ಕ್ರಿÃಡೆ ಮಕ್ಕಳಿಗೆ ಕಲಿಕಾ ಹಂತದಲ್ಲಿ ಆತ್ಮಸ್ಥೆöÊರ್ಯ ಮೂಡಿಸುತ್ತವೆ: ಅಲಾಸೆ

0
32

ರಾಮದುರ್ಗ: ಕ್ರೀಡಾ ಚಟುವಟಿಕೆಗಳು ಮಕ್ಕಳ ಕಲಿಕಾ ಹಂತದಲ್ಲಿ ಆತ್ಮಸ್ಥೈರ್ಯ, ಶಾರೀರಿಕ ಸದೃಢತೆ ಉಂಟು ಮಾಡುತ್ತವೆ. ಕಾರಣ ಎಲ್ಲ ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿ ಅವುಗಳಲ್ಲಿ ಪಾಲ್ಗೊಂಡು ಉನ್ನತ ಮಟ್ಟದ ಸಾಧನೆ ಮಾಡುವತ್ತ ಗಮನ ಹರಿಸಬೇಕೆಂದು ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್ ಅಲಾಸೆ ತಿಳಿಸಿದರು.
ತಾಲೂಕಿನ ಶ್ರೀಕ್ಷೇತ್ರ ಗೋಡಚಿ ಗ್ರಾಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶ್ರೀಮತಿ ಸುಶೀಲಾಬಾಯಿ ವೈ ಕುಲಗೋಡ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತಿಹಾಸದ ಮಹಾನ್ ಕ್ರೀಡಾ ಸಾಧಕರು ಅವರು ಮಾಡಿದ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಾಗಿದೆ. ಕಲಿಕೆಯ ಹಂತದಲ್ಲಿ ಪರಿಶ್ರಮಪಟ್ಟು ಉತ್ತಮ ಹವ್ಯಾಸ ರೂಡಿಸಿಕೊಂಡು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಮುನ್ನುಗ್ಗಿದಾಗ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಕ್ರೀಡಾ ಸಂಯೋಜಕ ಎಂ ಸಿ ಧನವಂತರ್ ಮಾತನಾಡಿ, ಕ್ರೀಡಾಪಟುಗಳು ಕ್ರೀಡೆ ನಡೆಯುವ ಸಂದರ್ಭದಲ್ಲಿ ಯಾವುದೇ ತಂಟೆ ತಕರಾರು ಮಾಡದೆ ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಈ ತಾಲೂಕ ಮಟ್ಟದ ಕ್ರೀಡಾ ಚಟುವಟಿಕೆ ಯಶಸ್ವಿಗೆ ಸಹಕರಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ ಪು ಕಾಲೇಜು ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಟಿ. ದಾಮೋದರ್ ಮಾತನಾಡಿ, ಮಹಾವಿದ್ಯಾಲಯವು ಕ್ರೀಡಾ ಚಟುವಟಿಕೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತೋಷದ ವಿಷಯ. ಅದೇ ರೀತಿ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯ ಎಸ್ ಐ ಪುರಾಣಿಕ, ಶಿಕ್ಷಣ ತಜ್ಞ ವೆಂಕಟೇಶ್ ಹುಣಸಿಕಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಬಿಬಿ ಕಬಾಡಗಿ ಎಸ್. ಬಿ ಬಾವನ್ನವರ, ಎಲ್ ಆಯ್ ಕಾಮನ್ನವರ, ಡಿ ವಿ ಕಡಗದ, ಎಚ್ ಆಯ್ ಕಾಮಣ್ಣವರ, ಪಿಎಂ ಮಲ್ಲಾಪುರ, ಹುಸೇನ್ ಸಾಬ್ ಬಡೇಕಾನ್,ಎಸ್ ಬಿ ಮಠಪತಿ, ಸಂಗಪ್ಪ ಪಾಕನಟ್ಟಿ ತಾಲೂಕಿನ ಪದವಿ ಪೂರ್ವ ಮಹಾವಿದ್ಯಾಲಯಗಳು ಉಪನ್ಯಾಸಕರು ಹಾಗೂ ಗೊಡಚಿ ಗ್ರಾಮಸ್ಥರು ಸೇರಿದಂತೆ ಇತರರಿದ್ದರು.
ಪ್ರಾಚಾರ್ಯ ಎಂ ಬಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು,ಡಾ. ಆರ್ ಎಲ್ ಕುಳ್ಳುರ, ಕುಮಾರಿ ಅಂಗಡಿ ನಿರೂಪಿಸಿದರು, ಜಮಖಾನ ಉಪಾಧ್ಯಕ್ಷ ಡಿ ಎಂ ಮೊಗೇರ ವಂದಿಸಿದರು.

loading...