ಚೀನಾ ಓಪನ್‌: ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿಗೆ ಸೋಲು

0
8

ಚಾಂಗ್‌ಜೌ:-ಸಾತ್ವಿಕ್‌ಸಾಯಿರಾಜ್‌ ರಂಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಭಾರತದ ಜೋಡಿಯು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಸೋಲು ಅನುಭವಿಸಿತು.
ಇಂದು ಬೆಳಗ್ಗೆ ಕೇವಲ 33 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಎಡವಿದ ಭಾರತದ ಜೋಡಿಯು ಜಪಾನ್‌ನ ತಕೇಶಿ ಕಮುರಾ ಮತ್ತು ಕೀಗೊ ಸೊನೊಡಾ ಜೋಡಿಯ ವಿರುದ್ಧ 19-21 8-21 ಅಂತರದ ನೇರ ಸೆಟ್‌ಗಳಲ್ಲಿ ಸೋಲು ಒಪ್ಪಿಕೊಂಡು ಚೀನಾ ಓಪನ್‌ ಅಭಿಯಾನ ಅಂತ್ಯಗೊಳಿಸಿತು.
ಮೊದಲನೇ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿದ್ದ 15ನೇ ಶ್ರೇಯಾಂಕದ ಭಾರತ ಜೋಡಿ ಎರನಡೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಜಪಾನ್‌ ಜೋಡಿಯ ವಿರುದ್ಧ ಅದೇ ಲಯ ಮುಂದುವರಿಸುವಲ್ಲಿ ವಿಫಲವಾಯಿತು.
ಪ್ರಸಕ್ತ ಆವೃತ್ತಿಯಲ್ಲಿ ಸಾತ್ವಿಕ್‌ ಹಾಗೂ ಚಿರಾಗ್‌ ಜೋಡಿ ಎರಡನೇ ಬಾರಿ ಕಮುರಾ ಮತ್ತು ಸೊನೊಡಾ ಜೋಡಿಯ ವಿರುದ್ಧ ಸೋಲು ಅನುಭವಿಸಿದಂತಾಯಿತು. ಕಳೆದ ಜುಲೈನಲ್ಲಿ ನಡೆದಿದ್ದ ಜಪಾನ್‌ ಓಪನ್‌ ಟೂರ್ನಿಯಲ್ಲೂ ಭಾರತದ ಜೋಡಿ ಸೋಲು ಅನುಭವಿಸಿತ್ತು.

loading...