ಕ್ಯಾಲಿಫೋರ್ನಿಯಾದಲ್ಲಿ ಬೋಟ್‌ ಮುಳುಗಿ 8 ಸಾವು, 26 ಮಂದಿ ಕಾಣೆ

0
3

ಮಾಸ್ಕೋ-ದೋಣಿ ಬೆಂಕಿಗಾಹುತಿಯಾದ ಬಳಿಕ ಮುಳುಗಿದ ಪರಿಣಾಮ ಕನಿಷ್ಠ 8 ಮಂದಿ ಸಾವನ್ನಪ್ಪಿ, 26 ಮಂದಿ ಕಾಣೆಯಾಗಿರುವ ಘಟನೆ ಪಶ್ಚಿಮ ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತ್ರಕ್ರೂಜ್‌ನಲ್ಲಿ ನಡೆದಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಕಾನ್ಸೆಪ್ಷನ್ ಹೆಸರಿನ 75 ಅಡಿ ಡೈವ್ ಬೋಟ್ ಸೋಮವಾರ ಮುಂಜಾನೆ 3: 15ಕ್ಕೆ ಅಪಾಯದಲ್ಲಿರುವುದರ ಬಗ್ಗೆ ಮಾಹಿತಿ ಕಳುಹಿಸಿದೆ, ಈ ಮಾಹಿತಿ ಕಳುಹಿಸುವಾಗ ಈಗಾಗಲೇ ಬೋಟ್ ಗೆ ಬೆಂಕಿಯ ಜ್ವಾಲೆ ಆವರಿಸಿ ಅದು ಮುಳುಗುತ್ತಿತ್ತು ಎಂದು ಅಮೆರಿಕ ಕೋಸ್ಟ್ ಗಾರ್ಡ್ ತಿಳಿಸಿದೆ.

ಐವರು ಸಿಬ್ಬಂದಿ ಬೋಟ್‌ನಿಂದ ಹಾರಿ ಪಾರಾಗಿದ್ದಾರೆ. ಇತರ ಪ್ರಯಾಣಿಕರು ದುರಂತದ ವೇಳೆ ಡೆಕ್ ಕೆಳಗೆ ಮಲಗಿದ್ದರು ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಬದುಕುಳಿದವರಿಗಾಗಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಆದರೆ ಕಾಣೆಯಾದವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

loading...