ತೇಜಸ್‌ ವಿಮಾನದಲ್ಲಿ ಹಾರಿದ ಮೊದಲ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

0
3

ಬೆಂಗಳೂರು-ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ರಾಜಧಾನಿ ಬೆಂಗಳೂರಿನ ಎಚ್‌ಎಎಲ್‌ ಹಳೇ ವಿಮಾಣ ಸಿಲ್ದಾಣದಲ್ಲಿ ತೇಜಸ್‌ ಲಘು ವಿಮಾನದಲ್ಲಿ ಹಾರಾಟ ನಡೆಸಿದರು. ಆ ಮೂಲಕ ತೇಜಸ್‌ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಕೇಂದ್ರ ರಕ್ಷಣಾ ಸಚಿವ ಎಂಬ ಇತಿಹಾಸವನ್ನು ರಾಜನಾಥ್‌ ಸಿಂಗ್‌ ಮಾಡಿದರು.
ಇಂಡಿಯನ್‌ ಏರ್‌ಪೋರ್ಸ್‌ ಸಮವಸ್ತ್ರದೊಂದಿಗೆ ಇಂದು ಬೆಳಗ್ಗೆ ಹಳೆ ನಿಲ್ದಾಣಕ್ಕೆ ಆಗಮಿಸಿದ ರಾಜನಾಥ್‌ ಸಿಂಗ್‌ ಅವರು ಇಂಡಿಯನ್‌ ಏರ್‌ ಪೋರ್ಸ್‌ ಪೈಲಟ್‌ಗಳೊಂದಿಗೆ ತೇಜಸ್‌ ವಿಮಾನದಲ್ಲಿ ಹಾರಾಟ ನಡೆಸಿದರು.
ಕಳೆದ 2016ರ ಜುಲೈನಲ್ಲೇ ಭಾರತೀಯ ಸೇನೆಗೆ ಮಿಗ್-21 ಬದಲಿಗೆ ತೇಜಸ್‌ ಯುದ್ಧ ವಿಮಾನವನ್ನು ವಿನಿಯೋಗಿಸಲಾಯಿತು. ಇದು 3,500 ಕೆಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ. ಇದಕ್ಕೂ ಮುನ್ನ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಅವರು ಕೂಡ ತೇಜಸ್‌ ವಿಮಾನದಲ್ಲಿ ಹಾರಾಟ ನಡೆಸಿದ್ದರು.
ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ತೇಜಸ್ ಲಘು ಯುದ್ದ ವಿಮಾನ ಇದಾಗಿದೆ. ಸಂಪೂರ್ಣ ದೇಶಿ ತಂತ್ರಜ್ಞಾನ ಬಳಸಿ ಯುದ್ದ ವಿಮಾನ ತೇಜಸ್ ತಯಾರಿಸಲಾಗಿದ್ದು, ಪ್ರತಿ ಗಂಟೆಗೆ 1350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿದೆ.

loading...