ಪೊಲೀಸ್ ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ಹತ್ಯೆ ಮಾಡಿದ ಹಂತಕ

0
2

ಪ್ಯಾರೀಸ್- ಅಪರಿಚಿತ ಹಂತಕನೊಬ್ಬ ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಅಮಾನವೀಯ ಘಟನೆ ಪ್ಯಾರೀಸ್ ನಗರದಲ್ಲಿ ಜರುಗಿದೆ .
ಬಳಿಕ ಪೊಲೀಸ್ ಎನ್ ಕೌಂಟರ್ ನಲ್ಲಿ ಹಂತಕ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸೆಂಟ್ರಲ್ ಪ್ಯಾರಿಸ್ ನ ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿದ್ದಾನೆ. ಆತ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಕೂಡಲೇ ನೋಟ್ರೆ-ಡಾಮೆ ಕ್ಯಾಥೆಡ್ರಲ್ ಹಾಗೂ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ.
ಕೋರ್ಟ್ ಸಮೀಪ ಹಂತಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯಿಂದ ಕಂಗಾಲಾದ ಸ್ಥಳೀಯ ಜನರು ಕೆಲ ಕಾಲ ಭೀತಿಗೆ ಒಳಗಾಗಿದ್ದಾರೆ.

loading...