ಎರಡನೇ ಮಹಾಯುದ್ಧ ಕಾಲದ ವಿಮಾನ ಪತನ : 7 ಸಾವು

0
3

ವಾಷಿಂಗ್ ಟನ್- ಎರಡನೇ ಮಹಾಯುದ್ಧದ ಕಾಲದ ವಿಮಾನ ಪತನವಾಗಿದ್ದು ಏಳು ಜನರು ಮೃತಪಟ್ಟಿದ್ದಾರೆ.
ಅಮೆರಿಕದ ಬ್ರಾಡ್ಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಬೆಂಕಿ ಹೊತ್ತಿ ಉರಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಸ್ಥಳೀಯ ಕಾಲಮಾನ 9.54 ರ ಸುಮಾರಿಗೆ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೇ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಬಲಿಯಾದವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ, ಮೊದಲಿಗೆ ಆರು ಜನರು ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿತ್ತು.
ಬೋಯಿಂಗ್ – ಬಿ 17 ವಿಮಾನದಲ್ಲಿ ಇಬ್ಬರು ಪೈಲೆಟ್, ಒಬ್ಬ ಸಹಾಯಕ ಮತ್ತು 10 ಪ್ರಯಾಣಿಕರಿದ್ದರು. ನಿಲ್ದಾಣದಲ್ಲಿ ವಿಮಾನದ ಹೊರಗಿದ್ದ ವ್ಯಕ್ತಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

loading...