ಮೋದಿ ಪ್ರಧಾನಿಯಾಗಿರುವುದು ದೇಶಕ್ಕೆ ಗೌರವ, ನಮಗೆ ಹೆಮ್ಮೆ ;ಗೌತಮ್ ಗಂಭೀರ್

0
3

ನವದೆಹಲಿ-ದೇಶದ ಸಂಸತ್ತು, ತಮ್ಮನ್ನು ಹೆತ್ತ ತಾಯಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ರೀತಿಯ ಗೌರವ ನೀಡುತ್ತಾರೆ. ತಮ್ಮ ತಾಯಿಯ ಮುಂದೆ, ಸಂಸತ್ತಿನ ದ್ವಾರ ಬಾಗಿಲಿಗೆ ಮಾತ್ರ ಅವರು ತಲೆ ಬಾಗುತ್ತಾರೆ. ಇಂತಹ ಪ್ರಧಾನ ಮಂತ್ರಿಯನ್ನು ಭಾರತ ಹೊಂದಿರುವುದು ಗೌರವದ ವಿಷಯವಾಗಿದೆ. ನಮ್ಮ ಹೆಮ್ಮೆಗೆ ಕಾರಣವಾಗಿದೆ ಎಂದು ಮಾಜಿ ಕ್ರಿಕೆಟರ್, ಬಿಜೆಪಿ ಸಂಸದ ಗೌತಮ್ ಗಂಭೀರ್ ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ಪ್ರಧಾನಿ ಅವರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಆರೋಗ್ಯ ಮತ್ತಷ್ಟು ವೃದ್ಧಿಸಲಿ ಎಂದು ಹಾರೈಸುತ್ತಾರೆ.
ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಸೆಪ್ಟೆಂಬರ್ 17, 1950 ರಂದು ಗುಜರಾತಿನ ವಡ್ ನಗರದಲ್ಲಿ ಜನಿಸಿದರು. ಚಹಾ ಮಾರಾಟ ಮಾಡುವ ಮಟ್ಟದಿಂದ ದೇಶದ ಅತ್ಯನ್ನತ ಸ್ಥಾನ ಪ್ರಧಾನಿ ಹುದ್ದೆಯನ್ನು ಏರುವಮೂಲಕ ಜಗ ಮೆಚ್ಚಿನ ನಾಯಕರಾಗಿದ್ದಾರೆ.
ತಮ್ಮ ಜನ್ಮದಿನವಾದ ಇಂದು ಸ್ವಂತ ರಾಜ್ಯ ಗುಜರಾತ್‌ಗೆ ಆಗಮಿಸಿದ ನರೇಂದ್ರ ಮೋದಿ, ತಾಯಿ ಹಿರಾಬೆನ್ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. ನಂತರ ರಾಜ್ಯದ ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಪರಿಶೀಲಿಸಿದರು. ಅಂತೆಯೇ, ಸೇವಾ ಸಪ್ತಾಹ ಹೆಸರಿನಲ್ಲಿ ಪ್ರಧಾನಿ ಮೋದಿ ಜನ್ಮದಿನವನ್ನು ಆಚರಿಸುತ್ತಿರುವ ಬಿಜೆಪಿ, ದೇಶದ ಅನೇಕ ಭಾಗಗಳಲ್ಲಿ ಸಾಮಾಜಿಕ ಸೇವೆಗಳನ್ನು ಕೈಗೆತ್ತಿಕೊಂಡಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ಗೌತಮ್ ಗಂಭೀರ್ 2019 ರ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭರ್ಜರಿ ಜಯದೊಂದಿಗೆ ಸಂಸತ್ತನ್ನು ಪ್ರವೇಶಿಸಿದ್ದಾರೆ.

loading...