ಕುಹಕದ ಮಾತುಗಳನ್ನಾಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು : ಸದಾನಂದಗೌಡ

0
8

ಬೆಂಗಳೂರು- ಕುಹಕ,ವಕ್ರದ ಮಾತುಗಳನ್ನು ಆಡುವುದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಸ್ಸೀಮರು, ಗೂಬೆ ಕೂರಿಸುವುದರಲ್ಲಿ ಅವರು ಎತ್ತಿದ ಕೈ ಎಂದು ಕೇಂದ್ರ ಸಚಿವ ಸದಾನಂದ ಗೌಡ ಕಿಡಿಕಾರಿದ್ದಾರೆ.

ಬೆಂಗಳೂರಿನ ಹೆಸರಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಓರ್ವ ದೇಶಭಕ್ತ, ಆದರೆ ಯಾವುದೋ ವಿಚಾರವನ್ನು ಇನ್ನೊಂದು ವಿಚಾರಕ್ಕೆ ತಳುಕು ಹಾಕಿ ಜನರನ್ನ ಗೊಂದಲಕ್ಕೀಡು ಮಾಡುವುದು,ತಲೆಯನ್ನು ಹಾಳು ಮಾಡುವ ಪ್ರವೃತ್ತಿ ಯಾರಿಗೂ ಶೋಭೆ ತರುವಂತದ್ದಲ್ಲ.ಗೂಬೆ ಕೂರಿಸು ವುದು, ಕುಹಕ ಹಾಗೂ ವಕ್ರದ ಮಾತುಗಳನ್ನು ಆಡುವುದರಲ್ಲಿ ಸಿದ್ದರಾಮಯ್ಯ ಅವರು ನಿಸ್ಸೀಮರು ಎಂದು ಅವರು ಆರೋಪಿಸಿದರು.

“ಸಾವರ್ಕರ್​ ಅವರ ಹೋರಾಟಕ್ಕೆ ಅಂಡಮಾನ್​ ನಿಕೋಬಾರ್​ನಲ್ಲಿರುವ ಸೆಲ್ಯೂ ಲಾರ್​ ಜೈಲು ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಬೇಕಿದ್ದರೆ ಒಮ್ಮೆ ಅಂಡಮಾನ್ ನಿಕೋಬಾರ್ ಗೆ ಹೋಗಿ ಬರಲಿ, ಸಾರ್ವಜನಿಕರಿಂದ ಹಣ ಪಡೆದು ನಾವೇ ಕಳುಹಿಸಿ ಕೊಡುತ್ತೇವೆ ಎಂದು ಅವರು ಲೇವಡಿ ಮಾಡಿದರು.

ನೆರೆ ಪರಿಹಾರ ಕಾರ್ಯಕ್ಕೆ ಈಗಾಗಲೇ ಒಂದು ಹಂತದ ಹಣ ಬಿಡುಗಡೆ ಮಾಡಲಾ ಗಿದೆ.ಬಾಕಿ ಹಣದ ವಿಚಾರವಾಗಿ ಎಲ್ಲಾ ಕಾರ್ಯಗಳು ನಡೆದಿವೆ.ಕೇಂದ್ರ ಸರ್ಕಾರಕ್ಕೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ.ಮುಂದಿನ ಹಂತದಲ್ಲಿ ಹಣ ಬಿಡುಗಡೆಯಾಗಲಿದೆ.ಪ್ರಸ್ತುತ ಕರ್ನಾಟಕ ಹಾಗೂ ಬಿಹಾರ ರಾಜ್ಯಕ್ಕೆ ಪ್ರಥಮವಾಗಿ ಹಣ ಬಿಡುಗಡೆಯಾಗಿದೆ.ಆದರೆ, ಬಿಹಾರಕ್ಕೆ 400 ಕೋಟಿಯಾದರೆ ಕರ್ನಾಟಕಕ್ಕೆ 1200 ಕೋಟಿ ಪರಿಹಾರದ ಹಣ ಬಿಡುಗಡೆಯಾಗಿದೆ. ಆದರೆ, ಮಹದಾಯಿ ಹೋರಾ ಟದ ವಿಚಾರಕ್ಕೆ ಉತ್ತರಿಸಲು ಸದಾನಂದ ಗೌಡ ಅವರು ನಿರಾಕರಿಸಿದರು.

loading...