ಅಶ್ವಿನ್ ಸ್ಪಿನ್ ಮೋಡಿ: ಭಾರತಕ್ಕೆೆ 106 ರನ್ ಮುನ್ನಡೆ

0
1

ವಿಶಾಖಪಟ್ಟಣಂ:-ಆರ್. ಅಶ್ವಿನ್ (145 ಕ್ಕೆೆ 70 ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮುನ್ನಡೆ ಸಾಧಿಸಿತು.
ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಎಂಟು ವಿಕೆಟ್ ಕಳೆದುಕೊಂಡು ಶನಿವಾರ ಬೆಳಗ್ಗೆೆ 385 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡ 131.2 ಓವರ್‌ಗಳಲ್ಲಿ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 431 ರನ್ ಗಳಿಸಿತು. ಆ ಮೂಲಕ 71 ರನ್ ಹಿನ್ನಡೆ ಅನುಭವಿಸಿತು. ನಂತರ, ದ್ವಿತೀಯ ಇನಿಂಗ್‌ಸ್‌ ಆರಂಭಿಸಿದ ಭಾರತ ಭೋಜನ ವಿರಾಮದ ವೇಳೆಗೆ 14 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆೆ 35 ರನ್ ಗಳಿಸಿದೆ. ಒಟ್ಟಾರೆ ಭಾರತ 106 ರನ್ ಮುನ್ನಡೆ ಪಡೆದಿದೆ.
ಇಂದು ಬೆಳಗ್ಗೆೆ ಬ್ಯಾಟಿಂಗ್‌ಗೆ ಇಳಿದ ಎಸ್. ಮುತ್ತುಸ್ವಾಮಿ ಹಾಗೂ ಕೇಶವ್ ಮಹರಾಜ್ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಕೇವಲ ಒಂಬತ್ತು ರನ್ ಗಳಿಸಿ ಕೇಶವ್ ಮಹರಾಜ್ ಅವರು ಆರ್.ಅಶ್ವಿನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ, ಜತೆಯಾದ ಮುತ್ತುಸ್ವಾಮಿ ಹಾಗೂ ಕಗಿಸೋ ರಬಡಾ ಜೋಡಿ ಕೊನೆಯ ವಿಕೆಟ್‌ಗೆ ಕೆಲಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಈ ಜೋಡಿ 35 ರನ್ ಗಳಿಸಿತು. 17 ಎಸೆತಗಳಲ್ಲಿ 15 ರನ್ ಗಳಿಸಿದ್ದ ರಬಡಾ ಅವರನ್ನು ಅಶ್ವಿನ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.
ಕಾಡಿದ ಮುತ್ತುಸ್ವಾಮಿ:
ಕೊನೆಯ ಹಂತದಲ್ಲಿ ಎಸ್. ಮುತ್ತುಸ್ವಾಮಿ ಭಾರತ ಬೌಲರ್‌ಗಳಿಗೆ ಕಾಡಿದರು. ಭಾರತದ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳದ ಅವರು ಸಮಯೋಜಿತವಾಗಿ ಬ್ಯಾಟಿಂಗ್ ಮಾಡಿದರು. 106 ಎಸೆತಗಳನ್ನು ಆಡಿದ ಅವರು ನಾಲ್ಕು ಬೌಂಡರಿಯೊಂದಿಗೆ 33 ರನ್ ಗಳಿಸಿ ಅಜೇಯರಾಗಿ ಉಳಿದರು.
ಶ್ರೇಷ್ಠ ಬೌಲಿಂಗ್ ಮಾಡಿದ ಅಶ್ವಿನ್:
ಭಾರತ ತಂಡ ಪ್ರಥಮ ಇನಿಂಗ್ಸ್‌‌ನಲ್ಲಿ ಮುನ್ನಡೆ ಸಾಧಿಸುವಲ್ಲಿ ಆರ್. ಅಶ್ವಿನ್ ಅವರ ಪಾತ್ರ ಅಮೋಘವಾದದ್ದು. ಶುಕ್ರವಾರ ಐದು ಗೊಂಚಲು ವಿಕೆಟ್ ಪಡೆದಿದ್ದ ಅಶ್ವಿನ್, ಶನಿವಾರವೂ ಉಳಿದಿದ್ದ ಎರಡು ವಿಕೆಟ್‌ಗಳನ್ನು ತನ್ನ ತೆಕ್ಕೆೆಗೆ ಹಾಕಿಕೊಂಡರು. ಒಟ್ಟು 46.2 ಓವರ್ ಬೌಲಿಂಗ್ ಮಾಡದ ಅವರು, 145 ರನ್ ನೀಡಿ ಏಳು ವಿಕೆಟ್ ಪಡೆದುಕೊಂಡರು. ಇದರಲ್ಲಿ 11 ಮೆಡಿನ್ ಓವರ್‌ಗಳು ಒಳಗೊಂಡಿವೆ.
ಬೇಗ ನಿರ್ಗಮಿಸಿದ ಮಯಾಂಕ್:
71 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡದ ಪರ ಕಳೆದ ಇನಿಂಗ್ಸ್‌‌ನಲ್ಲಿ ಶತಕ ಸಿಡಿಸಿದ್ದ ಮಯಾಂಕ್ ಅಗರ್ವಾಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕೆೆ ಇಳಿದರು. 31 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್ವಾಲ್ ಅವರು ಕೇವಲ ಏಳು ರನ್ ಗಳಿಸಿ ಕೇಶವ್ ಮಹರಾಜ್‌ಗೆ ವಿಕೆಟ್ ಒಪ್ಪಿಸಿದರು. ಬ್ಯಾಟಿಂಗ್ ಲಯ ಮುಂದುವರಿಸಿದ ರೋಹಿತ್ ಶರ್ಮಾ ಅವರು 33 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಚೇತೇಶ್ವರ ಪೂಜಾರ ಅಜೇಯ ಎರಡು ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್‌: 502 (ಡಿ)
ದ್ವಿತೀಯ ಇನಿಂಗ್ಸ್‌: 14 ಓವರ್‌ಗಳಲ್ಲಿ 35/1 (ರೋಹಿತ್ ಶರ್ಮಾ ಅಜೇಯ 25; ಕೇಶವ್ ಮಹರಾಜ್ 31 ಕ್ಕೆೆ 1)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್‌: 131.2 ಓವರ್‌ಗಳಲ್ಲಿ 431/10 (ಡೀನ್ ಎಲ್ಗರ್ 160, ಡಿ ಕಾಕ್ 111, ಫಾಫ್ ಡುಪ್ಲೆೆಸಿಸ್ 55, ಎಸ್.ಮುತ್ತುಸ್ವಾಮಿ ಔಟಾಗದೆ 33; ಆರ್. ಅಶ್ವಿನ್ 145ಕ್ಕೆೆ 7, ರವೀಂದ್ರ ಜಡೇಜಾ 124ಕ್ಕೆೆ 2)

loading...