ಶಮಿ, ಜಡೇಜಾ ಮಿಂಚು: ಭಾರತಕ್ಕೆೆ 203 ರನ್‌ಗಳ ಭರ್ಜರಿ ಜಯ

0
9

ವಿಶಾಖಪಟ್ಟಣಂ:-ಮೊಹಮ್ಮದ್ ಶಮಿ (35 ಕ್ಕೆೆ 3) ಅವರ ಮಾರಕ ದಾಳಿ ಹಾಗೂ ರವೀಂದ್ರ ಜಡೇಜಾ (87 ಕ್ಕೆೆ 4) ಅವರ ಸ್ಪಿನ್ ಮೋಡಿಯ ನೆರೆವಿನಿಂದ ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 203 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಮುನ್ನಡೆ ಪಡೆಯಿತು.
ಇಲ್ಲಿನ ಡಾ.ವೈ.ಎಸ್ ರಾಜಶೇಖರ್ ಕ್ರೀಡಾಂಗಣದಲ್ಲಿ ಭಾನುವಾರ 11 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 384 ರನ್ ಅಗತ್ಯವಿತ್ತು. ಆದರೆ, ಭಾರತದ ಶಿಸ್ತುಬದ್ಧ ದಾಳಿ ಎದುರಿಸಲಾಗದ ಆಫ್ರಿಕಾ, 63.5 ಓವರ್‌ಗಳಿಗೆ 191 ರನ್‌ಗಳಿಗೆ ತನ್ನೆೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 203 ರನ್‌ಗಳಿಂದ ಸೋಲು ಒಪ್ಪಿಕೊಂಡಿತು.
ಭಾನುವಾರ ಬೆಳಗ್ಗೆೆ ಕ್ರೀಸ್‌ಗೆ ಬಂದ ಏಡೆನ್ ಮರ್ಕರಮ್ ಹಾಗೂ ಥ್ಯೂನಿಸ್ ಡಿ ಬ್ರೂಯಿನ್ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆರ್. ಅಶ್ವಿನ್ ಬಿಡಲಿಲ್ಲ. 10 ರನ್ ಗಳಿಸಿ ಆಡುತ್ತಿದ್ದ ಬ್ರೂಯಿನ್ ಅವರನ್ನು ಅಶ್ವಿನ್ ಕ್ಲೀನ್ ಬೌಲ್ಡ್‌ ಮಾಡಿದರು.
ನಂತರ, ಕ್ರೀಸ್‌ಗೆ ಬಂದ ತೆಂಬಾ ಬವುಮಾ ಅವರನ್ನು ಮೊಹಮ್ಮದ್ ಶಮಿ ಶೂನ್ಯಕ್ಕೆೆ ಕ್ಲೀನ್ ಬೌಲ್ಡ್‌ ಮಾಡಿದರು. ಕಳೆದ ಇನಿಂಗ್ಸ್‌‌ನಲ್ಲಿ ಅರ್ಧ ಶತಕ ಸಿಡಿಸಿದ್ದ ನಾಯಕ ಫಾಫ್ ಡುಪ್ಲೆಸಿಸ್ ಅವರು 13 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, ಅದ್ಭುತ ಲೈನ್ ಅಂಡ್ ಲೆಂಗ್ತ್‌ ಬೌಲಿಂಗ್ ಮಾಡುತ್ತಿದ್ದ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್‌ ಆಗಿ ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ನಂತರ, ಕ್ರೀಸ್‌ಗೆ ಬಂದ ಡಿ ಕಾಕ್ ಅವರು ಕೂಡ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್‌ ಆದರು.
ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದ ಆರಂಭಿಕ ಬ್ಯಾಟ್ಸ್‌‌ಮನ್ ಏಡೆನ್ ಮರ್ಕರಮ್ ಅವರು ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುತ್ತಿದ್ದರು. 74 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ ಐದು ಬೌಂಡರಿಯೊಂದಿಗೆ 39 ರನ್ ಗಳಿಸಿ ಮುನ್ನಗ್ಗುತ್ತಿದ್ದರು. ಈ ವೇಳೆ 27ನೇ ಓವರ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ, ಕೆರಳಿಸುವ ಎಸೆತ ಹಾಕುವ ಮೂಲಕ ಮರ್ಕರಮ್ ಕ್ಯಾಚ್ ಅನ್ನು ಅವರೇ ಸ್ವತಃ ಹಿಡಿದರು. ನಂತರ, ಇದೇ ಓವರ್‌ನ ನಾಲ್ಕನೇ ಹಾಗೂ ಐದನೇ ಎಸೆತದಲ್ಲಿ ವೆರ್ನಾನ್ ಫಿಲೆಂಡರ್ ಹಾಗೂ ಕೇಶವ್ ಮಹರಾಜ್ ಅವರನ್ನು ಶೂನ್ಯಕ್ಕೆೆ ಔಟ್ ಮಾಡಿದರು.
ಕಾಡಿದ ಮುತ್ತುಸ್ವಾಮಿ-ಪಿಡ್ತ್‌ ಜೋಡಿ:
ಒಂಬತ್ತನೇ ವಿಕೆಟ್‌ಗೆ ಜತೆಯಾಗಿರುವ ಎಸ್. ಮುತ್ತುಸ್ವಾಮಿ ಹಾಗೂ ಡೇನ್ ಪಿಡ್ತ್‌ ಜೋಡಿ ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿತು. ಈ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಮಯ ಕಳೆಯಿತು. ಒಂಬತ್ತನೇ ವಿಕೆಟ್‌ಗೆ ಈ ಜೋಡಿ 91 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಸಮೀಪ ತಲುಪಿಸಿತು. ಅಲ್ಲದೇ, ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಅಮೋಘ ಬ್ಯಾಟಿಂಗ್ ಮಾಡಿದ ಡೇನ್ ಪಿಡ್ತ್‌ ಭಾರತದ ಬೌಲರ್‌ಗಳನ್ನು ಎಚ್ಚರಿಕೆಯಿಂದ ಆಡಿದರು. ಯಾವುದೇ ಭೀತಿಯಿಲ್ಲದೆ ಸಮಚಿತ್ತದಲ್ಲಿ ಬ್ಯಾಟ್ ಬೀಸಿದರು. 107 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸರ್ ಹಾಗೂ ಒಂಬತ್ತು ಬೌಂಡರಿಯೊಂದಿಗೆ 56 ರನ್ ಗಳಿಸಿ ವೃತ್ತಿ ಜೀವನದ ಚೊಚ್ಚಲ ಅರ್ಧ ಶತಕ ಸಿಡಿಸಿದರು. ನಂತರ ಅವರು ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಲೀನ್ ಬೌಲ್ಡ್‌ ಆದರು.
ನಂತರ, ಬ್ಯಾಟಿಂಗ್ ಮುಂದುವರಿಸಿದ ಎಸ್.ಮುತ್ತುಸ್ವಾಮಿ ತಾಳ್ಮೆೆಯಿಂದ ಬ್ಯಾಟಿಂಗ್ ಮಾಡಿದರು. ಪ್ರಥಮ ಇನಿಂಗ್ಸ್‌‌ನಂತೆ ಈ ಇನಿಂಗ್ಸ್‌‌ನಲ್ಲೂ ತಮ್ಮ ಸಾಮರ್ಥ್ಯಕ್ಕೆೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. 108 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಕಗಿಸೋ ರಬಡಾ 18 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರು.
ಅತ್ಯುತ್ತಮ ಬೌಲಿಂಗ್ ಮಾಡಿದ ಮೊಹಮ್ಮದ್ ಶಮಿ ಐದು ವಿಕೆಟ್ ಗೊಂಚಲು ಪಡೆದರೆ, ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಎರಡೂ ಇನಿಂಗ್ಸ್‌‌ಗಳಲ್ಲಿ ಎರಡು ಶತಕ ಸಿಡಿಸಿ ದಾಖಲೆ ಮಾಡಿದ ಹಿಟ್‌ಮನ್ ರೋಹಿತ್ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಸಂಕ್ಷಿಪ್ತ ಸ್ಕೋರ್
ಭಾರತ ಪ್ರಥಮ ಇನಿಂಗ್ಸ್‌: 502 (ಡಿ) (ಮಯಾಂಕ್ ಅಗರ್ವಾಲ್ 215, ರೋಹಿತ್ ಶರ್ಮಾ 176; ಕೇಶವ್ ಮಹರಾಜ್ 189 ಕ್ಕೆೆ 3)
ದ್ವಿತೀಯ ಇನಿಂಗ್ಸ್‌: 323/4(ಡಿ) (ರೋಹಿತ್ ಶರ್ಮಾ 127, ಚೇತೇಶ್ವರ ಪೂಜಾರ 81, ರವೀಂದ್ರ ಜಡೇಜಾ 40; ಕೇಶವ್ ಮಹರಾಜ್ 129 ಕ್ಕೆೆ 2)
ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್‌: 431 (ಡೀನ್ ಪಿಡ್ತ್‌ 160, ಡಿ ಕಾಕ್ 111, ಫಾಫ್ ಡುಪ್ಲೆೆಸಿಸ್ 55; ಆರ್.ಅಶ್ವಿನ್ 145 ಕ್ಕೆೆ 7, ರವೀಂದ್ರ ಜಡೇಜಾ 124 ಕ್ಕೆೆ 2)
ದ್ವಿತೀಯ ಇನಿಂಗ್ಸ್‌: 63.5 ಓವರ್‌ಗಳಲ್ಲಿ 191/10 (ಏಡೆನ್ ಮರ್ಕರಮ್ 39, ಡೇನ್ ಪಿಡ್ತ್‌ 56, ಎಸ್.ಮುತ್ತುಸ್ವಾಮಿ ಔಟಾಗದೆ 49; ಮೊಹಮ್ಮದ್ ಶಮಿ 35 ಕ್ಕೆೆ 5, ರವೀಂದ್ರ ಜಡೇಜಾ 87 ಕ್ಕೆೆ 4, ಆರ್.ಅಶ್ವಿನ್ 44 ಕ್ಕೆೆ 1)

loading...