ವಿದ್ಯಾರ್ಥಿಗಳಲ್ಲಿ ದೈನಂದಿನ ಅಭ್ಯಾಸ ಪ್ರವೃತ್ತಿ ಮೂಡಿಸಿಕೊಳ್ಳಿ: ನಂಜಪ್ಪನವರ

0
15

ಬೆಳಗಾವಿ: ವಿದ್ಯಾರ್ಥಿಗಳು ಪ್ರತಿನಿತ್ಯ ದೈನಂದಿನ ಅಭ್ಯಾಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಾಲಕರ ಹತ್ತಿರದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಪಾಲಕರು ವಿದ್ಯಾರ್ಥಿಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುವುದು ಅತ್ಯವಶ್ಯಕವಾಗಿದೆ ಎಂದು ಪ್ರಾಚಾರ್ಯ ಪ್ರೊ. ಎಸ್.ಜಿ. ನಂಜಪ್ಪನವರ ನುಡಿದರು.

ನಗರದ ಕೆಎಲ್‌ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ೨೦೧೯-೨೦ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ “ಪಾಲಕರ ಸಮಾವೇಶ” ಇತ್ತಿಚೀಗೆ ಸರ್. ಸಿ.ವ್ಹಿ. ರಾಮನ್ ಸಭಾಂಗಣದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳ ಮನಸ್ಸಿನ ಮೇಲೆ ಮೆಡಿಕಲ್ ಕೋರ್ಸು ಮತ್ತು ಇಂಜನಿಯರಿಂಗ್ ಕೋರ್ಸ್ಗಳನ್ನು ಓದಲು ಒತ್ತಡ ಹೇರದಂತೆ ಆಸಕ್ತಿ ಮೂಡಿಸಬೇಕು. ಮಕ್ಕಳ ಆಸಕ್ತಿಗನುಸಾರವಾಗಿ ವೃತ್ತಿಪರ ವಿವಿಧ ಕೋರ್ಸುಗಳನ್ನು ಅಧ್ಯಯನ ಮಾಡಲು ಸದಾವಕಾಶಗಳಿವೆ. ಪಿಯುಸಿಯಲ್ಲಿ ಸಾಧನೆಗೈಯಲು ವಿಜ್ಞಾನ ವಿಷಯಗಳ ಜೊತೆ-ಜೊತೆಗೆ ಭಾಷಾ ವಿಷಯಗಳಿಗೂ ಪ್ರಾಮುಖ್ಯತೆಯನ್ನು ನೀಡಿ ಅಧ್ಯಯನ ಮಾಡಿದಾಗ ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆಯಲು ಸಹಕಾರಿಯಾಗುತ್ತದೆ ಮತ್ತು ಸಾಧನೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ. ಪಾಲಕರು ಮೊಬೈಲಿನ ಸಾಮಾಜಿಕ ಜಾಲತಾಣಗಳಿಂದ ಮಕ್ಕಳಿಂದ ದೂರವಾಗಿರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

loading...