ಕಿಚ್ಚ ಅಭಿಮಾನಿಗಳಿಂದ ಪೈಲ್ವಾನ್ ಚಿತ್ರದ ಧ್ವನಿಸುರುಳಿ ಬಿಡುಗಡೆ

0
52

ಬೆಳಗಾವಿ: ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷಿತ ಸುದೀಪ ಅಭಿನಯದ ಚಿತ್ರವಾದ ಪೈಲ್ವಾನ್ ಧ್ವನಿಸುರುಳಿಯನ್ನು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಬೆಳಗಾವಿಯ ಜಿಲ್ಲಾ ಕಿಚ್ಚ ಸುದೀಪ ಸೇನಾ ಸಮಿತಿ ವತಿಯಿಂದ ರವಿವಾರ ಬಿಡುಗಡೆಗೊಳಿಸಿದರು.
ಬೆಳಗಾವಿಯ ಸುದೀಪ ಅಭಿಮಾನಿಗಳು ಅಲ್ಲಿ ಬಿಡುಗಡೆಗೊಂಡ ಧ್ವನಿ ಸುರುಳಿಯನ್ನು ಮೊತ್ತೊಮ್ಮೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹಸ್ತದಿಂದ ಬಿಡುಗಡೆಗೊಳಿದ್ದಾರೆ.
ಬೆಳಿಗ್ಗೆ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಿಂದ ಕಿಚ್ಚನಿಗೆ ಜೈಕಾರ ಹಾಕುವ ಮೂಲಕ ಗಣೇಶ ಮಂದಿರಕ್ಕೆ ತೆರಳಿ ಪೈಲ್ವಾನ್ ಚಿತ್ರ ನೂರು ದಿನಗಳು ಪ್ರದರ್ಶನಗೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧ್ವನಿ ಸುರುಳಿ ಬಿಡುಗಡೆಗೊಳಿಸಿದರು.
ಇದೇ ವೇಳೆ ಜಿಲ್ಲಾಧ್ಯಕ್ಷ ಶಂಕರ್ ಗೋರಕನ್ನವರ ಮಾತನಾಡಿ, ಪೈಲ್ವಾನ್ ಚಿತ್ರದ ಧ್ವನಿಸುರುಳಿ ಉತ್ತರ ಕರ್ನಾಟಕದಲ್ಲಿ ಚಿತ್ರದುರ್ಗದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ನಟ ಸುದೀಪ ತಿಳಿಸಿದ್ದರು. ಆದರೆ ಪ್ರವಾಹದಿಂದಾಗಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದಕ್ಕೆ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜಕುಮಾರ್ ಸಹ ಸಾಕ್ಷಿÃಯಾಗಿದ್ದರು. ಸುದೀಪ ಅವರು ಪೈಲ್ವಾನ ಚಿತ್ರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಬೇಕು ಎಂಬುವುದು ಅಭಿಮಾನಿಗಳ ಆಸೆಯಾಗಿತ್ತು. ಆದರೆ ಪ್ರವಾಹದಿಂದ ಆಗದೆ ಇರುವ ಕಾರಣ ಸರಳವಾಗಿ ಅಭಿಮಾನಿಗಳೇ ಇಲ್ಲೆÃ ಧ್ವನಿ ಸುರುಳಿ ಬಿಡುಗಡೆಗೊಳಿಸುತ್ತಿದ್ದೆವೆ. ನಟ ಸುದೀಪ ಅವರು ಸಹ ಈಗ ಆಗದೆ ಇರುವುದನ್ನು ಮುಂದಿನ ಚಿತ್ರಗಳನ್ನು ಗಡಿ ಜಿಲ್ಲೆ ಬೆಳಗಾವಿಯಲ್ಲಿಯೇ ಬಿಡುಗಡೆಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮ್ ಕಿಚ್ಚಾ, ಗೌರವಧ್ಯಕ್ಷ ಯಲ್ಲಪ್ಪನ್ನಾ, ಸಾಗರ್ ಗೋರಕನ್ನವರ್ , ಅಭಿ ಬಸ್ಸು ಸೇರಿದಂತೆ ಇತರರು ಇದ್ದರು.

loading...