ರಾಹುಲ್‌ ಗಾಂಧಿ ವಿದೇಶ ಪ್ರಯಾಣ: ಕೈ ನಾಯಕರ ಕಂಗಾಲು.!

0
6

ನವದೆಹಲಿ- ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿಯಿರುವಾಗಲೇ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಯುವ ನಾಯಕ ರಾಹುಲ್‌ ಗಾಂಧಿ ಬ್ಯಾಂಕಾಕ್‌ಗೆ ಪ್ರವಾಸ ಹೊರಟಿರುವುದು ಕೈ ನಾಯಕರನ್ನು ಕಂಗಾಲಾಗುವಂತೆ ಮಾಡಿದೆ.!
ಎರಡೂ ರಾಜ್ಯಗಳಲ್ಲಿ ಪ್ರಮುಖ ನಾಯಕರ ನಡುವೆ ಭಿನ್ನಮತ ಹೆಚ್ಚಾಗುತ್ತಿರುವ ಕಾರಣ ರಾಹುಲ್‌ ವಿದೇಶಕ್ಕೆ ಹೊರಟಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಹರಿಯಾಣ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅಶೋಕ್‌ ತನ್ವಾರ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯವಾಗಿ ಬಹಳ ದೊಡ್ಡ ಹೊಡೆತ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಮಹಾರಾಷ್ಟ್ರ ನಾಯಕ ಸಂಜಯ್‌ ನಿರುಪಮ್‌ ಸಹ ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದರು.

ಚುನಾವಣಾ ಅಭ್ಯರ್ಥಿಗಳ ಆಯ್ಕೆಯಲ್ಲಿ ತಾವು ಯಾವುದೇ ಪಾತ್ರ ವಹಿಸುವುದಿಲ್ಲ. ಆದರೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿ ರಾಹುಲ್ ಹೇಳಿದ್ದರು. ಇದು ಕಾರ್ಯಕರ್ತರನ್ನು ಮತ್ತೊಂದು ಕಡೆ ನಾಯಕರನ್ನು ಕಂಗಾಲಾಗುವಂತೆ ಮಾಡಿದೆ ಎನ್ನಲಾಗಿದೆ.

loading...