ತಾಯಿಯ ಸುರಕ್ಷಿತ, ಆರೈಕೆ ಹೆರಿಗೆಗಾಗಿ ಆರ್ಟಿಸ್ಟ್ ತರಬೇತಿ ಸೂಕ್ತ : ಡಾ. ಹೇಮಾ

0
9

ತಾಯಿಯ ಸುರಕ್ಷಿತ, ಆರೈಕೆ ಹೆರಿಗೆಗಾಗಿ ಆರ್ಟಿಸ್ಟ್ ತರಬೇತಿ ಸೂಕ್ತ : ಡಾ. ಹೇಮಾ
ಬೆಳಗಾವಿ: ತಾಯಿಯ ಸುರಕ್ಷಿತ ಹೆರಿಗೆಗಾಗಿ, ತಾಯ್ತನದ ನಿರೀಕ್ಷೆಯಲ್ಲಿರುವವರಿಗೆ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸಲು ರಾಜ್ಯದ ೧೦ ಜಿಲ್ಲೆಯಲ್ಲಿ ಆರ್ಟಿಸ್ಟ್ ಸಂಸ್ಥೆಯು ತರಬೇತಿ ಸೆಂಟರ್‌ಗಳನ್ನು ನಗರದಲ್ಲಿ ಉದ್ಘಾಟಿಸಲಿದೆ ಎಂದು ಡಾ. ಹೇಮಾ ದಿವಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮಗುವಿನ ಜನನಕ್ಕೆ ತಾಯಿಗೆ ಪೌಷ್ಠಿಕ ಆಹಾರ, ಆರೋಗ್ಯ ವೃದ್ಧಿಗಾಗಿ ಆರೈಕೆ ಬಗ್ಗೆ ತರಬೇತಿಯಲ್ಲಿ ನೀಡಲಾಗುವುದು. ತಾಯಿ ಗರ್ಭಿನಿ ಸಮಯದಲ್ಲಿ ಗುಣಮಟ್ಟದ ಆಹಾರ ಹೇಗೆ ಸೇವಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗುವುದು. ಅದೇ ರೀತಿಯಲ್ಲಿ ತಾಯಿಯ ಸೇವೆ ಮಾಡಲಾಗುವುದು.
ಈಗಾಗಲೇ ೪ ರಾಜ್ಯದ ೨೫ ಜಿಲ್ಲೆಯಲ್ಲಿ ೧೮೦೦ ಆರೋಗ್ಯಸೇವಾ ಪೂರೈಕೆದಾರಿಗೆ ಮಾನ್ಯತೆ ನೀಡಿದ್ದು, ೧೧ ಲಕ್ಷ ಭಾರತೀಯರ ಜೀವನಗಳನ್ನು ಸ್ಪರ್ಶಿಸಿದೆ.
ರಾಜ್ಯದಲ್ಲಿ ಉಪಕ್ರಮದ ಪ್ರಾರಂಭವು ೫ ಲಕ್ಷ ಮಹಿಳೆಯರನ್ನು ತಲುಪುವ ನಿರೀಕ್ಷೆ ಇದೆ. ವಿಶ್ವದಲ್ಲಿ ಭಾರತವು ಅತೀ ಹೆಚ್ಚು ಮಾತೃ ಮರಣ ಸಂಖ್ಯೆ ಹೊಂದಿದ್ದು, ಕಳೆದ ವರ್ಷ ಕರ್ನಾಟಕದಲ್ಲಿ ೨.೫೦೦ ಮಹಿಳೆಯರು ಗರ್ಭಧಾರಣೆ ಸಮಸ್ಯೆಗಳಿಂದ ಮರಣಿಸಿದ್ದಾರೆ. ಅದನ್ನು ತಪ್ಪಿಸಲು ಆರ್ಟಿಸ್ಟ್ ( ಏಷ್ಯನ್ ಸಂಶೋದನಾ ತರಬೇತಿ ಸೆಂಟರ್ ಗಳನ್ನು) ತೆರೆದು ತಾಯಿಯ ಸುರಕ್ಷೆತೆಗಾಗಿ ಶ್ರಮಿಸಿಲಿದೆ ಎಂದರು.

loading...