ಸಿದ್ದರಾಮಯ್ಯ ಆಡಿದ ಮಾತು ಹಿಂಪಡೆಯಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

0
686
ಸಿದ್ದರಾಮಯ್ಯ ಆಡಿದ ಮಾತು ಹಿಂಪಡೆಯಲಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಬೆಳಗಾವಿ:ಸಾರ್ವಕರ ಅವರಿಗೆ ಇಂದಿರಾ ಗಾಂಧಿ ಅವರೇ ಪ್ರಶಂಸೆ ಮಾಡಿದ್ದಾರೆ ಎಂದು ವರದಿ ಹೇಳುತ್ತದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತುಂಬಾ ಅನುಭವಿಗಳು ಸಾವರಕರ ಅವರ ಬಗ್ಗೆ ನೀಡಿರುವ ಹೇಳಿಕೆ ಲಘುವಾಗಿ ಮಾತನಾಡಿದ್ದಾರೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಭಾನುವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಹಿರಿಯರಾದ ಹಿನ್ನೆಲೆಯಲ್ಲಿ ಅವರನ್ನ ಟಿಕೆ ಮಾಡಲು ಹೋಗಿಲ್ಲ. ಆದರೆ ಅವರು ಆಡಿತ ಮಾತು ಹಿಂಪಡೆದರೆ ಅವರ ಬಗ್ಗೆ ಗೌರವ ಹೆಚ್ಚಾಗುತ್ತದೆ.
ದಿನೇಶ್ ಗುಂಡೂರಾವ್ ಬಿಜೆಪಿಯ ಕಾರ್ಯವೈಕರಿಯನ್ನು ಪ್ರಶಂಸಿಸುವ ಸ್ಥಾನದಲ್ಲಿ ಇಲ್ಲ. ಅವರು ಟೀಕೆ ಮಾಡುತ್ತಾರೆ.
ಕರ್ನಾಟಕದಲ್ಲಿ ನೆರೆ ಪರಿಹಾರಕ್ಕೆ‌ ಪ್ರಧಾನಿ ನರೇಂದ್ರ ಮೋದಿ ಅವರು 1200ಕೋಟಿ ರು. ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಸೇರಿದಂತೆ ಸುಮಾರು 10ರಾಜ್ಯದಲ್ಲಿ ಪ್ರವಾಹದ ಪ್ರಕರತೆ ಹೆಚ್ಚಿದೆ. ದಿನೇಶ್ ಗುಂಡೂರಾವ್ ಅವರ ಹೇಳಿಕೆಯಂತೆ ಈ‌ ಹಿಂದೆ 1300 ಕೋಟಿ ರು. ತೆಗೆದುಕೊಂಡು ಬಂದಿದ್ದರು.ಅದು ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರಕಾರ ಇದ್ದಾಗ ಕೊಟ್ಟಿದ್ದಾರೆ. ಅದು ಪ್ರಥಮ ಕಂತನಿನಲ್ಲಿ ಕೊಟ್ಟಿದ್ದು ಕೇವಲ 500 ಕೋಟಿ ರು. ನಂತರ ಹಣ ಬಿಡುಗಡೆ ಮಾಡಿದ್ದಾರೆ. ಮೊದಲು ಅದನ್ನು ಅವರು ಮನವರಿಕೆ ಮಾಡಿಕೊಳ್ಳಲಿ..
ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಎರಡನೇ ಹಂತದಲ್ಲಿ ನೆರೆ ಪರಿಹಾರ ಬಿಡುಗಡೆ ಮಾಡಲಿದ್ದಾರೆ. ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ‌ ಸಚಿವ ಶಾಸಕರು ನೆರೆಯ ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು.
loading...