ವಾಹನ ಚಾಲನೆಯಲ್ಲಿ ಕಟ್ಟುನಿಟ್ಟಾದ ನಿಯಮ ಪಾಲಿಸಿ: ಡಿಸೋಜಾ

0
39

 

ಕುಮಟಾ: ಟ್ಯಾಕ್ಸಿ ಚಾಲಕರು ಸಂಘಟನೆ ಮೂಲಕ ಆನೆಯನ್ನು ಕಟ್ಟಿ ಹಾಕುವಷ್ಟು ಬಲ ತಂದುಕೊಂಡಿದ್ದಾರೆ. ಇದೇ ರೀತಿ ವಾಹನ ಚಾಲನೆಯಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಿಕೊಳ್ಳಬೇಕು. ಅಲ್ಲದೇ ಶಿಸ್ತು ಪಾಲನೆ ವ್ರತ್ತಿಗೆ ಹಿರಿಮೆ ತರುತ್ತದೆ. ಪ್ರಯಾಣಿಕರ ಮನ ಗೆಲ್ಲುವ ಪ್ರವ್ರತ್ತಿಯನ್ನು ಚಾಲಕರು ಬೆಳಿಸಿಕೊಳ್ಳಬೇಕೆಂದು ಭಟ್ಕಳದ ಡಿವ್ಯೆಎಸ್ಪಿ ವೆಲ್ಲಂಟೈನ ಡಿಸೋಜಾ ಹೇಳಿದರು.
ಅವರು ಮಂಗಳವಾರ ಪಟ್ಟಣದ ಮಹಾಸತಿ ಸಭಾಭವನದಲ್ಲಿ ಕರ್ನಾಟಕ ಟ್ಯಾಕ್ಸಿ ಡ್ರೆö್ಯರ‍್ಸ ಸಂಘಟನೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟ್ಯಾಕ್ಸಿ ಚಾಲಕ ಮಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಎದುರಿಗೆ ಬರುವ ವಾಹನ ಚಾಲಕನ ಮನಸ್ಥಿತಿ ತಿಳಿದು ಚಾಲನೆ ಮಾಡಿದರೆ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು. ಜಾಗ್ರತಿಯ ಚಾಲನೆ ಸುರಕ್ಷತೆ ಕಾಪಾಡುತ್ತದೆ. ಅಪರಿಚಿತ ವಾಹನಗಳ ಬಗ್ಗೆ ಟ್ಯಾಕ್ಸಿ ಚಾಲಕರು ಮಾಹಿತಿ ನೀಡಬೇಕು. ಅದರಂತೆ ಪ್ರತಿ ನಿಮಿಷಕ್ಕೆ ಒಂದು ಅಪಘಾತ ಸಂಭವಿಸುತ್ತದೆ. ನೂರಾರು ಅಪಘಾತಗಳಿಂದ ರಸ್ತೆಯಲ್ಲಿ ರಕ್ತ ಚಲ್ಲುತ್ತದೆ. ಇದನ್ನು ನಿಯಂತ್ರಿಸಲು ಚಾಲಕರು ಎಚ್ಚರ ವಹಿಸಬೇಕು ಎಂದರು.

ಜನಪರ ಹೋರಾಟಗಾರ ಆರ್ ಜಿ ನಾಯ್ಕ ಮಾತನಾಡಿ, ಖಾಸಗಿ ವಾಹನಗಳ ಬಾಡಿಗೆಯಿಂದ ಟೂರಿಸ್ಟ ಟ್ಯಾಕ್ಸಿಗಳ ಮಾಲೀಕರಿಗೆ ನಷ್ಟವಾಗುತ್ತದೆ. ಇದನ್ನು ಪೊಲೀಸ ಇಲಾಖೆ ಗಮನಿಸಬೇಕಾಗಿದೆ. ಇಂದು ಚಾಲಕರನ್ನು ನೋಡುವ ಮನಸ್ಥಿತಿ ಜನರಲ್ಲಿ ಬದಲಾಗಿದೆ. ಕಷ್ಟ ಕಾಲದಲ್ಲಿ ನೆರವಾದರೆ ಪ್ರಿತಿ ವಿಶ್ವಾಸ ಬೆಳೆಯುತ್ತದೆ. ಇದರಿಂದ ಸಂಘಟನೆಗೆ ಬಲ ಬರುತ್ತದೆ. ಅಲ್ಲದೇ ಟ್ಯಾಕ್ಸಿ ಚಾಲಕರ ಸಮಸ್ಯೆ ಬಗೆ ಹರಿಸಬೇಕಾದ ಸಾರಿಗೆ ಅಧಿಕಾರಿ ಅಹ್ವಾನ ನೀಡಿದರು ಬಾರದಿರುವದು ವಿಷಾದಕರ ಎಂದು ಬೇಸರವ್ಯಕ್ತಪಡಿಸಿದರು. ಪಿಎಸ್‌ಐ ಸಂಪತ ಮಾತನಾಡಿ, ಟ್ಯಾಕ್ಸಿ ಚಾಲಕರ ಬದುಕು ಕಷ್ಟ. ಆರೋಗ್ಯ ಸದ್ರಢತೆ ಚಾಲನೆಗೆ ಅಗತ್ಯ. ದುಡಿದ ಹಣ ಮಕ್ಕಳ ಭವಿಷ್ಯ ಕಟ್ಟಲು ವ್ಯಯಿಸಬೇಕು. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು. ವಾಹನದ ಕಾಗದ ಪತ್ರಗಳನ್ನು ಅಚ್ಚುಕಟ್ಟಾಗಿರಿಸಿಕೊಳಬೇಕು. ಆಕಸ್ಮಿಕವಾಗಿ ಬರಬಹುದಾದ ಹ್ರದಯಾಘಾತ ಮುಂತಾದ ಕಾಯಿಲೆಗಳಿಂದ ತುರ್ತು ಪಾರಾಗಲು ಅಗತ್ಯ ಔಷಧಿಗಳನ್ನು ಸದಾ ಜೊತೆಯಲ್ಲಿಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಖಾಸಗಿ ಲಘು ವಾಹನಗಳಲ್ಲಿ ಬಾಡಿಗೆ ಓಡಿಸುತ್ತಿರುವದನ್ನು ತಡೆಯುವಂತೆ ಡಿವ್ಯೆಎಸ್ಪಿ ವೆಲ್ಲಂಟೈನ ಡಿಸೋಜಾ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಟಿಡಿಓ ರಾಜ್ಯಾಧ್ಯಕ್ಷ ರಮೇಶ ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು. ಕೆಟಿಡಿಓ ರಾಜ್ಯ ಕಾರ್ಯದರ್ಶಿ ಆರೀಫ ಉಜಿರೆ, ಕೆಟಿಡಿಓ ರಾಜ್ಯ ರಕ್ಷಾಧಿಕಾರಿ ಇಕ್ಬಾಲ ಬಿ.ಸಿ.ರೊಡ ಮೊದಲಾದವರು ಉಪಸ್ಥಿತರಿದ್ದರು. ಭಟ್ಕಳದ ಬಾಬಣ್ಣ ಸ್ವಾಗತಿಸಿದರು. ಬೆಳ್ತಂಗಡಿಯ ಎಂ ಸಿ ಪ್ರಜ್ವಲ ನಿರುಪಿಸಿದರು.

loading...