ಸ್ಪೇನ್ ನಲ್ಲಿ ಪ್ರವಾಹ : ಕನಿಷ್ಠ ಐವರ ಸಾವು

0
5

ಮ್ಯಾಡ್ರಿಡ್,-ದಕ್ಷಿಣ ಸ್ಪೇನ್‌ ನಲ್ಲಿ ಪ್ರವಾಹದಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದು 3,500 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.
ಭಾರಿ ಮಳೆಯಿಂದಾಗಿ ಅನೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಶುಕ್ರವಾರ ಬೆಳಗಿನ ಜಾವ ಕಾಲುವೆಯಲ್ಲಿ ಕಾರ್ ಸಿಲುಕಿಕೊಂಡು ಅದರಲ್ಲಿದ್ದ ನಾಲ್ವರ ಪೈಕಿ ಮೂವರನ್ನು ರಕ್ಷಿಸಲಾಯಿತಾದರೂ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಮತ್ತೊಂದೆಡೆ ಸಹ ಕೆಸರಿನಲ್ಲಿ ವಾಹನ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದು, ಇನ್ನೊಂದೆಡೆ ಕಣ್ಮರೆಯಾದ ವ್ಯಕ್ತಿಯ ಶವ ದೊರೆತಿದೆ.
ಗುರುವಾರ 51 ವರ್ಷದ ಮಹಿಳೆ ಮತ್ತು 61 ವರ್ಷದ ಆಕೆಯ ಸೋದರರಿದ್ದ ಕಾರ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ತುರ್ತು ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜಿಸಲಾಗಿದೆ ಎಂದು ಸ್ಪೇನ್ ನ ಹಂಗಾಮಿ ಪ್ರಧಾನಿ ಪೆಡ್ರೋ ಸಂಚೇಜ಼್ ಹೇಳಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದ್ದು ಭಾರಿ ಮಳೆಯ ಕಾರಣ ಅಲ್ಮೇರಿಯಾ ಮತ್ತು ಮುರ್ಸಿಯಾ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರ ವಿಮಾನ ಸೇವೆ ನಿರ್ಬಂಧಿಸಲಾಗಿತ್ತು.

loading...