ಕಾಬೂಲ್ ನಲ್ಲಿ ಬಾಂಬ್ ಸ್ಫೋಟ : ಸಾವಿನ ಸಂಖ್ಯೆ 16 ಕ್ಕೆ ಏರಿಕೆ

0
2

ಮಾಸ್ಕೋ- ಕಾಬೂಲ್‌ನ ಗ್ರೀನ್ ವಿಲೇಜ್ ಕಾಂಪೌಂಡ್ ಬಳಿ ಸಂಭವಿಸಿದ ಬಾಂಬ್ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ ಎಂದು ಅಘ್ಘನ್ ಆಂತರಿಕ ಸಚಿವಾಲಯದ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿವೆ.

ಕಾಬೂಲ್‌ನ 9 ನೇ ಜಿಲ್ಲೆಯಲ್ಲಿ ಸೋಮವಾರ ಬಾಂಬ್ ಸ್ಫೋಟಗೊಂಡಿದ್ದು ಪರಿಣಾಮವಾಗಿ ಐವರು ಸಾವನ್ನಪ್ಪಿದ್ದಾರೆ ಎಂದೂ ಪ್ರಾಥಮಿಕ ವರದಿಗಳು ತಿಳಿಸಿವೆ.
ಆಂತರಿಕ ಸಚಿವಾಲಯದ ಪ್ರಕಾರ, ಸ್ಫೋಟದಲ್ಲಿ 119 ಜನರು ಗಾಯಗೊಂಡಿದ್ದು,ಬಲಿಯಾದವರಲ್ಲಿ ನಾಗರಿಕರೇ ಹೆಚ್ಚಿನವರಾಗಿದ್ದಾರೆ .
ತಾಲಿಬಾನ್ ದಾಳಿ ಹೊಣೆ ಹೊತ್ತುಕೊಂಡಿದೆ, ವಿದೇಶಿಯರು ಮತ್ತು ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಕಾರಣ ಗ್ರೀನ್ ವಿಲೇಜ್ ಪ್ರದೇಶವನ್ನು ಉಗ್ರರು ಗುರಿ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ

loading...