ಉತ್ತರ ಪ್ರದೇಶ: ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ ಉದ್ಘಾಟಿಸಿದ ಯೋಗಿ ಆದಿತ್ಯನಾಥ್

0
2

ಚಿತ್ರಕೂಟ,- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರಕೂಟದಲ್ಲಿ ರಾಜ್ಯದ ಮೊದಲ ಹಗ್ಗದ ಮಾರ್ಗ (ರೋಪ್‌ವೇ)ವನ್ನು ಶನಿವಾರ ಉದ್ಘಾಟಿಸಿ, ಕಾಮನಾಥ್‌ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಮುಖ್ಯಮಂತ್ರಿ ಸ್ವತಃ ರೋಪ್‌ವೇಯಲ್ಲಿ ಕಾಮದ್‌ಗರಿಯ ಪರಿಕ್ರಾಮ ಮಾರ್ಗವನ್ನು ಪ್ರಯಾಣಿಸಿದರು. ಅವರು ಇದೇ ವೇಳೆ ಮಹಿಳೆಯರಿಗೆ ಸೆಣಬಿನ ಚೀಲಗಳನ್ನು ವಿತರಿಸಿ, ಪಾಲಿಥಿನ್ ಅನ್ನು ಬಹಿಷ್ಕರಿಸುವಂತೆ ಮನವಿ ಮಾಡಿದರು.

ಆದಿತ್ಯನಾಥ್ ಅವರು ಕಾಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಕಾಮದ್‌ಗಿರಿಯ ಪರಿಕ್ರಾಮವನ್ನು ಪ್ರಾರಂಭಿಸಿದರು. ಪರಿಕ್ರಾಮದ ಹಾದಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲೂ ಮುಖ್ಯಮಂತ್ರಿ ಪೂಜೆ ಸಲ್ಲಿಸಿದರು. ಅವರು ಭಾರತ್ ಮಿಲಾಪ್ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ರಾಜ್ಯದ ಮೊದಲ ರೋಪ್‌ವೇಯನ್ನು ಉದ್ಘಾಟಿಸಿ, ಸ್ವತಃ ಕ್ಯಾಬಿನ್‌ನಲ್ಲಿ ಕುಳಿತು ಲಕ್ಷ್ಮಣ್ ಬೆಟ್ಟಕ್ಕೆ ತೆರಳಿದರು.

ಮುಖ್ಯಮಂತ್ರಿ ತಮ್ಮ ರೋಪ್‌ವೇ ಪ್ರಯಾಣದ ಸಮಯದಲ್ಲಿ ಪ್ರವಾಸಿ ಸೌಲಭ್ಯಗಳು ಮತ್ತು ಚಿತ್ರಕೂಟ್‌ ಅನ್ನು ಯಾತ್ರಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಲಕ್ನೋಗೆ ತೆರಳುವ ಮೊದಲು ಮುಖ್ಯಮಂತ್ರಿ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಖೋಯಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರಿಗೆ ಮತ್ತು ಗ್ರಾಮ ಪ್ರಧಾನ್ ಗೆ ಸೆಣಬಿನ ಚೀಲಗಳನ್ನು ವಿತರಿಸಿ ಪಾಲಿಥಿನ್ ಬಳಸದಂತೆ ಮನವಿ ಮಾಡಿದರು.

ರೋಪ್‌ವೇಯನ್ನು ಮಹಿಳಾ ತಂಡಗಳೇ ನಿರ್ವಹಿಸಲಿವೆ. ಮೂರು ಕ್ಯಾಬಿನ್ ರೋಪ್‌ವೇಯಲ್ಲಿ ಒಂದು ಬಾರಿ 18 ಜನರು ಪ್ರಯಾಣಿಸಬಹುದು, ಒಂದು ಗಂಟೆಯಲ್ಲಿ 400 ಜನರನ್ನು ಕರೆದೊಯ್ಯಬಹುದು.

ರೋಪ್‌ವೇ ಅವಧಿಯು ಐದು ನಿಮಿಷಗಳಾಗಿದ್ದು, ಪ್ರತಿ ವ್ಯಕ್ತಿ 50 ರೂ.ಪಾವತಿಸಬೇಕಾಗುತ್ತದೆ.

ಇಲ್ಲದಿದ್ದರೆ ಲಕ್ಷ್ಮಣ ಬೆಟ್ಟದ ತುದಿಯನ್ನು ತಲುಪಲು 400 ಮೆಟ್ಟಿಲುಗಳನ್ನು ಚಾರಣ ಮಾಡಬೇಕಾಗಿದ್ದ ಯಾತ್ರಿಕರು ಈಗ ಐದು ರಿಂದ ಆರು ನಿಮಿಷಗಳಲ್ಲಿ 50 ರೂ.ಗಳ ಅತ್ಯಲ್ಪ ವೆಚ್ಚದಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಬಹುದು.
ಇದನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗಿದೆ, 15 ಕೋಟಿ ರೂ.ಗಳ ವೆಚ್ಚದಲ್ಲಿ, ರೋಪ್‌ವೇ ಅನ್ನು ಖಾಸಗಿ ಕಂಪನಿಯು 30 ವರ್ಷಗಳ ಕಾಲ ‘ನಿರ್ಮಿಸಿ ನಿರ್ವಹಿಸುವ’ ಒಪ್ಪಂದದಡಿ ನಿರ್ವಹಿಸಲಿದೆ.

loading...