ಆರ್ಥಿಕ ಹಿಂಜರಿತದತ್ತ ಭಾರತ ದೇಶ

0
22

ಆರ್ಥಿಕತೆ ಇಳಿತ ನಮಗೆ ಗೊತ್ತಿಲದ್ದಂತೆ ದಿನೆ ದಿನೆ ಎರಗುತ್ತಿದ್ದು, ಉದ್ದಿಮೆದಾರರಿಗೆ ಸಾಮಾನ್ಯ ಜನರಿಗೆ ತೊಂದರೆಯಾಗಿದ್ದು ಅದನ್ನು ಎದುರಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಪ್ರಗತಿ ಕುಂಠಿತಗೊಂಡಿದ್ದು ಒಟ್ಟು ದೇಶಿ ಉತ್ಪನ್ನವು 20 ತ್ರೈಮಾಸಿಕಗಳ ಹಿಂದಿನ ಮಟ್ಟಕ್ಕೆ ಹೋಗಿದೆ. ಬಹುತೇಕ ವಲಯಗಳಲ್ಲಿ ಭಾರಿ ಹಿಂಜರಿತವಿರುವದು ಆತಂಕ ಮೂಡಿಸಿದೆ. ಕಳೆದ ಹಲವು ತಿಂಗಳುಗಳಿಂದ ಉದ್ದಿಮೆಗಳಲ್ಲಿ ಉತ್ಪಾದನೆ ಕುಂಠಿತವಾಗುತ್ತಿದೆ. ಮಾರಾಟ ವಹಿವಾಟುಗಳು ನಿಧಾನಗೊಂಡಿವೆ. ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ. ಅನೇಕ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳು ಅಂದಾಜು 500 ಕಂಪನಿಗಳು ದಿವಾಳಿ ಅಂಚಿನಲ್ಲಿವೆ. ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ, ರೇಟಿಂಗ್ ಸಂಸ್ಥೆಗಳು, ಹಾಗೆಯೆ ದೇಶಿಯ ಆರ್ಥಿಕ ತಜ್ಞರು ಆರ್ಥಿಕ ಬೆಳವಣಿಗೆಯ ಕುಂಠಿತವನ್ನು ಅಂದಾಜಿಸಿದ್ದಾರೆ. ಇದು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ ಜಾಗತಿಕ ಆರ್ಥಿಕತೆಯ ಮೇಲೆ ಕರಿನೆರಳು ಬಿಳುತ್ತಿರುವುದು ಸದ್ದಿಲ್ಲದೆ ನಡೆಯುತ್ತಿದೆ. ಅಮೇರಿಕಾ, ಚೀನಾ ಸಂಬಂಧ ಹದಗೆಡುತ್ತ್ತಿದೆ. ಅಷ್ಟೇ ಅಲ್ಲದೇ ಇರಾನ್, ರಷ್ಯಾ, ಕೋರಿಯಾ ಹಾಗೂ ಅನೇಕ ರಾಷ್ಟ್ರಗಳೋಡನೆ ಅಮೇರಿಕಾದ ಸಂಬಂಧ ಹಳಸುತ್ತಿದೆ, ಹಾಗೇಯೆ ಐರೋಪ್ಯ ಒಕ್ಕೂಟದಲ್ಲಿನ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸುತ್ತಿದೆ. ಪಕ್ಕದ ಪಾಕಿಸ್ತಾನದ ಪರಿಸ್ತಿತಿ ಈಗಾಗಲೆ ಹದಗೆಟ್ಟಿದ್ದು ಒಂದೇ ವಾಕ್ಯದಲ್ಲಿ ಹೇಳಬೆಕೆಂದರೆ ಅದು ಭಸ್ವಾಸುರನ ಅವತಾರ ತಾಳುತ್ತಿದೆ ಎನ್ನಬಹುದು. ವರದಿಯ ಪ್ರಕಾರ ಮಾರ್ಚ 2019 ಕ್ಕೆ, ಸುಮಾರು 378 ಕಂಪನಿಗಳು 257642 ಕೋಟಿ ಸಾಲದೊಂದಿಗೆ ದಿವಾಳಿ ಅಂಚಿನಲ್ಲಿವೆ.
ಭಾರತದ ಕೇಂದ್ರ ಸರ್ಕಾರ ರೈತರ ಆಧಾಯವನ್ನು 2022ರವಳಗೆ ದ್ವಿಗುಣ ಗೊಳಿಸುತ್ತೆವೆ ಹಾಗೂ ಆರ್ಥಿಕತೆ ಐದು ಟ್ರೀಲಿಯನ್ ಡಾಲರಗೆ ಒಯ್ಯುತ್ತೇವೆ ಎಂದು ಹೇಳುತ್ತಿರುವುದು ನಗೆಪಾಟಿಲಗೆ ಈಡಾಗುತ್ತಿದ್ದೆಯೇನೊ! ಎಂದು ಅನೇಕ ಸಲ ಆರ್ಥಿಕ ತಜ್ಞರು ಸಂದೇಹ ಪಡುತ್ತಿದ್ದಾರೆ. ಆರ್ಥಿಕ ವೃದ್ಧಿ ದರವು ಕಳೆದ ಮಾರ್ಚ ತಿಂಗಳಲ್ಲಿ ಐದು ವರ್ಷಗಳಲ್ಲಿಯೆ ಕನಿಷ್ಟ ಮಟ್ಟದಲ್ಲಿ ಮುಟ್ಟಿದ್ದು ಸಾರ್ವಜನಿಕರ ಆತ್ಮವಿಶ್ವಾಸ ಕುಂದಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಅನೇಕ ಆರ್ಥಿಕ ಸುಧಾರಣೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿದೆ. ವಿತ್ತೀಯ ಉತ್ತೇಜನ ಕೊಡುಗೆ, ಹಣದುಬ್ಬರ ನಿಯಂತ್ರಣ ತಕ್ಷಣಕ್ಕೆ ಸಹಾಯವಾಗುವುದಿಲ್ಲವಾದರು ಅದರ ಪ್ರತಿಫಲಕ್ಕಾಗಿ ನಾವು ಕಾಯಲೇಬೆಕು.
ಆಟೋಮೋಬೈಲ್ ವಲಯದಲ್ಲಿ ಕಳೆದ ಎರಡು ದಶಕಗಳಲ್ಲಿಯೆ ತೀವ್ರ ಸ್ವರೂಪದ ಬಿಕ್ಕಟು ಎದುರಿಸುತ್ತಿದೆ. ಪ್ರತಿಷ್ಟಿತ ಕಂಪನಿಗಳಲ್ಲಿ ಹಾಗೂ ಬಿಡಿ ಭಾಗ ತಯಾರಿಕಾ ವಲಯದಲ್ಲಿ ಸಾವಿರಾರು ಉದ್ಯೋಗಗಳ ಕಡಿತವನ್ನು ನೋಡುತ್ತಿದ್ದೇವೆ. ಸುಮಾರು ಮೂರು ಕೋಟಿಗಳಿಗಿಂತಲು ಹೆಚ್ಚ ಜನರಿಗೆ ಉದ್ಯೋಗ ನಿಡುತ್ತಿರುವ ಈ ಸಂಸ್ಥೆ ಕಳೆದ ಜುಲೈ ತಿಂಗಳಲ್ಲಿ ಗರಿಷ್ಟ ಕುಸಿತ ಕಂಡಿದ್ದು ಕಳವಳಕಾರಿ ಸಂಗತಿ. ಮಾರಾಟ ಕ್ಷೇತ್ರದಲ್ಲಿ ಕುಸಿತ ಕಂಡಿರುವುದರಿಂದ ಬರುವ ದಿನಗಳಲ್ಲಿ ಲಕ್ಷಾಂತರ ಉದ್ಯೋಗ ಕಡಿತಗೊಳ್ಳುವ ಆಂತಕವಿದೆ.
ಎಫ.ಎಮ್.ಸಿ.ಜಿ ವಲಯ: ಈ ವಲಯ ಯಾವಾಗಲೂ ಸಕಾರಾತ್ಮಕ ಬೆಳವಣಿಗೆ ಇರುವುದನ್ನು ನಾವು ನೊಡಿದ್ದೇವೆ ಆದರೆ ಇಲ್ಲಿಯೂ ಕೂಡಾ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕವೆನ್ನಿಸುತ್ತಿದೆ. ಅತ್ಯಂತ ವೇಗವಾಗಿ ಅಭೀವೃದ್ದಿ ಹೊಂದಿದ ಪತಂಜಲಿ ಕಂಪನಿ ಕಳೆದ ಒಂದು ವರ್ಷದಿಂದ ಆತಂಕಕಾರಿ ಸ್ಥಿತಿಯಲ್ಲಿರುವುದನ್ನು ಆ ಕಂಪನಿ ನೀಡುತ್ತಿರುವ ಜಾಹಿರಾತಿನ ಕಡಿತದಿಂದಲೆ ತಿಳಿಯಬಹುದು. 2018 ರ ಹಣಕಾಸು ವರ್ಷದಲ್ಲಿ ಈ ಕಂಪನಿ ಶೇ: 10 ಆಧಾಯ ಕೊರತೆಯನ್ನು ತೊರಿಸಿದೆ. ಜೊತೆಗೆ ಹಿಂದುಸ್ಥಾನ ಯುನಿಲಿವರ ನಂತಹ ಅನೇಕ ಕಂಪನಿಗಳು ಸಂಕಷ್ಟಕ್ಕೆ ಇಡಾಗಿವೆ.
ಸಾರಿಗೆ ಕ್ಷೇತ್ರದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 2018 ನವ್ಹೆಂಬರನಿಂದ ಟ್ರಕ್ ಬಾಡಿಗೆಗಳಲ್ಲಿ ಶೇಕಡಾ 15 ಕುಸಿತ ಕಂಡುಬಂದಿದೆ. ಅಷ್ಟೇ ಅಲ್ಲದೆ ಸರಕು ಸಾಗಾಣಿಕೆ ಶೇಕಡಾ 25 ರಷ್ಟು ಕಡಿಮೆಯಾಗಿದ್ದನ್ನು ವರದಿಮಾಡಿದೆ. ಇದರಿಂದ ಸಾರಿಗೆದಾರರ ಆಧಾಯ ಗಣನೀಯ ಪ್ರಮಾಣದಲ್ಲಿ ಕಡಿತಗೊಂಡಿದೆ. ವೈಮಾನಿಕ ಕ್ಷೇತ್ರದ ಪರಿಸ್ಥಿತಿ ಅಂತು ಕಳವಳಕಾರಿಯಾಗಿದೆ. ನರೇಷಗೋಯಲ ಒಡೆತನದ ಜೇಟ್ ಎರವೇಸ ಪತನದ ಅಂಚಿಗೆ ತಲುಪಿದೆ ಈಗಾಗಲೇ ಕಿಂಗಫೀಶರ್ ಮೂಲೆಗುಂಪಾಗಿದೆ. ಇತರ ಕಂಪನಿಗಳ ಆದಾಯ ಅಷ್ಟೇನು ಆಶಾದಾಯಕವಾಗಿಲ್ಲ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ಸಿಬ್ಬಂದಿಗೆ ಸಂಬಳ ಕೊಡಲು ಆಧಾಯದ ಕೊರತೆ ಎದುರಿಸುತ್ತಿದ್ದು ಖಾಸಗೀಕರಣಕ್ಕೆ ಮುಂದಾಗಿದೆ.
ಮೂಲಸೌಕರ್ಯ ವಲಯ – ರೀಯಲ್ ಎಸ್ಟೆಟ ಉದ್ಯಮದ ಸ್ಲೋಡೌನ್ ನಿಂದ ಸಿಮೆಂಟ ಮಾರಾಟ ಕುಂಠಿತವಾಗುತ್ತಿದೆ.
ಮುರಿದುಬಿದ್ದ ಮೂಲಸೌಕರ್ಯವನ್ನು ಎದುರಿಸಲು, ಮೂಲಸೌಕರ್ಯ ಸಾಲವು 2014 ರಿಂದ ಮೂರು ಪಟ್ಟು ಹೆಚ್ಚಾಗಿದೆ. 2019 ಕ್ಕೆ, ಸರ್ಕಾರವು ಮೂಲಸೌಕರ್ಯಕ್ಕಾಗಿ ಅಂದಾಜು ಮಾಡಿದ ಬಜೆಟ್ ಮತ್ತು ಹೆಚ್ಚುವರಿ ಬಜೆಟ್ ವೆಚ್ಚವನ್ನು 5.97 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. ಭಾರತ ನಿರ್ಮಿಸಿದಕ್ಕಿಂತಲೂ ಹೆಚ್ಚು 10,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಭಾರತ ಸರ್ಕಾರ ಯೋಜಿಸಿದೆ, ಇದು 10 ಮಿಲಿಯನ್ ಉದ್ಯೋಗಗಳನ್ನು ಮತ್ತು ಜಿಡಿಪಿಗೆ 3% ಅನ್ನು ಸೇರಿಸಬೇಕು. ನೀರು ಸುಧಾರಣೆಗಳು, ಸಾರಿಗೆಗಾಗಿ ಒಳನಾಡಿನ ಜಲಮಾರ್ಗಗಳ ಅಭಿವೃದ್ಧಿ, ಬಂದರು ಅಭಿವೃದ್ಧಿ, ಕರಾವಳಿ ಸಾಗಣೆ ಮತ್ತು ಇನ್ನೂ ಅನೇಕ ಸಾರಿಗೆ ಸೇರಿದಂತೆ ವ್ಯಾಪಾರ ಕೇಂದ್ರಗಳಲ್ಲಿ ಸರ್ಕಾರ ಹೂಡಿಕೆ ಮಾಡುತ್ತಿದೆ. ಇನ್ನೂ ಸ್ಟೀಲ್ ಕ್ಷೇತ್ರ ಕೂಡಾ ಡೌನ್ ಟ್ರೇಂಡ್ ನತ್ತ ಪಯಣಿಸುತ್ತಿದೆ. ಎಸ್ಸಾರ ಸ್ಟೀಲನಂತಹ ದೈತ್ಯ ಕಂಪನಿಗಳು ವಿಸರ್ಜನೆಯ ಅಂಚಿನಲ್ಲಿವೆ.
ದೂರ ಸಂಪರ್ಕ ಕ್ಷೇತ್ರದಲ್ಲಿ ಅನೇಕ ಕಂಪನಿಗಳು ತಮ್ಮ ವ್ಯವಹಾರವನ್ನು ಈಗಾಗಲೇ ಸ್ಥಗಿತಗೊಳಿಸಿವೆ ಇನ್ನುಳಿದ ಕಂಪನಿಗಳು ಬೇರೆ ಕಂಪನಿಗಳ ಜೋತೆ ವೀಲಿನಗೊಂಡು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಸರ್ಕಾರಿ ಸ್ವೌಮ್ಯದ ಬಿಎಸ್ಎನ್ಎಲ್, ಎಂಟಿಎನ್ಎಲ್ ದೈನಂದಿನ ಖರ್ಚುಗಳನ್ನು ನೀಗಿಸಲು ಹಾಗೂ ಸಿಬ್ಬಂದಿಗೆ ಸಂಬಳ ಕೊಡಲು ಪರದಾಡುತ್ತಿದೆ. ಎಸ್ಸಾರ ಸ್ಟೀಲ್ ಭುಷಣ ಸ್ಟೀಲ, ಜ್ಯೋತಿ ಸ್ಟಕ್ಚರ, ಮುಂತಾದ ಕಂಪನಿಗಳು ಸೇರಿದಂತೆ ಸುಮಾರ 10 ಕಂಪನಿಗಳ ವಿರುದ್ದ ದಿವಾಳಿತನದ ಭಿತಿ ಇದೆ.

ಬ್ಯಾಂಕಿಂಗ ವಲಯದಲ್ಲಿ ಅನೇಕ ಔದ್ಯಮಿಗಳು ಬ್ಯಾಂಕಿಗೆ ಸಾಲಮರುಪಾವತಿಸದೆ ಕೊಟ್ಯಾಂತರ ರೂಪಾಯಿಗಳ ಟೋಪಿ ಹಾಕಿದ್ದಾರೆ. ಇದರಿಂದ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಹೆಚ್ಚಾಗಿ ಹೊಸ ಸಾಲ ಸೌಲಭ್ಯ ಕೊಡಲು ಮುಂದು ಬರುತ್ತಿಲ್ಲ. ಶೇಕಡಾ 10 ರ ಆಸುಪಾಸಿನಲ್ಲಿ ಬ್ಯಾಂಕಿನ ಅನುತ್ಪಾದಕ ಆಸ್ತಿ ಇರುವದು ಕಳವಳಕಾರಿ, ಅಂತೆಯೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮುಳಗುವ ಬೀತಿಯಲ್ಲಿವೆ.
ಜವಳಿ ಉದ್ಯಮ – ಜವಳಿ ಉದ್ಯಮದ ಸ್ತಿತಿಯಂತು ಹೇಳತೀರದು. ಆರ್ಥಿಕ ಹಿಂಜರಿತದಿಂದ ಕಂಗೆಟ್ಟ ಜವಳಿ ಕೈಗಾರಿಕೆಗಳಲ್ಲಿ ದುಡಿಯುವವರಿಗೆ ತಮ್ಮ ಬೆವರಿಗೆ ಬೆಲೆಯಿಲ್ಲವೆಂಬ ಕೊರಗು ಕಾಡುತ್ತಿದೆ. ಎಪ್ರಿಲ್ 2019 ರಿಂದ ಸುಮಾರು ಶೆಕಡಾ 35 ಜವಳಿ ವ್ಯಾಪಾರ ಇಳಿಗೆಯಾಗಿದೆ. ಅದೇ ಪ್ರಮಾಣದಲ್ಲಿ ರಪ್ತು ವಹಿವಾಟು ಕೂಡಾ ಕಡಿಮೆಯಾಗಿದೆ. ಸುಮಾರು 5 ಲಕ್ಷದಷ್ಟು ಉದ್ಯೋಗ ನಷ್ಟದಲ್ಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿಅಂಶಗಳ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳ ಒಟ್ಟು ಒಟ್ಟು ಸಾಲ ದಿನಾಂಕ 31.03.2008 ರೂ.18,19,074 ಕೋಟಿ. ಹಾಗೆ ದಿನಾಂಕ 31.3.2014 ರ ವೇಳೆಗೆ ರೂ.52,15,920 ಕೋಟಿ. ಅಂದರೆ, ರೂ.33,96,846 ಕೋಟಿಯಷ್ಟು ಸಾಲವನ್ನು ಸುಮಾರು 186% ದಷ್ಟು ಹೆಚ್ಚು ಕೇವಲ 6 vವರ್ಷಗಳಲ್ಲಿ ಕೊಟ್ಟಿದ್ದು ಎನ್ಪಪಿಎ ಪ್ರಮಾಣ ಹೆಚ್ಚಲು ಕಾರಣವಾಗಿರಬಹುದು ಎಂದು ಅಂದಾಜಿಸಬಹುದು. ಆರ್‌ಬಿಐ ತಾತ್ಕಾಲಿಕ ಮಾಹಿತಿಯ ಪ್ರಕಾರ, 31.3.2019 ರಂದು, ಸಾರ್ವಜನಿಕೆ ಬ್ಯಾಂಕುಗಳ ಒಟ್ಟು ಎನ್‌ಪಿಎಗಳ ಒಟ್ಟು ಮೊತ್ತ ಸುಮಾರು 17 ಲಕ್ಷ ಕೋಟಿ.
ಇನ್ನು ಭಾರತದ ಜನಸಂಖ್ಯಾ ಬೆಳವಣಿಗೆ ಪ್ರತಿ ದಶಕಕ್ಕೆ 20% ರಷ್ಟು ಬೆಳೆದಿದೆ. ಇದು ಆಹಾರದ ಕೊರತೆ, ನೈರ್ಮಲ್ಯ ಕ್ಷೀಣಿಸುವಿಕೆ ಮತ್ತು ಮಾಲಿನ್ಯವನ್ನು ಒಳಗೊಂಡಿರುವ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿ ಕಾಣಿಸಿದರೂ, ಹೆಚ್ಚಿನ ನಾಗರಿಕರ ಜೀವನ ಮಟ್ಟವು ಬದಲಾಗಿಲದಲ. ಭಾರತೀಯರು ಪ್ರತಿ ಮೂರರಲ್ಲಿ ಒಂದು ಬಡತನ ರೇಖೆಗಿಂತ ಕೆಳಗಿದ್ದಾರೆ. ಸಾರ್ವಜನಿಕ ಸಾರಿಗೆ ಮತ್ತು ರಸ್ತೆಮಾರ್ಗಗಳು ಜನಸಂಖ್ಯೆಯ ಬೆಳವಣಿಗೆಯೊಂದಿಗೆ ವೇಗವನ್ನು ಹೊಂದಿಲ್ಲವಾದರೂ ಕಳೆದ ನಾಲ್ಕೈದು ವರ್ಷಗಳಿಂದ ಸುಧಾರಣೆ ಕಂಡು ಬರುತ್ತಿದೆ.
ಸರಕಾರದ ಕ್ರಮ
ಭಾರತದ ಆರ್ಥಿಕತೆ ನಮಗೆ ಗೊತ್ತಿಲದ್ದಂತೆ ದಿನೆ ದಿನೆ ಮುಸುಕಾಗುತ್ತಿದೆ ಜಿ.ಎಸ್.ಟಿ ಜಾರಿಯಾದ ನಂತರ ಕೊಂಚ ಮಟ್ಟಿಗೆ ಉದ್ದಿಮೆದಾರರಿಗೆ ತೊಂದರೆಯಾಗಿದ್ದು ಅದನ್ನು ಎದುರಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರ ಹಲವು ಕ್ರಮಗಳಿಗೆ ಮುಂದಾಗಿದ್ದು, ಒಂದೇ ಬ್ರ್ಯಾಂಡ ಚಿಲ್ಲರೆ ಮಾರಾಟ, ಡಿಜಿಟಲ್ ಮಿಡಯಾ, ಗಣಿಗಾರಿಕೆ, ಉತ್ಪಾದನಾ ವಲಯ, ಕಲ್ಲಿದ್ದಲು ಮುಂತಾದ ವಲಯಗಳಲ್ಲಿ ವಿದೇಶಿ ನೇರ ಬಂಡವಾಳದ ಸಡಿಲಿಕೆ ಮುಂದುವರಿಸಿದೆ. ಅಲ್ಲದೆ ಏಕ ಬ್ರಾಂಡ್ ಮಳಿಗೆಗಳಲ್ಲಿ ವಿಧಿಸಿದ್ದ 30% ರಷ್ಟು ಭಾರತೀಯ ಬ್ರ್ಯಾಂಡಗಳನ್ನುಇಡಬೇಕೆಂಬ ನಿಯಮ ಸಡಿಲುಗೊಳಿಸಿದೆ. ಪ್ರತಿ ಟನ್ನ ಸಕ್ಕರೆ ರಪ್ತಿಗೆ 10,448 ರುಪಾಯಿಯಷ್ಟು ಸಹಾಯಧನದಿಂದ ಒಟ್ಟಾರೆ 6268 ಕೋಟಿಹಣ ಸಕ್ರೆ ರಪ್ತಿಗೆ ಸಹಾಯಧನ ನೀಡಿದೆ. ಹಣಕಾಸು ಸಚಿವರು ಅನೇಕ ಘೊಷಣೆಗಳನ್ನು ಮಾಡಿದ್ದರೂ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಕಾದು ನೋಡಬೇಕು. ಹೆಚ್ಚುತ್ತಿರುವ ಹಣಕಾಸಿನ ಕೊರತೆಯನ್ನು ನೀಗಿಸಲು ಮಾಜಿ ಆರ್.ಬಿ.ಐ ಗವರ್ನರ್ ಭಿಮಲ್ ಜಲನ್ ನೇತ್ರತ್ವದ ಸಮೀತಿ ಸೀಪಾರಸುಗೆ ಅನಗುಣವಾಗಿ 1.76 ಲಕ್ಷ ಕೋಟಿ ರುಪಾಯಿಗಳ ಲಾಭಾಂಶ ಹಾಗು ಹೆಚ್ಚುವರಿ ಹಣವನ್ನು ಸರಕಾರಕ್ಕೆ ವರ್ಗಾಯಿಸಲು ಅನುಮೋದನೆ ನೀಡಿದ್ದು ಗಮನಾರ್ಹ.
ಇಂದು ಭಾರತದಲ್ಲಿ ಅಘೋಷಿತ ಆರ್ಥಿಕ ಬಿಕ್ಕಟ್ಟು ಇರುವದು ಗೋಚರಿಸುತ್ತಿರುವದು ಇದರಿಂದ ಕಂಡು ಬರುತ್ತಿದೆ. ಇಂತಹ ಬಿಕ್ಕಟ್ಟುಗಳು ಸಾರ್ವಜನಿಕರಿಗೆ ನಿಧಾನವಾಗಿ ಗೋಚರಿಸಿದರೂ ಈ ಪರಿಸ್ಥಿತಿಯು ಆರ್ಥಿಕ ಬಿಕ್ಕಟ್ಟಿನ ಮೊದಲ ಸುತ್ತಿನದು ಎಂದು ಪರಿಗಣಿಸಬಹುದು. ಭಾರತದಲ್ಲಿನ ಈ ಬಿಕ್ಕಟ್ಟು ಸರಕಾರದ ಕ್ರಮ ಪ್ರಯೋಜನಕ್ಕೆ ಮರದೆ ಹೋದರೆ, ಮಾರ್ಚ್ 2020 ರ ಸುಮಾರಿಗೆ ಗೋಚರಿಸುವ ಸಂಭವಿದೆ.

loading...