ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

0
33

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಶಿರಗೂರು ಮತ್ತು ಖೇಮಲಾಪುರ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಸಂಯೋಗದಲ್ಲಿ ಅಕ್ಕಿ,ಶಾವಿಗೆ , ಮಕ್ಕಳ ಉಡುಪು, ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ ಸಾಂತ್ವನ ಹೇಳಿದ್ದಾರೆ.
ಇದೇ ವೇಳೆ ಫೇವಾಡ್ ð ರಾಜ್ಯಾಧ್ಯಕ್ಷ ಆಚಿಜನೇಯ ರೆಡ್ಡಿ ಮಾತನಾಡಿ, ಮಳೆಯಿಂದ ಮನೆಯನ್ನು ಕಳೆದುಕೊಂಡಿದ್ದು, ಆದಷ್ಟು ಬೇಗ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಆಶ್ರಯವನ್ನು ಕಲ್ಪಿಸಬೇಕು. ಇದಕ್ಕೆ ನಾವು ಸಹ ಕೈ ಜೋಡಿಸುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಅಧ್ಯಕ್ಷ ಕೆ.ಭೀಮಾ, ಅನಿತಾ, ರಾಮಚಂದ್ರಪ್ಪಾ, ವೀರಭದ್ರಯ್ಯಾ, ಸುಮಿತ್ರಾ, ಮುನಿಕೃಷ್ಣಾ, ಮಂಜುನಾಥ , ಬೆಳಗಾವಿಯ ಅಧ್ಯಕ್ಷ ಸಂಜಯ ಮಗದುಮ್ಮ ,ಕಾರ್ಯದರ್ಶಿಗಳು ಹಾಜರಿದ್ದರು.

loading...