ವೀರಶೈವ ಮಹಾಸಭೆ ಜಿಲ್ಲಾ ಘಟಕದಿಂದ ನೆರೆ ಸಂತ್ರಸ್ತರಿಗೆ ಸಾಮಗ್ರಿಗಳ ವಿತರಣೆ

0
6

ಬೆಳಗಾವಿ: ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ಚಿಕ್ಕೊÃಡಿ ತಾಲೂಕಿನ ಯಡೂರು ಹತ್ತಿರವಿರುವ ಚಂದೂರ ಹಾಗೂ ಟೆಕ ಗ್ರಾಮಗಳ ನಿರಾಶ್ರಿತ ಕೇಂದ್ರಗಳಿಗೆ ಬೆಳಗಾವಿ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಪದಾಧಿಕಾರಿಗಳು ಅಗತ್ಯ ವಸ್ತುಗಳ, ಸಾಮಗ್ರಿಗಳನ್ನು ವಿತರಿಸಿತು.
ಜಿಲ್ಲಾ ಘಟಕದ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಮಾತನಾಡಿ, ಪ್ರಕೃತಿಯಿಂದ ಆಕಸ್ಮಿಕವಾದ ಈ ಅವಘಡಕ್ಕೆ ರಾಜ್ಯದ ಜನತೆ ಕಂಬನಿ ಮಿಡಿಯುತ್ತಿದೆ, ಮನೆಸೂರುಗಳನ್ನು ಕಳೆದುಕೊಂಡ ನಮ್ಮವರಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರ ನಿರ್ದೇಶನ ನೀಡಿ ಮಾರ್ಗದರ್ಶಿಸಿದರು. ಅಂತೆಯೆ ಈ ಪ್ರದೇಶಗಳಿಗೆ ತೆರಳಿ ಸುಮಾರು ೧ ಲಕ್ಷ ೧೫ ಸಾವಿರ ರೂಪಾಯಿಗಳ ಹಾಸಿಗೆ ಹೊದಿಕೆ ಹಾಗೂ ಆಹಾರ ಸಾಮಗ್ರಿಗಳನ್ನು ನಾವು ಸಂತ್ರಸ್ತರ ಮನೆಬಾಗಿಲಿಗೆ ಹೋಗಿ ನೀಡುತ್ತಿದ್ದೆÃವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಸಭೆಯ ಪದಾಧಿಕಾರಿ ಡಾ.ಗುರುದೇವಿ ಹುಲೆಪ್ಪನವರಮಠ, ಶೈಲಜಾ ಸಂಸುದ್ದಿ, ಮಹಾನಂದಾ ಕರಲಿಂಗಣ್ಣವರ, ರಜನಿ ವಾಲಿ ಹಾಗೂ ಹಲವಾರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

loading...