ಕಾರ್ಯತಂತ್ರವಾದ ‘2045 ರ ಹೊತ್ತಿಗೆ ಪುನರ್ ಏಕೀಕರಣವನ್ನು ಘೋಷಿಸಿದ ಒಂದು ದಿನದ ನಂತರ ಈ ಅಭಿಪ್ರಾಯವು ಹೊರಬಿದ್ದಿದೆ.
ಅಮೆರಿಕ-ದಕ್ಷಿಣ ಕೊರಿಯಾ ಜಂಟಿ ಕಸರತ್ತುಗಳು ಮತ್ತು ಉತ್ತರ ಕೊರಿಯಾದ ಪುನರಾವರ್ತಿತ ಪರೀಕ್ಷೆಗಳ ಹಿನ್ನೆಲೆಯಲ್ಲಿ ಪಯೋಂಗ್ಯಾಂಗ್ ಮತ್ತು ಸಿಯೋಲ್ ನಡುವಿನ ಸಂಬಂಧಗಳು ಇತ್ತೀಚೆಗೆ ಹದಗೆಟ್ಟಿವೆ.

loading...