ಹೆಣ್ಣು ಮಗುವಿಗೆ ತಂದೆಯಾದ ರಹಾನೆ

0
17

ನವದೆಹಲಿ:- ಭಾರತ ತಂಡದ ಬ್ಯಾಟ್ಸ್‌‌ಮನ್ ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕಾ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಉಪ ನಾಯಕ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.
31ರ ಪ್ರಾಯದ ಅಜಿಂಕ್ಯಾ ರಹಾನೆ ಅವರು ಸದ್ಯ ವಿಶಾಖಪಟ್ಟಣಂನ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿದ್ದಾರೆ.
ರಹಾನೆ ಹಾಗೂ ಅವರ ಕುಟುಂಬಕ್ಕೆೆ ಹೊಸ ಅತಿಥಿ ಆಗಮಿಸಿರುವ ಹಿನ್ನೆೆಲೆಯಲ್ಲಿ ಮಾಜಿ ಸಹ ಆಟಗಾರ ಹರಭಜನ್ ಸಿಂಗ್ ಅವರು ಟ್ವಿಟರ್‌ನಲ್ಲಿ ಮುಂಬೈ ಬ್ಯಾಟ್ಸ್‌‌ಮನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಜಿಂಕ್ಯಾ ರಹಾನೆ ಅವರು 2014ರಲ್ಲಿ ಬಾಲ್ಯದ ಗೆಳತಿ ರಾಧಿಕಾ ಅವರನ್ನು ವರಿಸಿದ್ದರು. ಕಳೆದ ಜುಲೈನಲ್ಲಿ ಹಲವು ಫೋಟೊಗಳ ಮೂಲಕ ರಹಾನೆ ದಂಪತಿಗಳು ಗರ್ಭಧಾರಣೆ ಬಗ್ಗೆೆ ಸುದ್ದಿ ನೀಡಿದ್ದರು.
ಅಜಿಂಕ್ಯಾ ರಹಾನೆ ಭಾರತದ ಪರ 58 ಟೆಸ್ಟ್‌, 90 ಏಕದಿನ ಹಾಗೂ 20 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ.

loading...