ಕಬ್ಬಿಣದ ರಾಡ್ ನಿಂದ ಹೊಡೆದು ಅಳಿಯನನ್ನೆ ಕೊಲೆಗೈದರು

0
2115

ಬೆಳಗಾವಿ
ಕಬ್ಬಿಣ ರಾಡ್ ನಿಂದ ಹೊಡೆದು ಅಳಿಯನನ್ನೇ ಕೊಂದ ಹೆಂಡತಿ, ಅತ್ತೆ, ಮಾವ, ಭಾಮೈದ.ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಘಟನೆ ನಡೆದಿದೆ. ಕಿರಣ ಲೊಕರೆ (28) ಕೊಲೆಯಾದ ವ್ಯಕ್ತಿ.
ಒಂದು ವರ್ಷಗಳಿಂದ ದೂರವಾಗಿದ್ದ ಗಂಡ ಹೆಂಡತಿ.ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕಿರಣ ಮತ್ತು ಸವಿತಾ.ಗಂಡ ಹೆಂಡತಿ ನಡುವೆ ಜಗಳ ಬಂದು ದೂರಾಗಿದ್ದ ದಂಪತಿಗಳು.
ದಂಪತಿಗಳಿಗೆ ಎರಡು ವರ್ಷದ ಗಂಡು ಮಗುವಾಗಿತ್ತು, ಇದಾದ ಬಳಿಕ ದೂರ. ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಿದ್ದ ಹೆಂಡತಿ ಸವಿತಾ.
ಇಂದು ಬೆಂಗಳೂರನಿಂದ ಬೆಳಗಾವಿಗೆ ಆಗಮಿಸಿದ್ದ ಸವಿತಾ. ಇಂದು ಮಗನನ್ನ ನೋಡಿ ಬರಲು ಹೆಂಡತಿ ಮನೆಗೆ ಹೋಗಿದ್ದ ಕಿರಣ.
ಕಿರಣ ಬಂದಿರುವುದನ್ನ ಕಂಡು ಆಕ್ರೋಶಗೊಂಡ ಹೆಂಡತಿ ಮತ್ತು ತವರು ಮನೆಯವರು.
ಹೆಂಡತಿ ಸವಿತಾ,ಮಾವ ವಿಠ್ಠಲ, ಅತ್ತೆ ಸುರೇಖಾ, ಭಾಮೈದ ಜ್ಯೋತಿಬಾರಿಂದ ಓಣಿಯಲ್ಲಿ ಅಡ್ಡಾಡಿಸಿ ಹೊಡೆದು ಹತ್ಯೆ ಮಾಡಿದ್ದಾರೆ.
ರಾಡ್ ನಿಂದ ತಲೆಗೆ ಹೊಡೆದು ಮನೆಯ ಮುಂಭಾಗದಲ್ಲೇ ಹತ್ಯೆ. ಒಂದೇ ಓಣಿಯಲ್ಲಿ ವಾಸವಿದ್ದ ಹೆಂಡತಿ ತವರು ಮನೆಯವರು ಮತ್ತು ಕಿರಣ.
ಹುಡುಗನ ಮನೆಯ ಮುಂದೆಯೇ ಅಟ್ಟಾಡಿಸಿ ಹೊಡೆದು ಹತ್ಯೆ. ಸ್ಥಳಕ್ಕೆ ಶಹಾಪುರ್ ಸಿಪಿಐ ಜಾವೇದ ಮುಷಾಪುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

loading...