ನೈರುತ್ಯ ರೈಲ್ವೆ ನೇಮಕಾತಿ ರದ್ದುಗೊಳಿಸುವಂತೆ ಒತ್ತಾಯ

0
35

ಬೆಳಗಾವಿ: ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ೨೨೦೦ ಡಿ ಗ್ರುಪ್ ಹುದ್ದೆಯ ನೇಮಕಾತಿಯನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ವತಿಯಿಂದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿಗೆ ಮಂಗಳವಾರ ಮನವಿ ಸಲ್ಲಿಸಿದರು.
೨೦೧೮ರಲ್ಲಿ ನಡೆಸ ಹುಬ್ಬಯ ರೈಲ್ವೆ ವಲಯದ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ೨೦೧೨ರಲ್ಲಿಯೂ ಸಹ ಇದೆ ರೀತಿ ೪೭೭೩ ಡಿ ಗ್ರುಪ್ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುವ ಸಂದರ್ಭ ಒದಗಿತ್ತು.ರಾಜ್ಯಾಧ್ಯಂತ ನಡೆದ ಪ್ರತಿಭಟನೆಯಿಂದಾಗಿ
ಸ್ಥಳಿಯರಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ಮತ್ತೆ ಕೇಂದ್ರಿಕೃತ ವ್ಯವಸ್ಥೆ ಯಿಂದ ಪರೀಕ್ಷೆ ಮಾಡಿ ಕನ್ನಡಿಗರಿಗೆ ಇಲಾಖೆ ಅನ್ಯಾಯ ಮಾಡಿದೆ. ಈ ಬಾರಿ ಹುದ್ದೆಗಳ ನೇಮಾಕತಿಯಲ್ಲಿ ಕನ್ನಡಿಗರು ೨೨ಜನ ಮಾತ್ರ ನೇಮಕವಾಗಿದ್ದಾರೆ. ಉಳಿದ ಹುದ್ದೆಗಳಿಗೆ ಬಿಹಾರ,ರಾಜಸ್ಥಾನ, ಮಧ್ಯಪ್ರದೇಶ ,ಉತ್ತರ ಪ್ರದೇಶದ ಅಭ್ಯರ್ಥಿಗಳಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ದಲ್ಲಿಕನ್ನಡಿಗರಿಗೆ ಆಧ್ಯತೆ ನೀಡದ ಇದ್ದರೆ ರೈಲ್ವೆ ವಲಯ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ನಿರಂತರ ಕನ್ನಡಿಗರ ಮೇಲೆ ಅನ್ಯಾಯ ನಡೆಯಿತಿದ್ದು, ತಕ್ಷಣ ನೇಮಕಾತಿಯನ್ನು ರದ್ದು ಪಡಿಸಬೇಕು ಇಲ್ಲದಿದ್ದರೆ ಹುಬ್ಬಳ್ಳಿ ನೆಲದಲ್ಲಿ ದೊಡ್ಡ ಕಾಂತ್ರಿಯೇ ನಡೆಯುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ನಗರ ಘಟಕ ಅಧ್ಯಕ್ಷ ಆನಂದ ಶಿರೂರ, ಮಹಿಳಾ ಘಟಕ ಮಂಜುನಾಥ ದಡಪದ, ಸುಷ್ಮಾ ಯಾದವಾಡ, ಲತಾ ಹಿರೇಮಠ ಸೇರಿದಂತೆ ಸಂಘಟನೆ ಸದಸ್ಯರು ಇದ್ದರು.

loading...