ಧರ್ಮ ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ: ಶ್ರಿÃಗಳು

0
44

ಮೂಡಲಗಿ : ಹಣದ ಆಸೆಗಾಗಿ ಹೀನ ಕೆಲಸ ಮಾಡುವುದು ಮಹಾ ಪಾಪ ಅಹಿಂಸಾ ಪರಮೋಧರ್ಮ ಎಂಬ ತತ್ವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಎಂದು ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರಿÃಗಳು ಹೇಳಿದರು.
ಅವರು ಹೊನಕುಪ್ಪಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಬಸವಗೋಪಾಲ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ ಅವರು, ಮಾನವರು ಶ್ರೆÃಷ್ಠ ಮಾನವ ಜನ್ಮಕ್ಕೆ ಬಂದಮೇಲೆ ಮಾನವನಾಗಬೇಕು ಹೊರತು ದಾನವರಾಗಬಾರದು. ಸರಕಾರದವರು ಸರ್ಕಾರಿ ಹುದ್ದೆಯನ್ನು ಜನರಿಗೆ ನೀಡುವಾಗ ಹಣ ನೀಡಿದವರಿಗೆ ಮಾತ್ರ ಕೊಡದೆ ಅವರ ವಿದ್ಯಾ ಬುದ್ದಿ ಸಾಮರ್ಥ್ಯವನ್ನು ಅಳೆದು ಮತ್ತು ಆ ಕೆಲಸವನ್ನು ನಿಷ್ಠೆಯಿಂದ ಮಾಡುವರಿಗೆ ನೀಡಬೇಕು. ಬಡವ ಶ್ರಿÃಮಂತ ಮೇಲು ಕೀಳು ಎಂಬ ಬೇದ ಭಾವ ಮಾಡಬಾರದು. ಅತಿಯಾದ ಆಸೆ ದುಖಕ್ಕೆ ಕಾರಣವಾಗುತ್ತದೆ ಸುಳ್ಳ ತುಡುಗ ಬಿಟ್ಟು ದಾನ ಧರ್ಮ ಮಾಡಿದರೆ ಆತ್ಮದ ಕಲ್ಯಾಣವಾಗಿ ಜೀವನವು ಸುಖಮಯವಾಗಲು ಸಾದ್ಯ “ದೇವನೊಬ್ಬ ನಾಮ ಹಲವು” ಹಳ್ಳ ಕೊಳ್ಳ ನದಿ ನೀರು ಎಲ್ಲುವು ಸೇರಿ ಸಮುದ್ರಕ್ಕೆ ಸೇರುತ್ತದೆ ಹಾಗೆಯೆ ನಿಮ್ಮ ಇಷ್ಠ ದೇವತೆ ನಾಮ ಸ್ಮರಣೆ ಮಾಡಿದರೆ ಅದು ಸರ್ವದೇವಾದಿಗಳಿಗೆ ಸಲ್ಲುತ್ತದೆ. ಭಕ್ತಿ ಮಾಡುವರಿಗೆ ನೀಚ ಜನ ಆತಂಕ ಮಾಡುವರು ಲಕ್ಷ ಕೊಡದೆ ಸತ್ಯದ ಮಾರ್ಗವನ್ನು ಬಿಡಬೇಡಿ ಭಾವ ಭಕ್ತಿ ಶುದ್ದ ಇಲ್ಲದೆ ಮೂರು ಹೊತ್ತು ಪೂಜೆ ಮಾಡಿದರೆ ಪ್ರಯೋಜನವಿಲ್ಲ ನೀಜವಾದ ಭಕ್ತಿಗೆ ಮಾತ್ರ ದೇವರು ಒಲಿಯುತ್ತಾನೆ ಆಸ್ತಿ ಅಂತಸ್ತು ಅಧಿಕಾರದ ಅಹಂ ಭಾವದಿಂದ ಸಂತ ಮಹಾತ್ಮರಿಗೆ ನಿಂದಾಡಿದರೆ ಪಾಪಕ್ಕೆ ಗುರಿಯಾಗಬೇಕಾಗುತ್ತದೆ. ಜಗತ್ತಿನಲ್ಲಿ ಅನ್ಯಾಯ ಮಾಡುವರಿಗೆ ಉಳಿಗಾಲವು ಇಲ್ಲ ಅದಕ್ಕಾಗಿ ಕರ್ಮದ ಹಾದಿಯನ್ನು ಬಿಟ್ಟು ಧರ್ಮದ ದಾರಿಯಲ್ಲಿ ನಡೆಯಿರಿ ಎಂದುಹೇಳಿದರು.
ಚಿಪ್ಪಲಕಟ್ಟಿಯ ಕಲ್ಮೆÃಶ್ವರ ಮಹಾಸ್ವಾಮಿಗಳು ಮಾತನಾಡಿ, ಶದ್ವ ಭಕ್ತಿಯಿಂದ ನಾಮಸ್ಮರಣೆ ಮಹಾತ್ಮರ ಆಶೀರ್ವಾದ ನಮಗೆ ದೊರೆಯುವುದು ಶ್ರಿÃ ಕೃಷ್ಣ ಪರಮಾತ್ಮನ ಅವತಾರವೆ ದಾನೇಶ್ವರ ಶ್ರಿÃಗಳದ್ದು ಅದಕ್ಕಾಗಿ ಅನ್ನ ದಾಸೋಹ ಜ್ಞಾನ ದಾಸೋಹ ನಿರಂತರ ನಡೆಸಿ ಭಕ್ತರನ್ನು ಉದ್ದಾರ ಮಾಡುತ್ತಿದ್ದಾರೆ ಪೂರ್ಣವಾಗಿ ನಂಬಿದ ಭಕ್ತರಿಗೆ ಕಾಮದೇನು ಕಲ್ಪವೃಕ್ಷವಾಗಿದ್ದಾರೆ ಎಂದು ಹೇಳಿದರು.
ಪ್ರಾರಂಭದಲ್ಲಿ ಮುಂಡಗಿ ಪದಾ ಭಂದ ಭಕ್ತರಿಂದ ಬಂಡಿಗಣಿ ಮಠದಿಂದ ಆದ ಪವಾಡಗಳನ್ನು ಧರ್ಮಸಭೆಯಲ್ಲಿ ಹಂಚಿಕೊಂಡರು. ಮಹಾಂತೇಶ ಮಠದ ಬಿ.ಕೆ ಪುಕ್ಸೆಟ್ಟಿ ಪಿ.ಎಚ್ ಹೆಗಡೆ ಎಚ್.ಕೆ ಅಲಕನೂರ ಚತುರ ಲಗಳಿ ರಾಮನ್ನ ಹೆಗಡೆ ರಂಗಪ್ಪ ಹೆಗಡೆ ಬಾಳಪ್ಪ ಹುಲಗನ್ನವರ ಅನೇಕರು ಉಪಸ್ಥತರಿದ್ದರು. ಕಾರ್ಯಕ್ರಮವನ್ನ ವಾಯ್.ಆರ್ ಯಲ್ಲಟ್ಟಿ ನಿರೂಪಿಸಿ ಮುರಿಗೆಪ್ಪ ಮಾಲಗಾರ ವಂದಿಸಿದರು.

loading...