ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಸಾಧ್ಯವಾದ ಗುರಿ ಮುಟ್ಟಲು ರೋಹಿತ್‌ ನೆರವಾಗಬಲ್ಲರು: ಬಾಂಗರ್‌

0
0

ನವದೆಹಲಿ:- ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ಹಿಂದೆಂದೂ ಮುಟ್ಟಿರದ ಅತಿ ದೊಡ್ಡ ಮೊತ್ತದ ಗುರಿ ತಲುಪಲು ತಂಡಕ್ಕೆ ಹಿಟ್‌ಮನ್‌ ರೋಹಿತ್‌ ಶರ್ಮಾ ನೆರವಾಗಲಿದ್ದಾರೆಂದು ಟೀಮ್‌ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಬಲವಾಗಿ ನಂಬಿದ್ದಾರೆ.

ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ರೋಹಿತ್‌ ಶರ್ಮಾ ಅವರು ನಿಯಮಿತಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಕಳೆದಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕನ್ನಡಿಗ ಕೆ.ಎಲ್‌ ರಾಹುಲ್‌ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿದ್ದರು. ಆದರೆ, ಅವರು ಕಳೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಫಲ್ಯ ಅನುಭವಿಸಿದರು. ಹಾಗಾಗಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೈ ಬಿಡಲಾಗಿದೆ.
ನಾಲ್ಕು ಇನಿಂಗ್ಸ್‌ಗಳಲ್ಲಿ ರಾಹುಲ್‌ 44, 38, 13 ಹಾಗೂ 6 ರನ್‌ ಗಳಿಸಿದ್ದರು. ಕಳೆದ ವರ್ಷ ಸತತ 12 ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಇಂಗ್ಲೆಂಡ್‌ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯದಲ್ಲಿ 149 ರನ್‌ ಗಳಿಸಿದ್ದರು. ಇದಾದ ಬಳಿಕ ಅವರು ಅರ್ಧ ಶತಕ ಸಿಡಿಸುವಲ್ಲಿ ವಿಫಲರಾಗಿದ್ದಾರೆ.
ಇಎಸ್‌ಪಿಎನ್‌ ಸಂದರ್ಶನದಲ್ಲಿ ಮಾತನಾಡಿರುವ ಬಾಂಗರ್‌, “ಟೆಸ್ಟ್‌ ತಂಡದಲ್ಲಿ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಅವರು ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನದಲ್ಲಿ ಹೆಚ್ಚಿನ ಅವಕಾಶವಿದೆ. ಆಫ್ರಿಕಾ ವಿರುದ್ಧ ಸರಣಿಯಲ್ಲಿ ಭವಿಷ್ಯ ಈ ಅವಕಾಶ ಸಿಗಬಹುದು” ಎಂದು ಹೇಳಿದ್ದಾರೆ.
ಸೀಮಿತ ಓವರ್‌ಗಳ ಮಾದರಿ ರೀತಿ ಟೆಸ್ಟ್‌ ಕ್ರಿಕೆಟ್‌ನಲ್ಲೂ ರೋಹಿತ್‌ ಶರ್ಮಾ ಆರಂಭಿನಾಗಿ ಯಶ ಕಂಡರೆ ನಿಜವಾಗಿಯೂ ತಂಡಕ್ಕೆ ಸನುಕೂಲವಾಗಲಿದೆ. ಈ ಹಿಂದೆ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಮೊತ್ತದ ಗುರಿ ಮುಟ್ಟದೆ ಇರುವ ಗುರಿ ತಲುಪಲು 32ರ ಪ್ರಾಯದ ರೋಹಿತ್‌ ಶರ್ಮಾ ನೆರವಾಗಲಿದ್ದಾರೆ ಎಂದು ಬಾಂಗರ್‌ ವಿಶ್ವಾಸ ವ್ಯಕ್ತಪಡಿಸಿದರು.
27 ಟೆಸ್ಟ್ ಪಂದ್ಯಗಳಾಡಿರುವ ರೋಹಿತ್‌ ಶರ್ಮಾ 1,585 ರನ್‌ ದಾಖಲಿಸಿದ್ದಾರೆ. ಆದರೆ, ಏಕದಿನ ಹಾಗೂ ಟಿ-20 ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ಮಾಡಿದ್ದಾರೆ. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕ ಸಿಡಿಸಿದ್ದಾರೆ. ಆದರೆ, ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ ಮೂರು ಶತಕ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಹಣಾಹಣಿ ನಾಳೆ ನಡೆಯಲಿದೆ. ಅ.2 ರಿಂದ ವಿಶಾಖಪಟ್ಟಣಂನಲ್ಲಿ ಪ್ರಥಮ ಟೆಸ್ಟ್‌ ಪಂದ್ಯ ಆರಂಭವಾಗಲಿದೆ.

loading...