ಚೀನಾ ಓಪನ್: ಮರ್ರೆೆ ಔಟ್, ಒಸಾಕ, ಬಾರ್ಟಿ ಸೆಮಿಫೈನಲ್‌ಗೆ

0
14

ಬೀಜಿಂಗ್:- ಇಲ್ಲಿ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಟೂರ್ನಿಯಿಂದ ಆ್ಯಂಡಿ ಮರ್ರೆೆ ನಿರ್ಗಮಿಸಿದ್ದು, ಆ್ಯಶ್ಲೆೆ ಬಾರ್ಟಿ ಹಾಗೂ ನವೋಮಿ ಒಸಾಕ ಅವರು ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ ಆ್ಯಶ್ಲೆೆ ಬಾರ್ಟಿ ಅವರು ಪೆಟ್ರಾ ಕ್ವಿಟೋವಾ ವಿರುದ್ಧ ಮೊದಲನೇ ಸೆಟ್‌ನಲ್ಲಿ 4-6 ಅಂತರದಲ್ಲಿ ಸೋತರೂ ನಂತರ 6-4, 6-3 ಅಂತರದಲ್ಲಿ ಗೆದ್ದು ಚೀನಾ ಓಪನ್ ಸೆಮಿಫೈನಲ್‌ಗೆ ಲಗ್ಗೆೆ ಇಟ್ಟರು.
ಬಾರ್ಟಿ ಅವರು ಮುಂದಿನ ಸುತ್ತಿನ ಪಂದ್ಯದಲ್ಲಿ ಕಿಕಿ ಬರ್ಟನ್ಸ್‌ ವಿರುದ್ಧ ಸೆಣಸಲಿದ್ದಾರೆ. ಬರ್ಟನ್ಸ್‌ ಅವರು ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಲೀನಾ ಸ್ವಿಟೋಲಿನಾ ವಿರುದ್ಧ 7-6 (6), 6-2 ಅಂತರದಲ್ಲಿ ಗೆದ್ದಿದ್ದರು.
ಮತ್ತೊಂದು ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನವೋಮಿ ಒಸಾಕ ಅವರು ಬಿಯಾಂಕ ಆ್ಯಂಡ್ರಿಸ್ಕು ವಿರುದ್ಧ 5-7, 6-3, 6-4 ಅಂತರದಲ್ಲಿ ಗೆದ್ದು ಸೆಮಿಫೈನಲ್ ತಲುಪಿದ್ದಾರೆ.
ಸೊಂಟದ ಶಸ್ತ್ರ ಚಿಕೆತ್ಸೆೆ ಬಳಿಕ ಚೀನಾ ಓಪನ್‌ಗೆ ಮರಳಿದ್ದ ಆ್ಯಂಡಿ ಮರ್ರೆೆ ಅವರು ಕ್ವಾರ್ಟರ್ ಪೈನಲ್‌ವರೆಗೂ ಅದ್ಭುತ ಪ್ರದರ್ಶನ ತೋರಿ ಯಶ ಕಂಡಿದ್ದರು. ಆದರೆ, ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಟೂರ್ನಿಯ ಅಗ್ರ ಕ್ರಮಾಂಕದ ಆಟಗಾರ ಡೊಮಿನಿಚ್ ಥೀಮ್ ವಿರುದ್ಧ 2-6, 6-7 (3) ಅಂತರದಲ್ಲಿ ಮರ್ರೆೆ ಸೋಲು ಅನುಭವಿಸಿ ಚೀನಾ ಓಪನ್ ಅಭಿಯಾನ ಮುಗಿಸಿದರು.
ಡೊಮಿನಿಚ್ ಥೀಮ್ ಅವರು ಸೆಮಿಫೈನಲ್ ಹಣಾಹಣಿಯಲ್ಲಿ ಕರೆನ್ ಖಾಚ್ನೋವ್ ವಿರುದ್ಧ ಸೆಣಸಲಿದ್ದಾರೆ. ಕರೆನ್ ಅಂತಿಮ ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಇಟಲಿಯ ಫ್ಯಾಬಿಯೊ ಫೊಗ್ನೋನಿ ಅವರ ವಿರುದ್ಧ 3-6, 6-3, 6-1 ಅಂತರದಲ್ಲಿ ಗೆದ್ದಿದ್ದರು.
ಮೂರನೇ ಶ್ರೇಯಾಂಕದ ಸಿಟ್ಸಿಪಸ್ ಅವರು ಜಾನ್ ಐಸ್ನರ್ ವಿರುದ್ಧ 7-6 (3), 6-3 ಅಂತರದಲ್ಲಿ ಜಯ ಸಾಧಿಸಿದ್ದಾಾರೆ. ಅವರು ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.

loading...