ಅರುಣ ಜೆಟ್ಲಿ ನಿಧನ ದೇಶಕ್ಕೆ ತುಂಬಲಾರದ ನಷ್ಠ: ಡಾ.ಕೋರೆ

0
29

ಬೆಳಗಾವಿ: ಕೇಂದ್ರದ ಮಾಜಿ ಸಚಿವ ಅರುಣ ಜೆಟ್ಲಿ ನಿಧನ ಹೊಂದಿರುವುದು ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯP್ಷÀರಾದ ಡಾ.ಪ್ರಭಾಕರ ಕೋರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾಗಿ, ಮಾಜಿ ವಿತ್ತ ಸಚಿವರಾಗಿ ದೇಶದ ಅಭಿವೃದ್ಧಿಯಲ್ಲಿ ಮೌಲಿಕವಾದ ಕೊಡುಗೆಯನ್ನು ನೀಡಿದ್ದರು. ದೇಶದ ಆರ್ಥಿಕ ಬಲವರ್ಧನೆಗೆ ಹೊಸ ಯೋಜನೆಗಳನ್ನು ರೂಪಿಸಿದ ಅರುಣ ಜೆಟ್ಲಿ ಅವರು ಜಾಗತಿಕ ಆರ್ಥಿಕ ಸ್ಥರದಲ್ಲಿ ಭಾರತ ಬಲಿಷ್ಠಗೊಳ್ಳುವಂತೆ ಪ್ರಯತ್ನಿಸಿದರು. ಪ್ರಗತಿಪರ ಧೋರಣೆ ಹೊಂದಿದ್ದ ಅವರು ದೇಶದ ವಿಕಾಸಕ್ಕಾಗಿ ಶ್ರಮಿಸಿದ್ದರು. ಮೋದಿಜಿ ಅವರ ನಿಕಟವರ್ತಿಗಳಾಗಿ ದೇಶ ಕಟ್ಟುವಲ್ಲಿ ಮೌಲಿಕ ಯೋಗದಾನ ನೀಡಿದರು. ಅಂತೆಯೇ ನನ್ನೊಂದಿಗೂ ಅವರ ಸಂಪರ್ಕ ನಿಕಟವಾಗಿತ್ತು. ಒಬ್ಬ ರಾಜಕೀಯ ವಿಶ್ಲೆÃಷಕರಾಗಿ, ಮಾರ್ಗದರ್ಶಕರಾಗಿ ನನಗೆ ಗುರುವಿನ ಸ್ಥಾನದಲ್ಲಿದ್ದರು.
ಅರುಣ ಜೆಟ್ಲಿ ಕೆಎಲ್‌ಇ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೆಎಲ್‌ಇ ಸಂಸ್ಥೆಯ ಬೆಳವಣಿಗೆ ಹಾಗೂ ಆರೋಗ್ಯ ಸೇವೆಗಳನ್ನು ಕಂಡು ಮನಸಾರೆ ಪ್ರಶಂಸಿಸಿದ್ದರು. ಇಂತಹ ಧೀಮಂತ ನಾಯಕನನ್ನು ಕಳೆದುಕೊಂಡು ದೇಶವು ಇಂದು ಬಡವಾಗಿದೆ ಎಂದ ಡಾ.ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಸಮಸ್ತ ಪರಿವಾರದ ವತಿಯಿಂದ ಭಾವಪÇರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿz್ದÁರೆ.

loading...