ಸಂಚಾರಿ ಹೊಸ ನಿಯಮ; ಆಟೋ ಚಾಲಕರಿಂದ ವಿರೋಧ

0
28

ಬೆಳಗಾವಿ: ಹೊಸ ಸಂಚಾರಿ ನಿಯಮಗಳಿಂದ ಆಟೋ ಚಾಲಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಆಟೋ ಚಾಲಕರ ಜೀವನ ಸುಧಾರಣೆಗೆ ವಿಶೇಷ ಕಾಳಜಿ ವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಮಂಗಳವಾರ ಸಲ್ಲಿಸಿದರು.
ಹೊಸ ಸಂಚಾರಿ ನಿಯಮಗಳನ್ನು ಜಾರಿಗೊಳಿಸುವಲ್ಲಿ ಸರಕಾರ ಹಾಗೂ ಜಿಲ್ಲಾಡಳಿತದ ಆತುರದ ನಿರ್ಧಾರದಿಂದ ಆಟೋ ಚಾಲಕ ಹಾಗೂ ಮಾಲೀಕರಿಗೆ ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ. ಸಂಚಾರಿ ಪೋಲಿಸರು ಅತೀಯಾದ ದಂಡ ವಸೂಲಿಯಿಂದ ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ಅಲ್ಲದೆ ಮೀಟರ್ ಅಡವಳಿಕೆಯ ನಿಯಮದಿಂದ ನಗರ ಚಿಕ್ಕದಾಗಿದ್ದು,ಮೀಟರ ದರ ಕಡಿಮೆಯಾಗಿರುವುದರಿಂದ ಆದಾಯಕ್ಕೆ ಹಾನಿಯಾಗುತ್ತಿದೆ. ಇದರಿಂದ ಮೀಟರ್ ೪೦ ರು.ಗೆ ಹೆಚ್ಚಳ, ಶಾಲಾ ವಾಹನದಲ್ಲಿ ೧೨ ವರ್ಷದೊಳಗಿನ ೮ ಮಕ್ಕಳ ಕೊಂಡೊಯಲು ಅನುಮತಿ, ಆಟೋಗಳಿಗೆ ನಿರ್ಧಿಷ್ಟ ವಾದ ಹಾಗೂ ಅನುಕೂಲಕರವಾದ ವಾಹನ ನಿಲುಗಡೆಗೆ ಜಾಗ ನಿಗಧಿ ಪಡೆಸಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಕ್ಷ ವಾಜಿದ್ದ ಹಿರೇಕುಡಿ, ಗೌರವಾಧ್ಯಕ್ಷ ಆನಂದ ಬಡಿಗೇರ, ಪ್ರಕಾಶ ಚಿಕ್ಕಲಪಟ್ಟಿ, ರವಿ ಹಿರೇಮಠ, ಪ್ರಶಾಂತ ಬಿದರಿ, ಅಕ್ಬರ ಸಡೆಕರ, ಪ್ರಭು ಕಾಕತಿಕರ ಸೇರಿದಂತೆ ಆಟೋ ಚಾಲಕರು ಸಂದರ್ಭದಲ್ಲಿ ಭಾಗಿಯಾಗಿದ್ದರು.

loading...