ನಾಡಿಗೆ ಶಾಂತಿ, ಜ್ಞಾನ ಉಣಬಡಿಸಿದವರು ನಾರಾಯಣ ಗುರು: ಕೋಟಾ ಶ್ರೀನಿವಾಸ ಪೂಜಾರಿ

0
10

165 ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ
ನಾಡಿಗೆ ಶಾಂತಿ, ಜ್ಞಾನ ಉಣಬಡಿಸಿದವರು ನಾರಾಯಣ ಗುರು: ಕೋಟಾ ಶ್ರೀನಿವಾಸ ಪೂಜಾರಿ
ಬೆಳಗಾವಿ: ನಾರಾಯಣ ಗುರುಗಳ ಜೀವನಾದರ್ಶ ನಮಗೆ ದಾರಿದೀಪ ಆಗಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಮುಜರಾಯಿ, ಮೀನುಗಾರಿಕೆ ಹಾಗೂ ಜಲಸಾರಿಗೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಮಾಣಿಕಬಾಗ್ ದಿಗಂಬರ ಜೈನ್ ಬೋರ್ಡಿಂಗ್ ಸಭಾಭವನದಲ್ಲಿ ರವಿವಾರ (20 ರಂದು) ಬಿಲ್ಲವರ ಅಸೋಸಿಯೇಶನ್ ಹಾಗೂ ಶಿವಗಿರಿ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ, 165 ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ನಿಮಿತ್ತ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿಗೆ ಶಾಂತಿ, ಜ್ಞಾನವನ್ನು ಉಣಬಡಿಸಿದವರು ನಾರಾಯಣ ಗುರುಗಳು. ಇಂದಿನ ಯುವಕರು ಜ್ಞಾನದೆಡೆಗೆ ಸಾಗಬೇಕು. ಆದರೆ, ಜಪ, ತಪಗಳಲ್ಲಿ ಕಾಲಕಳೆಯುತ್ತಿದ್ದಾರೆ. ಅಜ್ಞಾನದಿಂದ ಎನೂ ಸಾಧಿಸಲು ಸಾಧ್ಯವಿಲ್ಲ ಎಂದರು.


ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಕಾಣದ ದೇವರ ಪೂಜೆಗಿಂತ ಜೀವಂತ ಇರುವ ಮನುಷ್ಯನನ್ನು ಪ್ರೀತಿಸಿ ಇದೇ ನಿಜವಾದ ಧರ್ಮ, ಕರ್ಮಗೈದು ಧರ್ಮದೆಡೆಗೆ ಸಾಗಿದರೆ ಫಲ ಸಿಗಲು ಸಾಧ್ಯವಿಲ್ಲ. ನಿನ್ನ ಕಾಯಕದಿಂದ ಸಕಲವನ್ನು ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸುನಿಲ್ ಪೂಜಾರಿ, ಶಿವಗಿರಿ ಕೋ ಆಪರೇಟಿವ್ ಸೊಸೈಟಿ ಸುಜನ್ ಕುಮಾರ್, ಚಂದ್ರಶೇಖರ ಎಸ್ ಪೂಜಾರಿ, ಚಂದ್ರ ಎಚ್ ಪೂಜಾರಿ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರು ವಿಜಯ್ ಸಾಲಿಯಾನ್, ಸುಂದರ ಕೋಟ್ಯಾನ್, ಸುಧೀರ್ ಕುಮಾರ್ ಸಾಲಿಯಾನ್, ಮಹಿಳಾ ಘಟಕದ ಸಂಚಾಲಕರು ಚಂದ್ರಾವತಿ ಪೂಜಾರಿ ಅಧ್ಯಕ್ಷರು,ಸಂತೋಷ್ ಪೂಜಾರಿ, ನಾರಾಯಣ ನಾಯಕ, ಗಣೇಶ್ ಪೂಜಾರಿ ಹಾಗೂ ಉಪಸ್ಥಿತರಿದ್ದರು.

loading...