ಆಶ್ರಯ ಮನೆ ಹಂಚಿಕೆಯಲ್ಲಿ ತಾರತಮ್ಯ ಆರೋಪ; ಪ್ರತಿಭಟನೆ

0
17

ಬೆಳಗಾವಿ: ಆಶ್ರಯ ಯೋಜನೆಯ ಮನೆ ಹಂಚಿಕೆ ವಿಷಯದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆಶ್ರಯ ರಹಿತ ಕುಟುಂಬಗಳಿಗೆ ಮನೆ ಕೊಡುವ ಉದ್ದೆÃಶದಿಂದ ಅರ್ಜಿಗಳನ್ನು ಕರೆಯಲಾಗಿತ್ತು. ಆದರೆ ಅವುಗಳಲ್ಲಿ ಕೆಲವು ಅರ್ಜಿಗಳನ್ನು ತೆಗೆದುಕೊಂಡು ಹಲವು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ಆದಕ್ಕಾಗಿ ಹಂಚಿಕೆ ಮಾಡಿದ ಹಾಗೂ ತಿರಸ್ಕರಿಸಿದ ಪಟ್ಟಿಯನ್ನು ಕಚೇರಿಯ ನೋಟಿಸ್ ಬೋಡ್ ðನಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಂಚಬೇಕು. ಅಲ್ಲದೆ ಲಿಖಿತ ರೂಪದಲ್ಲಿ ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂಬುದನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಶ್ರಿÃನಗರ ಹಾಗೂ ಕಣಬರ್ಗಿಯಲ್ಲಿ ಆಶ್ರಯ ಯೋಜನೆಯಡಿ ನೀಡಿರುವ ಮನೆಗಳು ಈಗಾಗಲೇ ಮನೆ ಇದ್ದವರಿಗೆ ಮನೆ ನೀಡಲಾಗಿದೆ. ಇದರಿಂದ ಹಲವು ಅನುಮಾನಗಳಿಗೆ ಆಸ್ಪದ ಮಾಡಿದೆ ಎಂದು ಆರೋಪಿಸಿದ್ದಾರೆ
ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಗಂಗಾಧರ ರಮೇಶ ದೊಡ್ಡಮನಿ, ಕಸ್ತೂರಿ ಭಾವಿ ಸೇರಿದಂತೆ ಇತರರು ಇದ್ದರು.

loading...