ಹುಬ್ಬಳ್ಳಿ – ಚೆನ್ನೈ ನಡುವೆ ಎಕ್ಸ್‌ ಪ್ರೆಸ್ ರೈಲು ಸಂಚಾರ

0
45

ಹೈದರಾಬಾದ್:- ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಬಂದರು ನಗರ ಚೆನ್ನೈ ನಡುವೆ ಸೆಪ್ಟೆಂಬರ್ 17 ರಿಂದ ಎಕ್ಸ್‌ ಪ್ರೆಸ್ ರೈಲು ಸೇವೆ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ವಾರಕ್ಕೆ ಎರಡು ದಿನ ಈ ಎಕ್ಸ್‌ ಪ್ರೆಸ್ ರೈಲು ಸೇವೆ ಇರಲಿದ್ದು ಸೆಪ್ಟೆಂಬರ್ 17 ರಿಂದ ಹುಬ್ಬಳ್ಳಿಯಿಂದ ಮತ್ತು ಸೆ 18 ರಿಂದ ಚೆನ್ನೈನಿಂದ ನಿಯಮಿತ ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ – ಚೆನ್ನೈ ನಡುವಣ ರೈಲು ಸಂಖ್ಯೆ 17313 ಹುಬ್ಬಳ್ಳಿಯಿಂದ ರಾತ್ರಿ 9 ಗಂಟೆ 5 ನಿಮಿಷಕ್ಕೆ ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ಹೊರಟು ಮರುದಿನ ಬೆಳಗ್ಗೆ 10 ಗಂಟೆ 50 ನಿಮಿಷಕ್ಕೆ ಚೆನ್ನೈ ತಲುಪಲಿದೆ.
ಚೆನ್ನೈ – ಹುಬ್ಬಳ್ಳಿ ನಡುವಣ ರೈಲು ಸಂಖ್ಯೆ 17314 ಚೆನ್ನೈನಿಂದ ಮಧ್ಯಾಹ್ನ 3 ಗಂಟೆಗೆ ಬುಧವಾರ ಮತ್ತು ಶನಿವಾರಗಳಂದು ಹೊರಟು ಮರುದಿನ ಬೆಳಗ್ಗೆ 5 ಗಂಟೆ 15 ನಿಮಿಷಕ್ಕೆ ಹುಬ್ಬಳ್ಳಿಗೆ ಬರಲಿದೆ.
ಈ ರೈಲು ಗದಗ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಕಡಪ, ರೇಣುಗುಂಟಾ ಮತ್ತು ಅರಕ್ಕೋಣಂ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.

loading...