ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಕಡೆಗಣಿಸಿದರೆ ರಾಜ್ಯದಲ್ಲಿ ಬಿಜೆಪಿ ದಿವಾಳಿಯಾಗುತ್ತೆ: ಕೆಜೆಪಿ ಪದ್ಮನಾಭ ಗುಡುಗು

0
37


ಬೆಳಗಾವಿ

ನೆರೆ ಹಾಗೂ ಪ್ರವಾಹದಿಂದ ಸಂತ್ರಸ್ತರು ಅಂಗಲಾಚುತ್ತಿದ್ದಾರೆ. ಕೇಂದ್ರ ಮತ್ತು ‌ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತಿಲ್ಲ. ಇದೇ ಧೋರಣೆ ಮುಂದುವರೆದರೆ ಬಿಜೆಪಿ ಸರ್ವನಾಶವಾಗುತ್ತದೆ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿದೆ. ನೆರೆ ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದರೂ ಕೇಂದ್ರ ಸರಕಾರ ಮೂಗಿಗೆ ತುಪ್ಪ ಸವರಿದ್ದಂತೆ 1,200 ಕೋಟಿ ಪರಿಹಾರ ನೀಡಿದ್ದು ಏತಕ್ಕೂ ಸಾಲದು ಎಂದು ಕಣ್ಣೀರಿಟ್ಟರು.
ಸಿಎಂ ಯಡಿಯೂರಪ್ಪ ಬೆಳಗಾವಿಗೆ ಬಂದಾಗ ಸರಕಾರದ‌ ಖಜಾನೆ ಖಾಲಿಯಾಗಿದೆ. ಹಣ ಇಲ್ಲ ಎಂದು ಹೇಳಿರುವುದು ದುರ್ದೈವೆ ಸಂಗತಿ ಎಂದರು.

ಕೇಂದ್ರ ಸರಕಾರ ಸಿಎಂ ಯಡಿಯೂರಪ್ಪ ನವರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ದಿವಾಳಿಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಬರಲು ಯಡಿಯೂರಪ್ಪನವರ ಶ್ರಮವೇ ಕಾರಣ ಎಂದು ಕೇಂದ್ರ ಸರಕಾರದ ನಾಯಕರ ವಿರುದ್ಧ ಹರಿಹಾಯ್ದರು.

ಈಗಾಗಲೇ ಕೆಜೆಪಿ ಪಕ್ಷಕ್ಕೆ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಂಪರ್ಕದಲ್ಲಿದ್ದಾರೆ‌. ಯಡಿಯೂರಪ್ಪ ಕೆಜೆಪಿಗೆ ಬಂದರೆ ಸ್ವಾಗತಿಸುತ್ತೇನೆ ಎಂದರು.
ಮದನ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...