ನೆರೆ ಸಂತ್ರಸ್ತರಿಗೆ ಗೃಹಪಯೋಗಿ ವಸ್ತುಗಳ ವಿತರಣೆ

0
9

ಬೆಳಗಾವಿಯ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ನೆರೆಪೀಡಿತ ಅಥಣಿ ತಾಲುಕಿನ ಮುಳವಾಡ, ಬೊಮ್ಕುಮನವಾಡ, ಕುಸನಾಳ, ಜುಗೂಳ, ಮಂಗಾವತಿ, ಚಿಕ್ಕೋಡಿ ತಾಲೂಕಿನ ಖೋತವಾಡಿ, ಮಾಂಜರಿ, ಅಂಕಲಿ ಸೇರಿದಂತೆ ವಿವಿಧ

ಗ್ರಾಮಗಳಿಗೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಖುದ್ದಾಗಿ ಸಂಚರಿಸಿ ಸಂತ್ರಸ್ತರಿಗೆ ಗೃಹಪಯೋಗಿ ಶನಿವಾರ ದಿ. ೨೪ರಂದು ವಸ್ತುಗಳನ್ನು ವಿತರಿಸಿದರು.
ಈ ಗ್ರಾಮಗಳ ನಿವಾಸಿಗಳು ನೆರೆಯಿಂದ ಎಲ್ಲವನ್ನೂ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿರುವುದು ಪರಿಗನಿಸಿ ಎಲ್ಲ ಸಂತ್ರಸ್ತರಿಗೆ ಮನೆಮನೆಗೆ ತೆರಳಿ
, ಎಳ್ಳೆಣ್ಣೆ,ತೆಂಗಿನ ಎಣ್ಣೆ, ಸಕ್ಕರೆ, ಬೇಳೆ, ಹಾಸಿಗೆ, ಹೊದಿಕೆಗಳು, ಬಿಸ್ಕತ್ತು, ಸೋಪ್, ಮನೆ ಸ್ವಚ್ಛತೆಗಾಗಿ ಪಿನಾಯಿಲ್, ಮಕ್ಕಳಿಗೆ, ವಯೋವೃದ್ದರಿಗೆ, ಮಹಿಳೆಯರಿಗೆ ವಿವಿಧ ನಮೂನೆಯ ಬಟ್ಟೆ ಬರೆಗಳನ್ನು ನೀಡಲಾಯಿತು. ಕಾಳು, ಬೇಳೆ, ಎಣ್ಣೆ , ಸಕ್ಕರೆ ಮೊದಲಾದ ಸಾಮಗ್ರಿಗಳ ಕಿಟ್ ಗಳನ್ನ ವಿತರಿಸಲಾಯಿತು.
ಪ್ರಚಾರ್ಯರಾದ ಪ್ರೊ. ರೋಹಿಣಿ ಕೆ.ಬಿ. ಹಾಗೂ ಆಡಳಿತ ಮಂಡಳಿಯ ನಿರ್ದೇಶನದಲ್ಲಿ ಪ್ರಾಧ್ಯಾಪಕ ಕೆ. ಎನ್. ದೊಡ್ಡಮನಿ ಹಾಗೂ ವೈಷ್ಷವಿ ಬಂಗ, ನಿಖಿಲ ಜೊಲ್ಲ, ಋತುಜಾ ಕಪಿಲೇಶ್ವರಿ, ಖುಷಿ ಕುಡಚಿ, ಸಂಪದಾ ಗುಮಾಸ್ತೆ ಅವರನ್ನು ಒಳಗೊಂಡ ತಂಡದ ಮೂಲಕ ನೆರೆಪೀಡಿತ ಗ್ರಾಮಗಳಿಗೆ ತೆರಳಿ ಗೃಪಯೋಗಿ ವಸ್ತುಗಳ ನೆರವು ನೀಡಲಾಯಿತು.

loading...