ಪ್ರವಾಹ ಪೀಡಿತ ಪ್ರದೇಶಗಳಿಗೆ ಎಂ.ಬಿ ಪಾಟೀಲ ಭೇಟಿ

0
8

ರಾಮದುರ್ಗ: ತಾಲೂಕಿನ ಮಲಪ್ರಭ ನದಿಯ ದಂಡೆಯಲ್ಲಿರುವ ಹಂಪಿಹೊಳ್ಳಿ,ಗೊಣ್ಣಾಗರ, ಮಾರಡಗಿ, ಸಂಗಳ ಸೇರಿದಂತೆ ವಿವಿಧ ಗ್ರಾಮಕ್ಕೆ ಪ್ರವಾಹ ಪೀಡಿತ ಪ್ರದೇಶಗಳ ವಿಕ್ಷಣೆಗೆ ಮಾಜಿ ಗೃಹ ಸಚಿವ ಎಂ.ಬಿ ಪಾಟೀಲ ಭೇಟಿ ನೀಡಿದ್ದರು.
ಒಡ್ಡು ಒಡೆದು ಕಾರಣ ನೀರು ಗ್ರಾಮಗಳಿಗೆ ನುಗ್ಗಿ ಸಂಪೂರ್ಣ ಮನೆಗಳು ಫಲವತ್ತಾದ ಬೆಳೆಗಳು ಕಳೆದುಕೊಂಡಿರುತ್ತಾರೆ. ಆದ್ದರಿಂದ ಸಂಬಂದ ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಮತ್ತು ಕೂಡಲೆ ಪರಿಹಾರ ನೀಡುವ ರೀತಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ, ಮಾಜಿ ಸಚಿವ ವಿನಯ ಕುಲಕರ್ಣಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಗ್ರಾಮದ ಮುಖಂಡ ಈರನಗೌಡ ಪಾಟೀಲ, ಸಂತೋಷ ಮಂಕನಿ, ಹನಮಂತ ಬಾಡಗಾರ, ಗೊವಿಂದಗೌಡ ಪಾಟೀಲ, ತಿಮ್ಮಣ್ಣಾ ಜಗಾಪೂರ, ದೇವರಡ್ಡಿ ಜಗಾಪೂರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...